Just In
Don't Miss!
- Education
DFCCIL Recruitment 2021: 1099 ಜ್ಯೂನಿಯರ್ ಮ್ಯಾನೇಜರ್ ಮತ್ತು ಎಕ್ಸಿಕ್ಯುಟಿವ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- News
ಕೆಜಿಎಫ್ನಲ್ಲಿ ಮಹದೇವಪುರ ಸಬ್ ಇನ್ಸ್ಪೆಕ್ಟರ್ಗೆ ಚಾಕು ಇರಿತ
- Sports
ಭಾರತ vs ಇಂಗ್ಲೆಂಡ್: ಧೋನಿ ದಾಖಲೆ ಸರಿದೂಗಿಸಿದ ವಿರಾಟ್ ಕೊಹ್ಲಿ
- Lifestyle
ಈ 7 ಬಗೆಯ ಆಹಾರಗಳು ಕೂದಲು ಉದುರುವ ಸಮಸ್ಯೆ ಹೆಚ್ಚಿಸುವುದು
- Automobiles
ಬಿಡುಗಡೆಯ ನಂತರ ಎರಡನೇ ಬಾರಿಗೆ ಬೆಲೆ ಹೆಚ್ಚಳ ಪಡೆದುಕೊಂಡ ನಿಸ್ಸಾನ್ ಮ್ಯಾಗ್ನೈಟ್
- Finance
ಚಿನ್ನದ ಬೆಲೆ ಇಳಿಕೆ: ಗರಿಷ್ಠ ಮಟ್ಟಕ್ಕಿಂತ 11,500 ರೂ. ಕಡಿಮೆ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಎಲ್ಲರ ಹಣ ತಮ್ಮಪ್ಪನದ್ದೇ ಎಂದು ಕೊಂಡಿದ್ದಾರೆ ಕೆಲವರು: ಸುದೀಪ್ ಆಕ್ರೋಶ
ನಟ ಸುದೀಪ್ ಬೇಸರಗೊಂಡಿದ್ದಾರೆ. ತಮ್ಮ ಸೀಮಿತ ಶಕ್ತಿ, ಸಂಪನ್ಮೂಲದಲ್ಲಿಯೂ ಸಾಕಷ್ಟು ಸಮಾಜಮುಖಿ ಕೆಲಸ ಮಾಡಿಯೂ ಟೀಕೆಗಳು ಕೇಳಬೇಕಾಗಿ ಬರುತ್ತಿರುವುದು ಸುದೀಪ್ ಗೆ ಬೇಸರ ತರಿಸಿದೆ.
ಖಾಸಗಿ ಮಾಧ್ಯಮವೊಂದಕ್ಕೆ ನೀಡಿದ ಚುಟುಕು ಸಂದರ್ಶನದಲ್ಲಿ ಮಾತನಾಡಿದ ನಟ ಸುದೀಪ್, ತಾವೇನೂ ಮಾಡದೇ ಇದ್ದರೂ ಸಹ ಕೆಲಸ ಮಾಡುವವರ ಬಗ್ಗೆ ಕೊಂಕು ಮಾತನಾಡುವವರೆಗೆ ಬಗ್ಗೆ ಸುದೀಪ್ ಬೇಸರ ವ್ಯಕ್ತಪಡಿಸಿದ್ದಾರೆ.
