»   » 'ನೀತಿ ಸಂಹಿತೆ ಉಲ್ಲಂಘನೆ': ಕೋರ್ಟ್ ಗೆ ಹಾಜರಾದ ಶಿವಣ್ಣ ದಂಪತಿ

'ನೀತಿ ಸಂಹಿತೆ ಉಲ್ಲಂಘನೆ': ಕೋರ್ಟ್ ಗೆ ಹಾಜರಾದ ಶಿವಣ್ಣ ದಂಪತಿ

Posted By:
Subscribe to Filmibeat Kannada

2014ನೇ ವರ್ಷದ ಲೋಕಸಭಾ ಚುನಾವಣೆ ವೇಳೆ 'ನೀತಿ ಸಂಹಿತೆ ಉಲ್ಲಂಘಿಸಿದ' ಹಿನ್ನಲೆಯಲ್ಲಿ ಆರೋಪ ಎದುರಿಸುತ್ತಿರುವ ಸ್ಯಾಂಡಲ್ ವುಡ್ ನ ಸ್ಟಾರ್ ನಟ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಮತ್ತು ಅವರ ಪತ್ನಿ ಗೀತಾ ಶಿವರಾಜ್ ಕುಮಾರ್ ಅವರು ವಿಚಾರಣೆಗಾಗಿ ಇಂದು (ಫೆಬ್ರವರಿ 24) ಶಿವಮೊಗ್ಗದ 2ನೇ ಜೆ.ಎಂ.ಎಫ್.ಸಿ ನ್ಯಾಯಾಲಯಕ್ಕೆ ಹಾಜರಾಗಿದ್ದರು.

ವಿಚಾರಣೆ ನಡೆಸಿದ ನ್ಯಾಯಾಧೀಶರು ಪ್ರಕರಣದ ಮುಂದಿನ ವಿಚಾರಣೆಯನ್ನು ಮುಂದಿನ ತಿಂಗಳು ಮಾರ್ಚ್ 26ಕ್ಕೆ ಮುಂದೂಡಿದ್ದಾರೆ.[ಶಿವಣ್ಣ30: ಅಭಿಮಾನಿಗಳು ಶಿವಣ್ಣನಿಗೆ ಪ್ರೀತಿಯಿಂದ ಕೊಟ್ಟ ಗಿಫ್ಟೇನು?]

Actor Shivaraj Kumar and Geetha Shivaraj Kumar to attend court

ಜೆ.ಡಿ.ಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ನಟ ಶಿವರಾಜ್ ಕುಮಾರ್ ಅವರ ಪತ್ನಿ ಗೀತಾ ಶಿವರಾಜ್ ಕುಮಾರ್ ವಿರುದ್ಧ ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿದ ಆರೋಪದ ಮೇಲೆ ಚುನಾವಣಾಧಿಕಾರಿಗಳು ಪ್ರಕರಣ ದಾಖಲಿಸಿದ್ದರು.

ಅಂದಹಾಗೆ ಮತದಾನಕ್ಕೆ 48 ಘಂಟೆ ಮುನ್ನ ಬಹಿರಂಗ ಮತಯಾಚನೆಗೆ ಅವಕಾಶ ಇಲ್ಲದ ಸಂದರ್ಭದಲ್ಲಿ ಅಭ್ಯರ್ಥಿ ಪರ ಮತಯಾಚಿಸಿದ ಆರೋಪ ನಟ ಶಿವರಾಜ್ ಕುಮಾರ್ ಅವರ ಮೇಲಿದೆ.[ಶಿವಣ್ಣ30 ವಿಶೇಷ: ಶಿವಣ್ಣ ಅವರ 20 ಉತ್ತಮ ಚಿತ್ರಗಳ List]

Actor Shivaraj Kumar and Geetha Shivaraj Kumar to attend court

ಶಿವಮೊಗ್ಗದ ನವುಲೆ ಬಳಿ ನಟ ಶಿವಣ್ಣ, ಗೀತಾ ಶಿವರಾಜ್ ಕುಮಾರ್ ಮತ್ತು ಜೆ.ಡಿ.ಎಸ್ ಜಿಲ್ಲಾಧ್ಯಕ್ಷ ಎಂ.ಶ್ರೀಕಾಂತ್ ಅವರು ಮನೆ ಮನೆ ಪ್ರಚಾರ ಮಾಡಿದ್ದರು. ಈ ಸಂದರ್ಭದಲ್ಲಿ ಅತ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ಜನ ಸೇರಿದ್ದರು.

ಇಂದು ಶಿವಣ್ಣ ಮತ್ತು ಗೀತಾ ದಂಪತಿಗಳು ಕೋರ್ಟ್ ಗೆ ವಿಚಾರಣೆಗಾಗಿ ಹಾಜರಾಗಿದ್ದಾರೆ.

    English summary
    Kannada Actor Shivaraj Kumar and his wife Geetha Shivaraj Kumar to attend court in Code of Conduct Violation Case.

    ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada