twitter
    For Quick Alerts
    ALLOW NOTIFICATIONS  
    For Daily Alerts

    ಕೊರೊನಾ ಸಂಕಷ್ಟ: ಪೊಲೀಸರ ನೆರವಿಗೆ ಬಂದ ಸೋನು ಸೂದ್

    |

    ನಟ ಸೋನು ಸೂದ್ ಕೊರೊನಾ ಸಂಕಷ್ಟದ ಸಮಯದಲ್ಲಿ ಸಾಕಷ್ಟು ಸಕ್ರಿಯರಾಗಿ ಕೆಲಸ ಮಾಡಿದ್ದಾರೆ. ಸಿನಿಮಾಗಳಿಂದ ಪಡೆದ ಎಷ್ಟೋ ಪಟ್ಟು ಹೆಚ್ಚು ಖ್ಯಾತಿಯನ್ನು ಅವರು ಕೊರೊನಾ ಕಾಲದಲ್ಲಿ ಸಹಾಯ ಮಾಡಿ ಪಡೆದಿದ್ದಾರೆ.

    Recommended Video

    KGF ಎಡಿಟರ್ ನಮ್ಮ ಸಿನಿಮಾ ಎಡಿಟ್ ಮಾಡಿದ್ರು | Raghu Samarth | Filmibeat Kannada

    ಕೊರೊನಾ ಲಾಕ್‌ಡೌನ್ ಆಗಿದ್ದಾಗ ಕಾರ್ಮಿಕರು ತಮ್ಮ ಮನೆಗಳಿಗೆ ಹಿಂದಿರುಗಲು ಕಷ್ಟಪಡುತ್ತಿದ್ದ ವೇಳೆಯಲ್ಲಿ ಸಾವಿರಾರು ಮಂದಿ ಕಾರ್ಮಿಕರನ್ನು ತಮ್ಮ ಸ್ವಂತ ಹಣ ಖರ್ಚು ಮಾಡಿ ಊರಿಗೆ ಕಳುಹಿಸಿದ್ದರು ಸೋನು ಸೂದ್.

    ಸಿನಿಮಾಗಳಲ್ಲಿ ವಿಲನ್ ಪಾತ್ರಗಳನ್ನು ಮಾಡುತ್ತಿದ್ದ ಸೋನು ಸೂದ್ ನಿಜ ಜೀವನದಲ್ಲಿ ತಾವೊಬ್ಬ ಹೀರೋ ಎಂಬುದನ್ನು ತಮ್ಮ ಸೇವೆಯ ಮೂಲಕ ಸಾಬೀತು ಮಾಡಿದರು. ಅನ್‌ಲಾಕ್ ಶುರುವಾದ ಮೇಲೆ ಮರೆಯಾಗಿದ್ದ ಸೋನು ಸೂದ್ ಈಗ ಮತ್ತೆ ವಾಪಸ್ ಬಂದಿದ್ದಾರೆ.

    ಪೊಲೀಸರ ನೆರವಿಗೆ ಬಂದ ಸೋನು ಸೂದ್

    ಪೊಲೀಸರ ನೆರವಿಗೆ ಬಂದ ಸೋನು ಸೂದ್

    ಸೋನು ಸೂದ್ ಅವರು ಕೊರೊನಾ ವಾರಿಯರ್‌ಗಳಾದ ಪೊಲೀಸರ ನೆರವಿಗೆ ನಿಂತಿದ್ದಾರೆ. ಪೊಲೀಸರಿಗೆ ಬರೋಬ್ಬರಿ 25 ಸಾವಿರ ಫೇಸ್‌ ಶೀಲ್ಡ್‌ ಗಳನ್ನು ಉಚಿತವಾಗಿ ನೀಡಿದ್ದಾರೆ ಸೋನು ಸೂದ್.

    ಗೃಹ ಮಂತ್ರಿ ಟ್ವೀಟ್ ಮಾಡಿದ್ದಾರೆ

    ಗೃಹ ಮಂತ್ರಿ ಟ್ವೀಟ್ ಮಾಡಿದ್ದಾರೆ

    ಈ ವಿಷಯವನ್ನು ಮಹಾರಾಷ್ಟ್ರ ಹೋಮ್ ಮಿನಿಸ್ಟರ್ ಅನಿಲ್ ದೇಶಮುಖ್ ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದು, ಸೋನು ಸೂದ್ ಅವರು 25000 ಮಾಸ್ಕ್‌ಗಳನ್ನು ಪೊಲೀಸರಿಗೆ ನೀಡಿದ್ದಾರೆ. ಅವರಿಗೆ ಧನ್ಯವಾದ ಎಂದು ಬರೆದುಕೊಂಡಿದ್ದಾರೆ.

    ಮುಂಬೈನಲ್ಲಿ ಅತಿ ಹೆಚ್ಚು ಪ್ರಕರಣ

    ಮುಂಬೈನಲ್ಲಿ ಅತಿ ಹೆಚ್ಚು ಪ್ರಕರಣ

    ಸೋನು ಸೂದ್ ವಾಸಿಸುವ ಮುಂಬೈನಲ್ಲಿ ಅತಿಹೆಚ್ಚು ಕೊರೊನಾ ಪ್ರಕರಣಗಳು ದಾಖಲಾಗಿವೆ. ದೇಶದಲ್ಲಿಯೇ ಅತಿ ಹೆಚ್ಚು ಪ್ರಕರಣ ದಾಖಲಾಗಿರುವುದು ಅಲ್ಲಿಯೇ. ವೈದ್ಯರು, ಸ್ವಚ್ಛತಾ ಕಾರ್ಮಿಕರ ಜೊತೆಗೆ ಪೊಲೀಸರು ಸಹ ಕೊರೊನಾ ನಿಯಂತ್ರಣಕ್ಕೆ ಶಕ್ತಿ ಮೀರಿ ಯತ್ನಿಸುತ್ತಿದ್ದಾರೆ ಹಾಗಾಗಿ ಪೊಲೀಸರಿಗೆ ಸಹಾಯ ಮಾಡಿದ್ದಾರೆ ಸೋನು ಸೂದ್.

    ಐಶಾರಾಮಿ ಹೋಟೆಲ್ ಬಿಟ್ಟುಕೊಟ್ಟಿದ್ದರು

    ಐಶಾರಾಮಿ ಹೋಟೆಲ್ ಬಿಟ್ಟುಕೊಟ್ಟಿದ್ದರು

    ಸೋನು ಸೂದ್ ಅವರು ತಮ್ಮ ಐಶಾರಾಮಿ ಹೋಟೆಲ್ ಅನ್ನು ಕೊರೊನಾ ವಾರಿಯರ್‌ಗಳ ವಾಸಕ್ಕೆಂದು ಬಿಟ್ಟುಕೊಂಡಿದ್ದಾರೆ. ಅದರ ಜೊತೆಗೆ ಸಾವಿರಾರು ಮಂದಿ ಕಾರ್ಮಿಕರನ್ನು ತಮ್ಮ ಊರುಗಳಿಗೆ ತಲುಪುವಂತೆ ಮಾಡಿದ್ದಾರೆ ಸೋನು ಸೂದ್.

    English summary
    Bollywood actor Sonu Sood helps Mumbai police. He gave 25000 face shields for free.
    Friday, July 17, 2020, 17:43
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X