ನಿರೂಪಕಿಯ ಪ್ರಶ್ನೆಗೆ ಉತ್ತರಿಸಿದ ನಟ ಸುದೀಪ್, 'ನಾವು ಬುರ್ಜ್ ಖಲೀಫಾ ಗೆ ಹೋಗಿ, ಕನ್ನಡ ಬಾವುಟ ಹಾರಿಸಿದೆವು, ಸಿನಿಮಾದ ಪ್ರಚಾರ ಮಾಡಿದೆವು. ಆದರೆ ಕೆಲವರು ಅದರ ಬಗ್ಗೆಯೂ ಟೀಕೆ ಮಾಡಿದರು. ಅದಕ್ಕೆ ಅಷ್ಟೋಂದು ಹಣ ಖರ್ಚು ಮಾಡುವ ಬದಲು ಬಡವರಿಗೆ, ಶಿಕ್ಷಣಕ್ಕೆ ಕೊಡಬಹುದಿತ್ತು ಎಂದು ಕೆಲವು ಕೊಂಕು ನುಡಿದಿದ್ದಾರೆ' ಎಂದರು ಸುದೀಪ್.

'ಎಲ್ಲರ ದುಡ್ಡ ತಮ್ಮ ಅಪ್ಪನದ್ದು ಎಂದುಕೊಂಡಿದ್ದಾರೆ'
'ಎಲ್ಲರ ದುಡ್ಡು ಸಹ ತಮ್ಮ ಸ್ವಂತ ಅಪ್ಪನದ್ದೇ ಎಂದು ಕೆಲವರು ತಿಳಿದುಕೊಂಡು ಬಿಟ್ಟಿದ್ದಾರೆ. ನಾನು ಸಿಎಂ ಅಲ್ಲ, ಪಿಎಂ ಅಲ್ಲ. ನಾನು ಅಂಬಾನಿಯೂ ಅಲ್ಲ. ಆದರೆ ನಾನು ಸಂಪಾದಿಸಿದ ಹಣದಲ್ಲಿ ನನ್ನ ಶಕ್ತಿ ಅನುಸಾರ ಸಾಮಾಜಿಕ ಕಾರ್ಯಗಳನ್ನು ಮಾಡುತ್ತಾ ಬರುತ್ತಿದ್ದೇನೆ. ಚಾರಿಟೇಬಲ್ ಟ್ರಸ್ಟ್ ಮೂಲಕ ಶಾಲೆ ದತ್ತು, ಮಕ್ಕಳ ಆಪರೇಷನ್ ಗೆ ಸಹಾಯ. ಕುಟುಂಬ ದತ್ತು, ಕೊರೊನಾ ಸಮಯದಲ್ಲಿ ಸಹಾಯ. ಇನ್ನೂ ಹಲವು ಕಾರ್ಯಗಳನ್ನು ಮಾಡುತ್ತಾ ಬರುತ್ತಿದ್ದೇನೆ. ಆದರೂ ಕೆಲವರು ಟೀಕೆ ಮಾಡುವುದು ನಿಲ್ಲಿಸುವುದಿಲ್ಲ. ವಿಶೇಷವೆಂದರೆ ಹೀಗೆ ಟೀಕೆ ಮಾಡುವವರು ಸ್ವತಃ ಅವಕಾಶವಿದ್ದರೂ ಏನೂ ಮಾಡುವುದಿಲ್ಲ' ಎಂದು ದೀರ್ಘವಾದ ವಾದವನ್ನೇ ಮಂಡಿಸಿದರು.

