For Quick Alerts
  ALLOW NOTIFICATIONS  
  For Daily Alerts

  ನಟ ಶ್ರೀನಗರ ಕಿಟ್ಟಿ ಅವರ ಬಾವ ನೊಂದು ಆತ್ಮಹತ್ಯೆ

  By ರವಿಕಿಶೋರ್
  |

  ನಟ ಶ್ರೀನಗರ ಕಿಟ್ಟಿ ಅವರ ಹಿರಿಯ ಸಹೋದರಿ ಉಮಾದೇವಿ ಪತಿ ಶ್ರೀಕಂಠಯ್ಯ (60) ಆತ್ಮಹತ್ಯೆಗೆ ಶರಣಾಗಿದ್ದಾರೆ. ಉಮಾದೇವಿ ಅವರು ಕ್ಯಾನ್ಸರ್ ನಿಂದ ಬಳಲುತ್ತಿದ್ದು ಇದರಿಂದ ಅವರ ಪತಿ ತೀವ್ರ ಮನನೊಂದಿದ್ದರು.

  ಬುಧವಾರ (ಡಿ.3) ಸಂಜೆ ಮನೆಯಲ್ಲಿ ಯಾರೂ ಇಲ್ಲದ ವೇಳೆ ತಮ್ಮ ಕೋಣೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬೆಂಗಳೂರಿನ ವೀರಭದ್ರನಗರ 7ನೇ ಮುಖ್ಯರಸ್ತೆಯ ನಿವಾಸದಲ್ಲಿ ಅವರು ವಾಸ್ತವ್ಯ ಇದ್ದರು.

  ಉಮಾದೇವಿಯರು ಕ್ಯಾನ್ಸರ್ ನಿಂದ ಬಳಲುತ್ತಿದ್ದು, ತಮ್ಮ ಪತ್ನಿಯ ಪರಿಸ್ಥಿತಿ ಶ್ರೀಕಂಠಯ್ಯ ಅವರನ್ನು ತೀವ್ರವಾಗಿ ಬಾಧಿಸಿತ್ತು. ಈ ನೋವನ್ನು ತಾಳಲಾರದೆ ಅವರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಅವರ ಕೋಣೆಯಲ್ಲಿ ಮರಣ ಪತ್ರವೂ ದೊರಕಿದ್ದು ಅದರಲ್ಲಿ ಪತ್ನಿಯ ಅನಾರೋಗ್ಯವನ್ನು ನೋಡಲಾಗದೆ ಆತ್ಮಹತ್ಯೆಗೆ ಶರಣಾಗುತ್ತಿರುವುದಾಗಿ ಬರೆದಿದ್ದಾರೆ.

  ಪತ್ರದಲ್ಲಿ ತಮ್ಮ ಆಸ್ತಿಯ ಬಗ್ಗೆಯೂ ಬರೆದಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ನಟ ಶ್ರೀನಗರ ಕಿಟ್ಟಿ ಅವರು ಭೇಟಿ ನೀಡಿ ಮನೆಯವರಿಗೆ ಸಾಂತ್ವನ ಹೇಳಿದ್ದಾರೆ. ಶ್ರೀಕಂಠಯ್ಯ ಅವರು ಕನ್ನಡ ಚಿತ್ರರಂಗದಲ್ಲಿ ಸಂಗೀತ ಕಲಾವಿದರಾಗಿ ಸೇವೆ ಸಲ್ಲಿಸಿದ್ದಾರೆ. (ಒನ್ಇಂಡಿಯಾ ಕನ್ನಡ)

  English summary
  Kannada actor Srinagara Kitty's brother-in-law Srikantaiah committed suicide in Bangalore on Wednesday (3rd December) night. He was distressed about his diseased wife, who was suffering from cancer.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X