»   » ಚಿತ್ರರಂಗದ ವಿರುದ್ಧ ಬೆರಳು ಮಾಡೋರ ಮೇಲೆ ಶಿವಣ್ಣ ಗರಂ

ಚಿತ್ರರಂಗದ ವಿರುದ್ಧ ಬೆರಳು ಮಾಡೋರ ಮೇಲೆ ಶಿವಣ್ಣ ಗರಂ

Posted By:
Subscribe to Filmibeat Kannada

ಮಹದಾಯಿ ನದಿ ನೀರು ಹಂಚಿಕೆ ವಿಚಾರವಾಗಿ ರೈತರ ಪ್ರತಿಭಟನೆ ತೀವ್ರವಾಗಿದ್ದು, ರೈತರಿಗೆ ಕನ್ನಡ ಚಿತ್ರರಂಗ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದೆ. ಈ ಸಂಬಂಧ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಇಂದು ಸುದ್ದಿಗೊಷ್ಠಿ ನಡೆಸಿದ ಕಲಾವಿದರು ಹೋರಾಟಕ್ಕೆ ಸದಾ ಸಿದ್ದವೆಂದು ಶಪತ ಮಾಡಿದ್ದಾರೆ.

ಈ ವೇಳೆ ಮಾತನಾಡಿದ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಆಕ್ರೋಶ ವ್ತಕ್ತಪಡಿಸಿದರು. ''ನನಗೆ ಒಂದು ಅರ್ಥವಾಗ್ತಿಲ್ಲ. ಇಲ್ಲಿ ನೀವು ದಡ್ಡರಾ? ಅಥವಾ ನಾವು ದಡ್ಡರಾ. ನಾವು ಮಾಡೋದೆ ಏನಿದೆ? ನಮ್ಮಿಂದ ಏನಾಗುತ್ತೆ. ಸಮಸ್ಯೆ ಬಗೆಹರಿಸಬೇಕಾಗಿರವವರೇ ಬೇರೆ. ನಾವು ರೈತರಿಗೆ ಬೆಂಬಲ ಕೊಡ್ತಿವಿ. ಅವರು ಎಲ್ಲಿ ಕರೆದರು ಹೋಗಿ ಹೋರಾಟ ಮಾಡಲು ಸಿದ್ದರಿದ್ದೇವೆ ಎಂದು ಗರಂ ಆದರು.

ಈ ವೇಳೆ ನಟ ಜಗ್ಗೇಶ್, ಪ್ರಥಮ್, ನಟಿ ಶ್ರುತಿ ಹಾಗೂ ನಿರ್ಮಾಪಕ ಶ್ರೀಕಾಂತ್ ಸುದ್ದಿಗೋಷ್ಠಿಯಲ್ಲಿ ಭಾಗಿಯಾಗಿದ್ದರು. ಶಿವರಾಜ್ ಕುಮಾರ್ ಮಾತನಾಡಿರುವುದನ್ನ ಪೂರ್ತಿ ತಿಳಿಯಲು ಮುಂದೆ ಓದಿ.....

ಎಲ್ಲದಕ್ಕು ಯಾಕೆ ಕಲಾವಿದರು ಬರಬೇಕು

''ಎಲ್ಲದಕ್ಕು ಕಲಾವಿದರನ್ನ ಕರಿಯಬೇಡಿ. ಸಿನಿಮಾ ನೋಡೋಕೆ ಜನ ಬೇಕು. ಈಗ ಬೇಡ್ವಾ. ಈಗ ಎಲ್ಲಿ ಅಂತ ಕೇಳ್ತೀರಾ? ನಾವು ಏನಾಡ್ಬೇಕು ಅಂತ ಹೇಳಿ. ನಾವು ಮಾಡೋದಕ್ಕೆ ಸಿದ್ದವಾಗಿದ್ದೇವೆ. ಇದು ಯಾರಿಂದಲೂ ಸಾಧ್ಯವಾಗತ್ತೋ ಅವರು ಮಾಡ್ಬೇಕು. ಅವರು ಮಾಡಲಿ. ಉತ್ತರ ಅಲ್ಲೇ ಇದೆ'' - ಶಿವರಾಜ್ ಕುಮಾರ್, ನಟ

''ಮಹದಾಯಿ ಹೋರಾಟಕ್ಕೆ ನಮ್ಮನ್ನು ಮಾತ್ರ ಯಾಕೆ ಕರೆಯುತ್ತೀರಾ'' ಎಂದ ಶಿವಣ್ಣ.!

ಅವರು ಕೊಟ್ಟ ಭಿಕ್ಷೆಯಿಂದ ನಾವು ಸೂಪರ್ ಸ್ಟಾರ್

''ಅವರು ಕೊಟ್ಟ ಭಿಕ್ಷೆಯಿಂದ ನಾವು ಸೂಪರ್ ಸ್ಟಾರ್ ಆಗಿರುವುದು. ಅಪ್ಪಾಜಿ, ಅಮಿತಾಬ್ ಬಚ್ಚನ್, ಶಿವಾಜಿ, ರಜನಿಕಾಂತ್ ಎಲ್ಲರೂ ಅಷ್ಟೇ. ಬನ್ನಿ ಮಂಡ್ಯ, ಮಂಗಳೂರ, ಬಳ್ಳಾರಿ, ಬೆಳಗಾವಿ ಎಲ್ಲ ಕಡೆಯಿಂದಲೂ ಬರಬೇಕು. ನಾನು ಯಾವ ಪಾರ್ಟಿಯೂ ಇಲ್ಲ. ಜನರಿಗೋಸ್ಕರವೇ ನಾವಿರೋದು'' -ಶಿವರಾಜ್ ಕುಮಾರ್, ನಟ

ಮಹದಾಯಿ ಹೋರಾಟಗಾರರ ಬೆಂಬಲಕ್ಕೆ ನಿಂತ ಕನ್ನಡ ಸಿನಿಮಾರಂಗ

ನಮ್ಮಿಂದ ಸಮಸ್ಯೆ ಬಗೆಹರಿಸಲು ಸಾಧ್ಯವಿಲ್ಲ

''ಹೋರಾಟಕ್ಕೆ ಬಣ್ಣ ಹಚ್ಕೊಂಡು ಹೋಗಬಾರದು. ನಾವು ಹೋಗಿ ಸುಮ್ನೆ ಕೂತ್ಕೊಂಡ್ರೆ ಸಮಸ್ಯೆ ಬಗೆಹರಿಯುತ್ತಾ. ನೀವೇ ಹೇಳಿ ಹೋಗ್ಬೇಕಾ ನಾವು, ಸರಿ ನಾನು ಹೋಗಿ ಕೂತ್ಕೋತೀನಿ. ಆದ್ರೆ ಏನಾಗುತ್ತೆ ಜನ ಬರ್ತಾರೆ ಸೆಲ್ಫಿ ತಗೋತಾರೆ'' ಎಂದು ಚಿತ್ರರಂಗವನ್ನ ಬೆರಳು ಆಡಿ ತೋರಿಸುತ್ತಿರುವವರ ವಿರುದ್ಧ ನಟ ಶಿವರಾಜ್ ಕುಮಾರ್ ಗರಂ ಆದರು.

'ಮಹದಾಯಿ' ಸಮಸ್ಯೆ ನಿವಾರಣೆಗೆ ಪ್ರಜಾಕಾರಣಿ ಉಪ್ಪಿ ಕೊಟ್ಟ ಈ ಸಲಹೆ ಒಮ್ಮೆ ಕೇಳಿ!

ಹೋರಾಟಕ್ಕೆ ಎಲ್ಲರೂ ಬರ್ತಿವಿ

''ನಾವು ಕೂಡ ಸಾಮಾನ್ಯ ಮನುಷ್ಯರೇ. ಹೋರಾಟ ಅಂದ್ರೆ ಎಲ್ಲಿಗೆ ಬೇಕಾದರೂ ಕರೆಯಿರಿ. ಚಿತ್ರರಂಗದವರು ಸುಮ್ಮನೆ ಕೂತಿಲ್ಲ. ನೀವೆ ಒಂದು ದಿನಾಂಕ ಕೊಡಿ. ನಾವು ಅಲ್ಲಿಗೆ ಬರ್ತಿವಿ. ಆ ದಿನ ಎಲ್ಲಾ ಕನ್ನಡ ಚಿತ್ರರಂಗದ ಕಲಾವಿದರು ನರಗುಂದಕ್ಕೆ ಬರಲು ಸಿದ್ದ‌. ನಾನು ಇದಕ್ಕೆ ಗ್ಯಾರಂಟಿ'' - ಶಿವರಾಜ್ ಕುಮಾರ್, ನಟ

ಕಲಾವಿದರು ಬೇರೆ, ರಾಜಕಾರಣಿ ಬೇರೆ

''ಕಲಾವಿದರು ಬೇರೆ, ರಾಜಕೀಯದಲ್ಲಿರುವ ಕಲಾವಿದರು ಬೇರೆ.. ಅವರು ರಾಜಕೀಯದಲ್ಲಿ ಬೆಳೆದಿರೋದು ಅವರ ವೈಯಕ್ತಿಕ. ಜಗ್ಗೇಶ್ ಬಂದಿರೋದು ಕಲಾವಿದರಾಗಿಯೇ ಹೊರತು ರಾಜಕಾರಣಿಯಾಗಿ ಅಲ್ಲ. ಯಾರೋ ಒಬ್ಬರು ಗೊತ್ತಿಲ್ಲದೇ ಮಾತನಾಡುವುದು. ಅದಕ್ಕೆ ಹೆಚ್ಚಿನ ಮಹತ್ವ ನೀಡುವುದು ಬೇಡ'' ಎಂದು ಪರೋಕ್ಷವಾಗಿ ನಟ ಚೇತನ್ ಹೇಳಿಕೆಗೆ ಪ್ರತಿಕ್ರಿಯಿಸಿದರು.

ಮಹದಾಯಿ ಹೋರಾಟಕ್ಕೆ ಬಾರದ ನಟರ ವಿರುದ್ಧ ಸಿಟ್ಟಿಗೆದ್ದ ಚೇತನ್ !

English summary
Kannada actor Shiva Rajkumar spoke about Mahadayi protest at karnataka film chamber. The protest is held by farmers in front of BJP Office Malleshwaram, Bengaluru.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X