ಸುಧಾಕರ್ ಅವರೇ ನಮ್ಮ ಕೆಲಸ ಮೆಚ್ಚಿ ಟ್ವೀಟ್ ಮಾಡಿದ್ದಾರೆ: ಸುದೀಪ್
'ನಾವು ಸಾಕಷ್ಟು ಕೆಲಸ ಮಾಡಿದ್ದೇವೆ. ನಮ್ಮ ಕೆಲಸ ನೋಡಿ ಸಚಿವ ಸುಧಾಕರ್ ಅವರೇ ಟ್ವೀಟ್ ಮಾಡಿ ಅಭಿನಂದಿಸಿದ್ದಾರೆ. ಆದರೆ ಕೆಲವರು ಯೋಚನೆ ಮಾಡುವ ರೀತಿ ಬಹಳ ಋಣಾತ್ಮಕವಾಗಿದೆ. ಹಣವನ್ನು ಇದಕ್ಕೆ ಖರ್ಚು ಮಾಡಬೇಕಿತ್ತು, ಅದಕ್ಕೆ ಖರ್ಚು ಮಾಡಬೇಕಿತ್ತು ಎನ್ನುತ್ತಾರೆ. ಸಿನಿಮಾದ ಪ್ರೊಮೋಷನ್ ಮಾಡುವುದು ತಪ್ಪ. ಸಿನಿಮಾ ಗೆಲ್ಲಿಸಬೇಕು ಎಂಬುದು ನಿರ್ಮಾಪಕನ ಆಸೆಯಾಗಿರುತ್ತದೆ. ಅದಕ್ಕೆ ಬೇಕಾದ ಕ್ರಮವನ್ನು ಆತ ತೆಗೆದುಕೊಳ್ಳುತ್ತಾನೆ' ಎಂದಿದ್ದಾರೆ ನಟ ಸುದೀಪ್.

ಕೊಂಕು ಮಾತನಾಡುವವರು, ಕೆಲಸ ಮಾಡಿ ತೋರಿಸಲಿ: ಸುದೀಪ್
'ಕೊಂಕು ಮಾತನಾಡುವವರು ಮುಂದೆ ಬಂದು ಕೆಲಸ ಮಾಡಲಿ ನಾನು ಮೆಚ್ಚಿಕೊಳ್ಳುತ್ತೇನೆ. ಆದರೆ ಸುಮ್ಮನೇ ಮನೆಯಲ್ಲಿ ಸುಖವಾಗಿ ಕುಳಿತು, ಕೆಲಸ ಮಾಡುತ್ತಿರುವವರ ಬಗ್ಗೆ ಋಣಾತ್ಮಕ ಕಮೆಂಟ್ ಮಾಡುತ್ತಾ ಕೂರುವುದು ಮಾನವೀಯತೆ ಅಲ್ಲ' ಎಂದಿದ್ದಾರೆ ಸುದೀಪ್.

ನಾನು ಏನು ಎನ್ನುವುದು ನನ್ನ ಗೆಳೆಯರಿಗೆ ಗೊತ್ತು: ಸುದೀಪ್
'ನಾನು ಏನು ಎನ್ನುವುದು ನನ್ನ ಗೆಳೆಯರಿಗೆ ಗೊತ್ತು, ನನ್ನ ಅಭಿಮಾನಿಗಳಿಗೆ ಗೊತ್ತು. ನನ್ನ ಕುಟುಂಬಕ್ಕೆ, ನ್ನ ತಂದೆ-ತಾಯಿಗೆ ಗೊತ್ತು ಅಷ್ಟು ಸಾಕು. ಏನನ್ನಾದರೂ ಬದಲಾವಣೆ ಮಾಡಲು ರಾಜಕೀಯಕ್ಕೇ ಬರಬೇಕು ಎಂಬುದೇನೂ ಇಲ್ಲ. ಪವರ್ ಇಲ್ಲದೆಯೂ ಒಳ್ಳೆಯ ಕೆಲಸ ಮಾಡಬಹುದು. ನಾನು ನಟ ಎಂಬ ಕಾರಣಕ್ಕೆ ಸಾಮಾಜ ಸೇವೆ ಮಾಡುತ್ತಿದ್ದೇನೆ ಎಂದೇನೂ ಇಲ್ಲ. ಇದು ನನ್ನ ಆತ್ಮಖುಷಿಗೆ ಮಾಡುತ್ತಿರುವ ಕೆಲಸ. ದೇವರು ತುಸು ಕೊಟ್ಟಿದ್ದಾನೆ, ಅದರಲ್ಲಿ ತುಸು ಹಿಂದಿರುಗಿಸುತ್ತಿದ್ದೇನೆ ಅಷ್ಟೆ' ಎಂದಿದ್ದಾರೆ ಸುದೀಪ್.