For Quick Alerts
  ALLOW NOTIFICATIONS  
  For Daily Alerts

  ಅಪ್ಪು ಅಭಿಮಾನಿಗಳಲ್ಲೊಂದು ಶಿವರಾಜ್‌ ಕುಮಾರ್ ಮನವಿ!

  |

  ಪುನೀತ್ ರಾಜಕುಮಾರ್ ವಿಧಿವಶರಾಗಿದ್ದಾರೆ ಎನ್ನುವುದೇ ದೊಡ್ಡ ಆಘಾತಕಾರಿ ಸಂಗತಿ. ಈ ವಿಚಾರ ಪುನೀತ್‌ ರಾಜಕುಮಾರ್ ಅವರ ಸಹಸ್ರಾರು ಅಭಿಮಾನಿಗಳನ್ನು ಬಾಧಿಸುತ್ತಿದೆ. ಜೊತೆಗೆ ಚಿತ್ರರಂಗವನ್ನ ತಲ್ಲಣಗೊಳಿಸಿದೆ. ಪ್ರತಿಯೊಬ್ಬರೂ ನೋವಿನ ನುಡಿಗಳನ್ನು ಆಡುತ್ತಿದ್ದಾರೆ. ಭಾರದ ಮನಸ್ಸಿನಿಂದ ಈ ಸತ್ಯವನ್ನು ಒಪ್ಪಿಕೊಂಡಿದ್ದಾರೆ. ಈ ವಿಚಾರ ಹೊರಗಿನವರಿಗೆ ಅಷ್ಟು ನೋವು ಉಂಟು ಮಾಡುತ್ತಿದೆ ಎಂದರೆ ಇನ್ನೂ ಜೊತೆಯಲ್ಲೇ ಹುಟ್ಟಿ ಬೆಳೆದಂತಹ ಒಡಹುಟ್ಟಿದವರು, ಕುಟುಂಬಸ್ಥರಿಗೆ ಇನ್ನಷ್ಟು ನೋವು ತಂದಿರಬಹುದು. ಅದು ಉಹೆಗೂ ಮೀರಿದ ಸಂಗತಿ. ಅದರಲ್ಲೂ ಶಿವರಾಜ್ ಕುಮಾರ್ ಅಪ್ಪುಗೆ ಹಿರಿಯಣ್ಣ. ಪುನೀತ್ ರಾಜ್‌ಕುಮಾರ್‌ ಅವರನ್ನ ಮಗನಂತೆ ನೋಡುತ್ತಿದ್ದರು. ಪುನೀತ್ ರಾಜಕುಮಾರ್ ಅವರಲ್ಲಿ ಮಗನನ್ನು ಕಾಣುತ್ತಿದ್ದರು ಶಿವರಾಜ್‌ಕುಮಾರ್. ಅಪ್ಪು ಅಂತ್ಯಕ್ರಿಯೆಯ ಮರುದಿನ ಕೊಂಚ ಮನಬಿಚ್ಚಿ ಮಾತನಾಡಿದ್ದಾರೆ ನಟ ಶಿವರಾಜಕುಮಾರ್. ನನ್ನ ಮಗನಂತೆ ಇದ್ದ ಎನ್ನುತ್ತಾ ನೋವು ನುಂಗಿಕೊಂಡೆ ಮಾತನಾಡಿದ್ದಾರೆ. ಜೊತೆಗೆ ಅಪ್ಪು ಅಭಿಮಾನಿಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ.

  ನಟ ಶಿವರಾಜ್ ಕುಮಾರ್ ವ್ಯಕ್ತಿತ್ವ ವಿಭಿನ್ನ. ಅವರದ್ದು ತಾಯಿ ಕರುಳು ಅಂತಲೇ ಎಲ್ಲರೂ ಹೇಳುತ್ತಾರೆ. ಎಷ್ಟೇ ನೋವಿದ್ದರೂ ಕೂಡ ಎಲ್ಲವನ್ನೂ ನೋಡಿಕೊಂಡು ಶಿವರಾಜಕುಮಾರ್ ತಮ್ಮ ಕುಟುಂಬಸ್ಥರಿಗಾಗಿ ಧೈರ್ಯವನ್ನು ತಂದುಕೊಂಡಿದ್ದಾರೆ. ಅಪ್ಪು ಅಂತ್ಯಕ್ರಿಯೆಯ ಬಳಿಕವೂ ಮಾಧ್ಯಮಗಳ ಜೊತೆಗೆ ಶಿವರಾಜ್‌ಕುಮಾರ್ ಮಾತನಾಡಿದರು. ಅಭಿಮಾನಿಗಳು ಕೆಟ್ಟ ನಿರ್ಧಾರಗಳನ್ನು ತೆಗೆದುಕೊಳ್ಳ ಬಾರದು ಎನ್ನುವಂತೆ ಮನವಿ ಮಾಡಿಕೊಂಡಿದ್ದರು. ಇಂದು ಕೂಡ ರಾಜಕುಮಾರ ಮಾಧ್ಯಮಗಳೊಂದಿಗೆ ಮಾತನಾಡಿ ಮತ್ತೊಮ್ಮೆ ಅಪ್ಪು ಅಭಿಮಾನಿಗಳಿಗೆ ಮನವಿ ಮಾಡಿದ್ದಾರೆ.

  ನಟ ಶಿವರಾಜ್ ಕುಮಾರ್ ತಮ್ಮ ನನ್ನ ಕಳೆದುಕೊಂಡು ಕಂಗಾಲಾಗಿದ್ದಾರೆ. ಅಪ್ಪು ಅಂದ್ರೆ ಶಿವರಾಜಕುಮಾರ ಅಚ್ಚುಮೆಚ್ಚು. ಶಿವರಾಜ್‌ ಕುಮಾರ್ 13 ವರ್ಷದವರಿದ್ದಾಗ ಪುನೀತ್ ರಾಜಕುಮಾರ್ ಜನನವಾಗಿತ್ತು. ಹಾಗಾಗಿ ಪುನೀತ್‌ರನ್ನು ಶಿವರಾಜ್‌ಕುಮಾರ್ ಮಗುವಿನಂತೆ ತೋಳಿನಲ್ಲಿ ಆಡಿಸಿ ಬೆಳೆಸಿದ್ದಾರೆ. ತಮ್ಮ ಎನ್ನುವುದಕ್ಕಿಂತ ಹೆಚ್ಚಾಗಿ ಶಿವರಾಜ್‌ಕುಮಾರ್‌ಗೆ ಅಪ್ಪು ಮಗನಂತೆ ಇದ್ದ. ಮಗನಂತಿದ್ದ ತಮ್ಮನನ್ನು ಕಳೆದುಕೊಂಡಿರುವ ಶಿವರಾಜ್ ಕುಮಾರ್ ದುಃಖ ಹೇಳತೀರದು. ಆದರೆ, ಶಿವರಾಜಕುಮಾರ್ ಎಲ್ಲ ದುಃಖವನ್ನು ನುಂಗಿಕೊಂಡು ನಿಂತಿದ್ದಾರೆ. ಸದ್ಯ ಶಿವರಾಜ್‌ಕುಮಾರ್ ಪುನೀತ್ ಅಭಿಮಾನಿಗಳಲ್ಲಿ ಮನವಿಯನ್ನು ಮಾಡಿಕೊಂಡಿದ್ದಾರೆ. ಪುನೀತ್ ಅಭಿಮಾನಿಗಳು ದುಡುಕಿ ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳಬಾರದು ಆತ್ಮಹತ್ಯೆ ಮಾಡಿಕೊಳ್ಳಬಾರದು ಎಂದು ಶಿವರಾಜ್ ಕುಮಾರ್ ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ.

  ಪುನೀತ್ ರಾಜಕುಮಾರ್ ಇನ್ನಿಲ್ಲ ಎನ್ನುವ ಸುದ್ದಿಯನ್ನು ಕೇಳಿ ಅಭಿಮಾನಿಗಳು ಆಘಾತಕ್ಕೊಳಗಾಗಿದ್ದಾರೆ. ಅಭಿಮಾನಿಗಳಲ್ಲಿ ಕೆಲವರಿಗೆ ಹೃದಯಾಘಾತ ಆದರೆ, ಇನ್ನು ಕೆಲವರು ಆತ್ಮ ಹತ್ಯೆಗೆ ಯತ್ನಿಸಿದ್ದಾರೆ. ಹಾಗಾಗಿ ಯಾರೂ ಕೂಡ ಇಂತಹ ಕೆಟ್ಟ ನಿರ್ಧಾರಗಳನ್ನು ತೆಗೆದುಕೊಳ್ಳಬಾರದು. ಇದು ಅಪ್ಪುಗೆ ಶಾಂತಿ ನೀಡುವುದಿಲ್ಲ ಎಂದಿದ್ದಾರೆ ಶಿವರಾಜಕುಮಾರ್. ಇನ್ನು ಇದೇ ವೇಳೆ ಹಾಲುತುಪ್ಪ ಕಾರ್ಯದ ಬಗ್ಗೆಯೂ ಮಾತನಾಡಿದ್ದಾರೆ. "ಅವನು ನಮಗೆ ಹಾಲುತುಪ್ಪ ಬಿಡಬೇಕಿತ್ತು. ಆದರೆ ನಾವು ಅವನಿಗೆ ಹಾಲುತುಪ್ಪ ಬಿಡುತ್ತಿದ್ದೇವೆ. ಇದು ಎಂತಹ ವಿಪರ್ಯಾಸ ಎಂದು ಅರ್ಥವಾಗುತ್ತಿಲ್ಲ" ಎಂದು ಶಿವರಾಜ್‌ಕುಮಾರ್‌ ಹೇಳಿದರು.

  ಅಷ್ಟಕ್ಕೂ ಅಪ್ಪು ಆಸ್ಪತ್ರೆಗೆ ದಾಖಲಾಗಿದ್ದಾರೆ ಎನ್ನುವ ವಿಚಾರವನ್ನು ಕೇಳಿಯೇ ಶಿವರಾಜಕುಮಾರ್ ಕುಗ್ಗಿ ಹೋಗಿದ್ದರಂತೆ. ಏನು ಪುನೀತ್ ಏನಿಲ್ಲವೆಂದು ಗೊತ್ತಾದಾಗ ಶಿವರಾಜ್‌ಕುಮಾರ್ ಬಿಕ್ಕಿಬಿಕ್ಕಿ ಅತ್ತಿದ್ದರಂತೆ. ಮೂರು ದಿನಗಳ ಕಾಲ ಶಿವರಾಜ್ ಕುಮಾರ್ ಕಣ್ಣಲ್ಲಿ ನೀರು ಮಡುಗಟ್ಟಿತ್ತು. ಶಿವರಾಜಕುಮಾರ್ ಎಲ್ಲ ನೋವನ್ನು ನುಂಗಿಕೊಂಡು ಕುಟುಂಬಕ್ಕಾಗಿ ಧೈರ್ಯ ತುಂಬಿಕೊಂಡಿದ್ದರು.

  English summary
  Actor Shivaraj kumar Request Puneeth Rajkumar Fans To Not Take Roung Decisions,

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X