»   » ನಿರ್ಮಾಪಕರ ಸತ್ಯಾಗ್ರಹದ ಬಗ್ಗೆ ಶಿವಣ್ಣ ಕೊಟ್ಟ ಉತ್ತರ ಇದು!

ನಿರ್ಮಾಪಕರ ಸತ್ಯಾಗ್ರಹದ ಬಗ್ಗೆ ಶಿವಣ್ಣ ಕೊಟ್ಟ ಉತ್ತರ ಇದು!

Posted By:
Subscribe to Filmibeat Kannada

''ನಿರ್ಮಾಪಕರ ಸಮಸ್ಯೆಗೆ ಕಲಾವಿದರು ಸ್ಪಂದಿಸುತ್ತಿಲ್ಲ. ಎಲ್ಲಾ ಕಲಾವಿದರೂ ನಿರ್ಮಾಪಕರಿಗೆ ಕೈ ಜೋಡಿಸುವವರೆಗೂ, ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವವರೆಗೂ ಪ್ರತಿಭಟನೆ ಕೈಬಿಡಲ್ಲ'', ಅಂತ ಹೇಳ್ತಾ ಕಳೆದ ವಾರದಿಂದ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ನಿರ್ಮಾಪಕರು ಪ್ರತಿಭಟನೆ ನಡೆಸುತ್ತಿದ್ದಾರೆ.

ನಿರ್ಮಾಪಕರ ಧರಣಿ ಕುರಿತು ಇಂದು ಶಿವರಾಜ್ ಕುಮಾರ್ ಪ್ರತಿಕ್ರಿಯೆ ನೀಡಿದರು. ನಗರದ ದೇವಸ್ಥಾನವೊಂದರಲ್ಲಿ ನಡೆದ 'ಖದರ್' ಸಿನಿಮಾ ಮುಹೂರ್ತ ಸಮಾರಂಭದ ವೇಳೆ ಶಿವಣ್ಣ ಹೇಳಿದ್ದು ಹೀಗೆ -

shivarajkumar

''ಕನ್ನಡ ಚಿತ್ರರಂಗದ ಬಗ್ಗೆ ಮಾತನಾಡುವುದಕ್ಕೆ ಎಲ್ಲರಿಗೂ ಧರ್ಮ, ಅಧಿಕಾರ ಇದೆ. ನಾವೊಂದು ಹೇಳುವುದು, ಅವರಿನ್ನೊಂದು ಹೇಳಿ ಸಮಸ್ಯೆ ಆಗುವುದು ಬೇಡ. ಇವತ್ತು ನಾಲ್ಕು ಗಂಟೆಗೆ ವಾಣಿಜ್ಯ ಮಂಡಳಿಯಲ್ಲಿ ಸಭೆ ಇದೆ. ಅಂಬರೀಶ್ ಜೊತೆ ಮೀಟಿಂಗ್ ಮಾಡಿಕೊಂಡು ಮಾತನಾಡುತ್ತೇವೆ. ನಂಗೆ ಅದರ ಬಗ್ಗೆ ಕಾಮೆಂಟ್ ಮಾಡುವುದಕ್ಕೆ ಇಷ್ಟ ಇಲ್ಲ.'' [ಒಗ್ಗೂಡದ ಕಲಾವಿದರ ಬಗ್ಗೆ ನಟ ಜಗ್ಗೇಶ್ ಗರಂ]

''ಆದ್ರೆ ಒಂದಂತೂ ನಿಜ, ಸಿನಿಮಾ ಮಾಡ್ಬೇಕಂದ್ರೆ ಪ್ರೀತಿಯಿಂದ ಸಿನಿಮಾ ಮಾಡಬೇಕು. ಒಂದೊಳ್ಳೆ ಸಿನಿಮಾ ಆಗುತ್ತೆ ಅಂತ ಸಿನಿಮಾ ಮಾಡ್ಬೇಕು. ಬೇರೆ ಯಾವುದೋ ಉದ್ದೇಶಕ್ಕೆ ಸಿನಿಮಾ ಮಾಡೋಕೆ ಹೋಗಬಾರದು. ಒಳ್ಳೆಯ ಸಿನಿಮಾ ಜನರಿಗೆ ಕೊಡಬೇಕು. ನಮ್ಮ ಇಂಡಸ್ಟ್ರಿ ಉಳೀಬೇಕು ಅಂದ್ರೆ ಒಳ್ಳೆ ಸಿನಿಮಾ ಮಾಡೋಕೆ ಒಳ್ಳೆ ಪ್ರೊಡ್ಯೂಸರ್ಸ್ ಇರಬೇಕು.'' ಅಂತಾರೆ ಶಿವರಾಜ್ ಕುಮಾರ್. [ನಿರ್ಮಾಪಕರು ರೊಚ್ಚಿಗೇಳುವುದಕ್ಕೆ 'ಇವರುಗಳೇ' ಕಾರಣ.!]

ಇಂದು ರೆಬೆಲ್ ಸ್ಟಾರ್ ಅಂಬರೀಶ್ ನೇತೃತ್ವದಲ್ಲಿ ವಾಣಿಜ್ಯ ಮಂಡಳಿಯಲ್ಲಿ ಕಲಾವಿದರ ಸಂಘದ ಮಹತ್ವದ ಸಭೆ ನಡೆಯಲಿದೆ. ಸಭೆಯಲ್ಲಿ ಪಾಲ್ಗೊಳ್ಳುವುದಾಗಿ ಶಿವರಾಜ್ ಕುಮಾರ್ ತಿಳಿಸಿದ್ದಾರೆ. ಮುಂದೇನಾಗುತ್ತೆ ಅನ್ನೋದು ಸದ್ಯದ ಕುತೂಹಲ. [ಧರಣಿ ನಿರತ ನಿರ್ಮಾಪಕರ ಭವಿಷ್ಯ ಇಂದು ಅಂಬರೀಷ್ ಕೈಯಲ್ಲಿ!]

English summary
Kannada Film Producers are protesting in KFCC since last Monday (June 1st). Now, Kannada Actor Shiva Rajkumar has reacted on the protest and agreed to attend the meeting presided by Ambareesh today at 4pm held in KFCC.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada