»   » ಟ್ವಿಟ್ಟರ್ ನಲ್ಲಿ ಸುದೀಪ್ ಮತ್ತು ಪವನ್ ಪ್ರಶ್ನೋತ್ತರ ಕಲರವ

ಟ್ವಿಟ್ಟರ್ ನಲ್ಲಿ ಸುದೀಪ್ ಮತ್ತು ಪವನ್ ಪ್ರಶ್ನೋತ್ತರ ಕಲರವ

Posted By:
Subscribe to Filmibeat Kannada

ಇತ್ತೀಚೆಗೆ ತೆರೆಕಂಡ ಪವನ್ ಕುಮಾರ್ ನಿರ್ದೇಶನದ 'ಯು-ಟರ್ನ್' ಸಿನಿಮಾ ಎಲ್ಲರ ಮೆಚ್ಚುಗೆ ಗಳಿಸಿತ್ತು. ಇದೀಗ ಈ ಚಿತ್ರದ ಬಗ್ಗೆ ನಟ ಸುದೀಪ್ ಮತ್ತು ನಿರ್ದೇಶಕ ಪವನ್ ಕುಮಾರ್ ಅವರು ಟ್ವಿಟ್ಟರ್ ನಲ್ಲಿ ನಡೆಸಿರುವ ಪ್ರಶ್ನೋತ್ತರ ಕಾರ್ಯ ಸಾಮಾಜಿಕ ಜಾಲತಾಣಗಳಲ್ಲಿ ಸಂಚಲನ ಸೃಷ್ಟಿಸಿದೆ.

ಥ್ರಿಲ್ಲರ್ 'ಯು-ಟರ್ನ್' ಚಿತ್ರ ನೋಡಿ ಮನಸಾರೆ ಹೊಗಳಿರುವ ಕಿಚ್ಚ ಸುದೀಪ್ ಅವರು "ಮೊದಲನೇಯದಾಗಿ 'ಯು-ಟರ್ನ್' ಚಿತ್ರಕ್ಕೆ ಹಾಗೂ ಸಂಪೂರ್ಣ ಚಿತ್ರತಂಡಕ್ಕೆ ನಾನು ಕಂಗ್ರಾಜ್ಯುಲೇಷನ್ ಹೇಳ್ತೀನಿ. ತುಂಬಾ ಅದ್ಭುತವಾಗಿ ಸಿನಿಮಾ ಬಂದಿದೆ. ಪ್ರತಿಯೊಬ್ಬರು ತುಂಬಾ ಅದ್ಭುತವಾದ ನಟನೆ ಮಾಡಿದ್ದೀರಾ" ಎಂದು ಸುದೀಪ್ ಅವರು ಅಭಿನಂದನೆ ತಿಳಿಸಿದ್ದಾರೆ.[ಯು ಟರ್ನ್: ಸಂದೇಶ ಸಾರುವ ತಿರುವಿನಲ್ಲಿ ಥ್ರಿಲ್ಲಿಂಗ್ ಪ್ರಯಾಣ]


Actor Sudeep and Pawan Kumar's twitter Q and A about Kannada movie 'U Turn'

'ನನ್ನಲ್ಲಿ ಕೆಲವು ಪ್ರಶ್ನೆಗಳು ಇತ್ತು 'ಕೆಲವು ತಿಂಗಳುಗಳ ಹಿಂದೆ ನಿಮ್ಮ ಬಗ್ಗೆ ಆರ್ಟಿಕಲ್ ಓದಿದೆ, 'ಸ್ಟಾರ್ಸ್ ಒಟ್ಟಿಗೆ ನಾನು ಸಿನಿಮಾ ಮಾಡಲ್ಲ ಅಂತ, ಈ ಲಿಸ್ಟ್ ನಲ್ಲಿ ಯಾರ್ಯಾರು ಬರ್ತಾರೆ ಅಂತ ಕೇಳ್ಬೋದಾ? ಅಂತ ಕಿಚ್ಚ ಸುದೀಪ್ ಅವರು ಪ್ರಶ್ನೆ ಮಾಡಿ ವಿಡಿಯೋ ಒಂದನ್ನು ಟ್ವಿಟ್ಟರ್ ನಲ್ಲಿ ಹರಿಯಬಿಟ್ಟಿದ್ದರು. [ಪವನ್ ಕುಮಾರ್ 'ಯು-ಟರ್ನ್'ಗೆ ಟ್ರಾಫಿಕ್ ಪೊಲೀಸ್ ಅಧಿಕಾರಿ ಫಿದಾ]


ನಿರ್ದೇಶಕ ಪವನ್ ಕುಮಾರ್: "ನಾನು ಈಗಷ್ಟೇ ಎದ್ದೆ, ಈ ಟ್ವೀಟ್ ನೋಡಿಬಿಟ್ಟು ಇನ್ನೂ ಎದ್ದಿದ್ದೀನೋ ಇಲ್ವಾ ಅಂತ ನನಗೆ ಡೌಟ್ ಬರ್ತಾ ಇದೆ. ಧನ್ಯವಾದ ನಮ್ಮ ಸಿನಿಮಾ ನೋಡಿ ಇಷ್ಟಪಟ್ಟಿದ್ದಕ್ಕೆ. ನಮಗೆ ಈಗ ಒಂದು ಆಡಿ ಕಾರು ಬೇಕಾಗಿತ್ತು. ಆದ್ರೆ ಅದನ್ನು ತಗೊಳಕ್ಕೆ ಆಗಲ್ಲ ಅಂತ ಗೊತ್ತಾದಾಗ, ಬೇಜಾರು ಮಾಡಿಕೊಳ್ಳುವ ಬದಲು ನಾನು ಆಡಿ ಕಾರು ಓಡ್ಸಲ್ಲ ಅಂತ ಹೇಳಬಹುದು. ಹಾಗೆ ನಾನು ಕೂಡ ಹೀಗೆ ಹೇಳಿದೆ" ಎಂದು ಪವನ್ ಕುಮಾರ್ ಅವರು ಸುದೀಪ್ ಅವರ ಪ್ರಶ್ನೆಗೆ ನಾಟಕೀಯವಾಗಿ ಉತ್ತರ ಕೊಟ್ಟಿದ್ದಾರೆ.


Actor Sudeep and Pawan Kumar's twitter Q and A about Kannada movie 'U Turn'

ಅಂದಹಾಗೆ ಈ ನಟ ಮತ್ತು ನಿರ್ದೇಶಕರ ಕಾಮಿಡಿ ಸಂಬಾಷಣೆ ಟ್ವಿಟ್ಟರ್ ನಲ್ಲಿ ವೈರಲ್ ಆಗಿದ್ದು, ವೀಕ್ಷಕರು ಕೂಡ ಸಖತ್ ಎಂಜಾಯ್ ಮಾಡುವಂತಿದೆ. ಸದ್ಯಕ್ಕೆ ಮೇಲೆ ನಾವು ಹೇಳಿರುವ ಪ್ರಶ್ನೆ ಮತ್ತು ಉತ್ತರ ಜಸ್ಟ್ ಸ್ಯಾಂಪಲ್ ಅಷ್ಟೇ. ಇಂತಹದೇ 3-4 ಪ್ರಶ್ನೆಗಳನ್ನು ಸುದೀಪ್ ಅವರು ಕೇಳಿದ್ದು, ಪವನ್ ಅವರು ಕೂಡ ಅಷ್ಟೇ ಫನ್ನಿಯಾಗಿ ಉತ್ತರ ನೀಡಿದ್ದಾರೆ.[ಡಬ್ಬಲ್ ರೋಡ್ ಫ್ಲೈ ಓವರ್ ಕಾಮಗಾರಿ ಮಾಡಿದ 'ಯು-ಟರ್ನ್' ಚಿತ್ರತಂಡ]


ಇವರಿಬ್ಬರ ತಮಾಷೆಯುಳ್ಳ ಮುಕ್ತ ಸಂಭಾಷಣೆಯ ಸಂಪೂರ್ಣ ವಿಡಿಯೋ ಇಲ್ಲಿದೆ, ನೀವೂ ನೋಡಿ ಎಂಜಾಯ್ ಮಾಡಿ...English summary
Kannada Actor Kichcha Sudeep and Kannada Director Pawan Kumar's Twitter Question and Answer about Kannada movie 'U Turn'. Watch Video here.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada