»   » ಸುದೀಪ್ ಜೊತೆ ರೋಮ್ಯಾಂಟಿಕ್ ಗುಂಗಿನಲ್ಲಿ ನಿತ್ಯಾ ಮೆನನ್

ಸುದೀಪ್ ಜೊತೆ ರೋಮ್ಯಾಂಟಿಕ್ ಗುಂಗಿನಲ್ಲಿ ನಿತ್ಯಾ ಮೆನನ್

Posted By:
Subscribe to Filmibeat Kannada

ಬಿಗ್ ಬಜೆಟ್ ನ ದ್ವಿಭಾಷಾ ಚಲನಚಿತ್ರ 'ಕೋಟಿಗೊಬ್ಬ 2' ಹಲವಾರು ವಿಶೇಷತೆಗಳನ್ನು ಒಳಗೊಂಡಿದ್ದು, ಒಂದು ರೋಮ್ಯಾಂಟಿಕ್ ಹಾಡಿಗೆ ನಟ ಕಿಚ್ಚ ಸುದೀಪ್ ಮತ್ತು ನಟಿ ನಿತ್ಯಾ ಮೆನನ್ ಅವರು ತಮ್ಮ ಧ್ವನಿ ನೀಡಿದ್ದಾರೆ.

ನಾಗೇಂದ್ರ ಪ್ರಸಾದ್ ಅವರು ಸಾಹಿತ್ಯ ರಚನೆ ಮಾಡಿರುವ ಕನ್ನಡದ ಆವೃತ್ತಿಯನ್ನು ನಟ ಸುದೀಪ್ ಮತ್ತು ನಿತ್ಯಾ ಮೆನನ್ ಅವರು ಈಗಾಗಲೇ ಹಾಡಿದ್ದು, ರೆಕಾರ್ಡಿಂಗ್ ಮುಗಿದಿದೆ.[ಜುಲೈನಲ್ಲಿ 'ಕೋಟಿಗೊಬ್ಬ 2' ನೋಡೋಕೆ ನೀವ್ ರೆಡಿನಾ?]

Actor Sudeep and Nithya menen sings a song for 'Kotigobba 2'

'ಕೋಟಿಗೊಬ್ಬ 2' ಸಿನಿಮಾ ಕನ್ನಡ ಮತ್ತು ತಮಿಳು ಭಾಷೆಯಲ್ಲಿ ಏಕಕಾಲದಲ್ಲಿ ತೆರೆ ಕಾಣುತ್ತಿದ್ದು, ಬರೀ ಕನ್ನಡದಲ್ಲಿ ಮಾತ್ರ ಸುದೀಪ್ ಮತ್ತು ನಿತ್ಯಾ ಮೆನನ್ ಅವರು ಹಾಡಿಗೆ ಧ್ವನಿ ನೀಡಿದ್ದಾರೆ.

ನಟಿ ನಿತ್ಯಾ ಮೆನನ್ ಅವರು ಕನ್ನಡದಲ್ಲಿ ಇದೇ ಮೊದಲ ಬಾರಿಗೆ ಗಾಯಕಿಯಾಗಿ ತಮ್ಮ ಧ್ವನಿ ನೀಡಿದ್ದು, ಅಭಿಮಾನಿಗಳಿಗೆ ನಿತ್ಯಾ ಮೆನನ್ ಅವರ ಧ್ವನಿಯಲ್ಲಿ ಹಾಡು ಕೇಳುವ ಭಾಗ್ಯ ಸಿಗಲಿದೆ. ಕಿಚ್ಚ ಸುದೀಪ್ ಅವರು ಈಗಾಗಲೇ ಹಲವಾರು ಹಾಡುಗಳಿಗೆ ತಮ್ಮ ಧ್ವನಿ ನೀಡಿ ರಂಜಿಸಿದ್ದಾರೆ.

Actor Sudeep and Nithya menen sings a song for 'Kotigobba 2'

ಇನ್ನೋವೇಟಿವ್ ಫಿಲ್ಮ್ ಸಿಟಿಯಲ್ಲಿ ಈ ಹಾಡಿನ ಚಿತ್ರೀಕರಣವನ್ನು ನಡೆಸಿದ್ದು, ಇದಕ್ಕೆ ನೃತ್ಯ ನಿರ್ದೇಶಕ ಎ ಹರ್ಷ ಅವರು ನೃತ್ಯ ನಿರ್ದೇಶನ ಮಾಡಿದ್ದಾರೆ.

Actor Sudeep and Nithya menen sings a song for 'Kotigobba 2'

ಇನ್ನು ಇದೇ ತಿಂಗಳ (ಜೂನ್) ಅಂತ್ಯದಲ್ಲಿ ಸೆನ್ಸಾರ್ ಅಂಗಳಕ್ಕೆ ಕಾಲಿಡಲು ಸಜ್ಜಾಗಿರುವ 'ಕೋಟಿಗೊಬ್ಬ 2' ಚಿತ್ರವನ್ನು ಮುಂದಿನ ತಿಂಗಳು (ಜುಲೈ) ಸೂಪರ್ ಸ್ಟಾರ್ ರಜನಿಕಾಂತ್ ಅವರ 'ಕಬಾಲಿ' ತೆರೆಕಂಡ ನಂತರ ಬಿಡುಗಡೆ ಮಾಡಲು ನಿರ್ದೇಶಕ ಕೆ.ಎಸ್ ರವಿಕುಮಾರ್ ಹಾಗೂ ನಿರ್ಮಾಪಕ ಸೂರಪ್ಪ ಬಾಬು ಅವರು ನಿರ್ಧರಿಸಿದ್ದಾರೆ.['ಛೆ' ಸುದೀಪ್ ಅಭಿಮಾನಿಗಳಿಗೆ ಭಾರಿ ನಿರಾಸೆ ಆಗೋ ಸುದ್ದಿ]

English summary
Kannada Actor Sudeep and Actress Nithya menen Teaming up for the first time in the bilingual film, 'Kotigobba 2' in Kannada and 'Mudinja Ivana Pudi' in Tamil, the actors have now lending their voice for a romantic duet in the film. The movie is directed by KS Ravikumar.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada