For Quick Alerts
  ALLOW NOTIFICATIONS  
  For Daily Alerts

  ದರ್ಶನ್ ಕ್ಲಿಕ್ ಮಾಡಿದ ಫೋಟೋ ಶ್ರೀಮುರಳಿಗೆ ಗಿಫ್ಟ್

  |
  ದರ್ಶನ್ ಕ್ಲಿಕ್ ಮಾಡಿದ ಫೋಟೋ ಶ್ರೀಮುರಳಿಗೆ ಗಿಫ್ಟ್ | FILMIBEAT KANNADA

  ನಟ ಶ್ರೀಮುರಳಿ ಒಂದು ಉಡುಗೊರೆ ಪಡೆದಿದ್ದಾರೆ. 'ಮದಗಜ' ಸಿನಿಮಾದ ನಿರ್ಮಾಪಕ ಉಮಾಪತಿ ವಿಶೇಷ ಉಡುಗೊರೆಯನ್ನು ತಮ್ಮ ನಾಯಕನಿಗೆ ನೀಡಿದ್ದಾರೆ.

  ಶ್ರೀಮುರಳಿ ಕೈ ಸೇರಿರುವ ಈ ಫೋಟೋ ನಟ ದರ್ಶನ್ ಕ್ಲಿಕ್ ಮಾಡಿದ್ದು. ಅರಣ್ಯ ಇಲಾಖೆಯ ರಾಯಭಾರಿಯಾಗಿರುವ ದರ್ಶನ್ ಕಾಡಿನಲ್ಲಿ ಪ್ರಾಣಿಗಳ ಫೋಟೋಗಳನ್ನು ತೆಗೆದಿದ್ದರು. ನಂತರ ಈ ಫೋಟೋಗಳನ್ನು ಮಾರಾಟ ಮಾಡಿ ಅದರಿಂದ ಬಂದ ಹಣವನ್ನು ಒಳ್ಳೆಯ ಕೆಲಸಕ್ಕೆ ಬಳಸುವ ಪ್ಲಾನ್ ಆಗಿತ್ತು.

  ಇದೀಗ ದರ್ಶನ್ ಕ್ಲಿಕ್ ಮಾಡಿದ ಹುಲಿಯ ಫೋಟೋವನ್ನು ನಿರ್ಮಾಪಕ ಉಮಾಪತಿ ತಮ್ಮ ನಾಯಕ ಶ್ರೀಮುರಳಿಗೆ ಪ್ರೀತಿಯಿಂದ ನೀಡಿದ್ದಾರೆ. ಈ ಫೋಟೋಗೆ 10 ಸಾವಿರ ರೂಪಾಯಿಯಾಗಿದೆ. ದರ್ಶನ್ ಕ್ಲಿಕ್ ಮಾಡಿದ ಈ ಫೋಟೋ ಮುರಳಿ ಅವರಿಗೂ ಬಹಳ ಇಷ್ಟವಾಗಿದೆ. ಈ ಹಿಂದೆ 'ಹೆಬ್ಬುಲಿ' ಸಿನಿಮಾ ನಿರ್ಮಾಣ ಮಾಡಿದ್ದ ಉಮಾಪತಿ ಈಗ ಹುಲಿಯ ಫೋಟೋವನ್ನೇ ಉಡುಗೊರೆಯಾಗಿ ನೀಡಿದ್ದಾರೆ.

  ಅಂದಹಾಗೆ, ಶ್ರೀಮರಳಿ ಸದ್ಯ ಚೇತನ್ ಕುಮಾರ್ ನಿರ್ದೇಶನದ 'ಭರಾಟೆ' ಸಿನಿಮಾದ ಚಿತ್ರೀಕರಣದಲ್ಲಿ ತೊಡಗಿದ್ದರು. ಸದ್ಯದಲ್ಲಿಯೇ 'ಮದಗಜ' ಚಿತ್ರದ ಶೂಟಿಂಗ್ ಕೂಡ ಶುರು ಆಗಲಿದೆ. ಇದು 'ಅಯೋಗ್ಯ' ಖ್ಯಾತಿಯ ಮಹೇಶ್ ಗೌಡ ನಿರ್ದೇಶನದ ಸಿನಿಮಾವಾಗಿದೆ.

  English summary
  Kannada actor Sri Murali got a special gift from 'Madagaja' movie producer Umapathi. Umapathi gave tiger photograph clicked by Darshan.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X