For Quick Alerts
  ALLOW NOTIFICATIONS  
  For Daily Alerts

  ಚಿತ್ರರಂಗದಲ್ಲಿ ಸುದೀಪ್, ದರ್ಶನ್, ಅಪ್ಪು, ಯಶ್ ಮಾತ್ರ ಹೀರೋಗಳಲ್ಲ: ಶಿವರಾಜ್ ಕುಮಾರ್

  |

  'ಚಂದನವನ ಫಿಲ್ಮ್ ಕ್ರಿಟಿಕ್ಸ್' ಅವಾರ್ಡ್ ಇದು ಸಿನಿಮಾ ಪತ್ರಕರ್ತರಿಂದ ಪ್ರಾರಂಭವಾದ ಅವಾರ್ಡ್ ಅಕಾಡೆಮಿ. ಸಿನಿಮಾ ವಿಮರ್ಶಕರಿಂದನೆ ಉತ್ತಮ ಸಿನಿಮಾಗಳಿಗೆ ಪ್ರಶಸ್ತಿ ನೀಡುವ ಅಕಾಡೆಮಿ. ದಕ್ಷಿಣ ಭಾರತದಲ್ಲೆ ಮೊದಲ ಬಾರಿಗೆ ಇಂತಹ ಒಂದು ಅವಾರ್ಡ್ ಅಕಾಡೆಮಿ ಪ್ರಾರಂಭವಾಗಿದೆ.

  ಇಂದು ಅಕಾಡೆಮಿಯ ಲೋಗೊವನ್ನು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಮತ್ತು ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಉದ್ಘಾಟನೆ ಮಾಡಿದ್ದಾರೆ. ಈ ಸಮಯದಲ್ಲಿ ಮಾತನಾಡಿದ ಶಿವರಾಜ್ ಕುಮಾರ್ "ಚಿತ್ರರಂಗದಲ್ಲಿ ಶಿವರಾಜ್ ಕುಮಾರ್, ಸುದೀಪ್, ದರ್ಶನ್, ಅಪ್ಪು, ಯಶ್ ಮಾತ್ರ ಹೀರೋಗಳಲ್ಲ. ಸಾಕಷ್ಟು ಹೀರೋಗಳಿದ್ದಾರೆ. ಯುವ ನಟರಿದ್ದಾರೆ ಎಲ್ಲರಿಗೂ ಸಹಕಾರ ಕೊಡಿ" ಎಂದು ಹೇಳಿದ್ದಾರೆ.

  ಪಿ ಆರ್ ಕೆ ಆಡಿಯೋದಲ್ಲಿ ಅತಿ ವೀಕ್ಷಣೆ ಪಡೆದ ಹಾಡು 'ಟಗರು ಬಂತು ಟಗರು' | Oneindia Kannada

  ಪಿ ಆರ್ ಕೆ ಆಡಿಯೋದಲ್ಲಿ ಅತಿ ವೀಕ್ಷಣೆ ಪಡೆದ ಹಾಡು 'ಟಗರು ಬಂತು ಟಗರು'

  "ನನ್ನನ್ನು ಇಂಡಸ್ಟ್ರಿಯ ಪಿಲ್ಲರ್ ಎಂದು ಕರೆಯಬೇಡಿ. ಹಿರಿಯ ನಟರಿದ್ದಾರೆ. ಅನಂತ್ ನಾಗ್, ರವಿಚಂದ್ರನ್ ಸೇರಿದಂತೆ ಅನೇಕ ಹಿರಿಯ ನಟರೆಲ್ಲ ಇದ್ದಾರೆ ಇಂದಿಗೂ ಸಕ್ರೀಯರಾಗಿದ್ದಾರೆ. ಅವರೆಲ್ಲ ಪಿಲ್ಲರ್ಸ್ ನಾನು ಇಟ್ಟಿಗೆ ಆಗಿ ಇರಲು ಇಷ್ಟಪಡುತ್ತೇನೆ" ಎಂದು 'ಚಂದನವನದ ಫಿಲ್ಮ್ ಕ್ರಿಟಿಕ್ಸ್ ಅಕಾಡೆಮಿ' ಲೋಗೊ ಉದ್ಘಾಟನೆ ಮಾಡಿ ಮಾತನಾಡಿದರು.

  "ಸುಮಾರು 33 ವರ್ಷಗಳಿಂದನೂ ನನಗೆ ಪತ್ರಕರ್ತರ ಗೊತ್ತಿದ್ದಾರೆ ಈಗ ಎರಡು ಮೂರು ವರ್ಷದ ಹಿಂದೆ ಬಂದ ಕಿರಿಯ ಪತ್ರಕರ್ತರು ಗೊತ್ತಿದ್ದಾರೆ. ಸಾಕಷ್ಟು ಬಾರಿ ಪತ್ರಕರ್ತರ ಜೊತೆ ಜಗಳ ಆಡಿದ್ದೀನಿ, ಆದ್ರೆ ತುಂಬಾ ತಿದ್ದುಕೊಂಡಿದ್ದೇನೆ, ಕಲಿಸಿದ್ದೀನಿ, ಇವತ್ತು 'ಚಂದನವನದ ಫಿಲ್ಮ್ ಕ್ರಿಟಿಕ್ಸ್ ಅವಾರ್ಡ್' ಅಕಾಡೆಮಿ ಮಾಡಿರುವುದು ಸಂತಸ" ಎಂದು ಹೇಳಿದ್ದಾರೆ.

  'ಚಂದನವನದ ಫಿಲ್ಮ್ ಕ್ರಿಟಿಕ್ಸ್ ಅವಾರ್ಡ್' ಅಕಾಡೆಮಿಯಿಂದ ಪ್ರತೀ ವರ್ಷ 20 ವಿಭಾಗಗಳಲ್ಲಿ ಈ ಪ್ರಶಸ್ತಿ ಪ್ರದಾನ ಮಾಡಲಾಗುತ್ತೆ. ಯಾವುದೆ ಲಾಬಿಯಿಲ್ಲದೇ, ಸಿನಿಮಾ ವಿಮರ್ಶೆಗಾಗಿ ಸಿನಿಮಾ ಪತ್ರಕರ್ತರಿಂದಲೆ ಈ ಪ್ರಶಸ್ತಿ ನೀಡಲಾಗುತ್ತೆ.

  English summary
  Kannada actor Shivaraj Kumar inaugurated Chandanavana Film Critics Academy award.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X