»   » ಸೈಲೆಂಟ್ ಶ್ರೀಮುರಳಿ ಈಗ ಮೋಸ್ಟ್ ವಾಂಟೆಡ್ ಸ್ಟಾರ್

ಸೈಲೆಂಟ್ ಶ್ರೀಮುರಳಿ ಈಗ ಮೋಸ್ಟ್ ವಾಂಟೆಡ್ ಸ್ಟಾರ್

Posted By:
Subscribe to Filmibeat Kannada

ಸೈಲೆಂಟ್ ಸ್ಟಾರ್ ಶ್ರೀಮುರಳಿ ಈಗ ಸ್ಯಾಂಡಲ್ ವುಡ್ ನ ಮೋಸ್ಟ್ ವಾಟೆಂಡ್ ಸ್ಟಾರ್. ಅವರ 'ಉಗ್ರಂ' ಚಿತ್ರ ಶತದಿನೋತ್ಸವ ಆಚರಿಸಿಕೊಂಡಿದ್ದಷ್ಟೇ ಅಲ್ಲದೆ ಬಾಕ್ಸ್ ಆಫೀಸಲ್ಲೂ ಭರ್ಜರಿ ಬೆಳೆತೆಗೆಯಿತು. ಪರಭಾಷೆ ತಾರೆಗಳು ಈ ಚಿತ್ರವನ್ನು ರೀಮೇಕ್ ಮಾಡಲು ತುದಿಗಾಲಲ್ಲಿ ನಿಲ್ಲುವಂತಾಗಿದೆ.

ಶ್ರೀಮುರಳಿ ಮುಂದಿನ ಚಿತ್ರ ಯಾವುದು ಎಂಬ ಬಗ್ಗೆ ಈಗಲೇ ಚರ್ಚೆ ಶುರುವಾಗಿದೆ. ಮೂಲಗಳ ಪ್ರಕಾರ ಶ್ರೀಮುರಳಿ ಇನ್ನೂ ಯಾವ ಚಿತ್ರಕ್ಕೂ ಸಹಿ ಹಾಕಿಲ್ಲ. ಇದುವರೆಗೂ ಅವರು ಹಲವಾರು ಚಿತ್ರಕಥೆಗಳನ್ನು ಕೇಳಿದ್ದು ಒಂದಕ್ಕೂ ಓಕೆ ಮಾಡಿಲ್ಲವಂತೆ. [ಉಗ್ರಂ ಚಿತ್ರ ವಿಮರ್ಶೆ]

Actor Sri Murali

ಚಿತ್ರ ನಿರ್ಮಾಪಕರು ಮಾತ್ರ ಶ್ರೀಮುರಳಿ ಮನೆ ಬಾಗಿಲನ್ನು ನಿತ್ಯ ತಟ್ಟುತ್ತಿದ್ದರೂ ಯಾರಿಗೂ ಇನ್ನೂ ಕಾಲ್ ಶೀಟ್ ಕೊಟ್ಟಿಲ್ಲವಂತೆ. ಒಂದು ಮೂಲದ ಪ್ರಕಾರ 'ಉಗ್ರಂ' ಬಳಿಕ ಶ್ರೀಮುರಳಿ ಅವರು ಸುಮಾರು 67 ಚಿತ್ರಕಥೆಗಳನ್ನು ಕೇಳಿದ್ದಾರಂತೆ. ಆದರೆ ಒಂದಕ್ಕೂ ಅಂಕಿತ ಹಾಕಿಲ್ಲದಿರುವುದು ವಿಶೇಷ.

ಕನ್ನಡ ಚಿತ್ರರಂಗದಲ್ಲಿ ದಾಖಲೆ ಬರೆದು ಹೊಸ ಟ್ರೆಂಡ್ ಸೃಷ್ಟಿಸಿದ ಚಿತ್ರ ಉಗ್ರಂ. ಈ ಹಿನ್ನೆಲೆಯಲ್ಲಿ ಶ್ರೀಮುರಳಿ ತಮ್ಮ ಮುಂದಿನ ಚಿತ್ರ ಹೇಗಿರಬೇಕು ಎಂಬ ಬಗ್ಗೆ ಈಗಲೇ ಪಕ್ಕಾ ಪ್ಲಾನ್ ಹಾಕಿದ್ದಾರೆ. ಹಾಗಾಗಿ ಯಾವ ಸ್ಕ್ರಿಪ್ಟ್ ಅವರಿಗೆ ಓಕೆ ಆಗುತ್ತಿಲ್ಲ.

'ಉಗ್ರಂ' ಚಿತ್ರಕ್ಕಿಂತಲೂ ಭಿನ್ನವಾಗಿರುವ, ಅದಕ್ಕಿಂತಲೂ ಸೊಗಸಾದ ಕಥೆಯ ನಿರೀಕ್ಷೆಯಲ್ಲಿದ್ದಾರೆ. ಆದರೆ ಅವರ ನಿರೀಕ್ಷೆಯ ಕಥೆಗಳು ಬರುತ್ತಿಲ್ಲ. ಅದೇ ರೀತಿಯ, ಸವಕಲು ಕಥೆಗಳೇ ಬರುತ್ತಿವೆಯಂತೆ. ತಾನು ಮಾಡುವ ಪಾತ್ರದಲ್ಲಿ ಮೌಲ್ಯಯುತವಾದ ಅಂಶಗಳಿರಬೇಕು, ಅದು ಜನರ ಮನಸ್ಸಿಗೆ ನಾಟುವಂತಿರಬೇಕು ಎನ್ನುತ್ತಾರೆ. (ಏಜೆನ್ಸೀಸ್)

English summary
After the massive hit Ugramm many Kannada film makers have queued up in front of Srimurali's residence, who are aiming to rope in the actor for their upcoming project. It is reported that Ugramm star has rejected nearly 67 scripts till now.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada