For Quick Alerts
  ALLOW NOTIFICATIONS  
  For Daily Alerts

  KPL ಕ್ರಿಕೆಟ್ ಲೀಗ್ ಗೆ ಬಾಯ್ ಬಾಯ್ ಹೇಳ್ತಾರ ಕಿಚ್ಚ ಸುದೀಪ್?

  By Suneetha
  |

  ಸ್ಯಾಂಡಲ್ ವುಡ್ ನ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು ಒಂಥರಾ ಆಲ್ ರೌಂಡರ್ ಅಂದ್ರೂ ತಪ್ಪಿಲ್ಲ. ಯಾಕೆಂದರೆ ಇವರು ಬರೀ ನಟ ಮಾತ್ರವಲ್ಲದೇ, ನಿರ್ದೇಶನ-ನಿರ್ಮಾಣದ ಜೊತೆಗೆ ಇವರಲ್ಲೊಬ್ಬ, ಉತ್ತಮ ಕ್ರಿಕೆಟ್ ಆಟಗಾರ ಇದ್ದಾನೆ.

  (ಕೆಪಿಎಲ್) ಕರ್ನಾಟಕ ಪ್ರೀಮಿಯರ್ ಲೀಗ್ ನಲ್ಲಿ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರ 'ರಾಕ್ ಸ್ಟಾರ್' ಕೂಡ ಭಾಗವಹಿಸಿತ್ತು. ಆದರೆ ಈ ಬಾರಿ ಸುದೀಪ್ ಸಾರಥ್ಯದ 'ರಾಕ್ ಸ್ಟಾರ್' ಸೋಲುಂಡಿತ್ತು.[ಕೆಪಿಎಲ್ 2016: ಯಾವ ತಂಡಕ್ಕೆ ಎಷ್ಟು ಮೊತ್ತ ಬಹುಮಾನ?]

  ಇದೀಗ ಕಿಚ್ಚ ಸುದೀಪ್ ಅವರ ಕಡೆಯಿಂದ ಬಂದಿರೋ ಲೇಟೆಸ್ಟ್ ಮಾಹಿತಿ ಏನಪ್ಪಾ ಅಂದ್ರೆ, ಸುದೀಪ್ ಅವರು ಕೆ.ಪಿ.ಎಲ್ ಕ್ರಿಕೆಟ್ ಲೋಕವನ್ನು ತೊರೆಯುತ್ತಾರಂತೆ. ಈ ವಿಚಾರವನ್ನು ಖುದ್ದು ಸುದೀಪ್ ಅವರ ಟ್ವೀಟ್ ಮಾಡುವ ಮೂಲಕ, ಅಭಿಮಾನಿಗಳಿಗೆ ಸಣ್ಣ ಸುಳಿವು ಕೊಟ್ಟಿದ್ದಾರೆ.

  Actor Sudeep Announced Retirement from KPL

  "ಬಹುಶಃ ಇದು ನನ್ನ ಕೊನೆಯ ಕೆ.ಪಿ.ಎಲ್ ಜರ್ನಿ. ಮತ್ತು ನಾಳೆ ನಡೆಯುವ ಪಂದ್ಯ ನನ್ನ ಕೊನೆಯ ಆಟ. ನಾನು ಇಷ್ಟರವರೆಗೆ ಅಗಾಧ ಪ್ರತಿಭೆಗಳ ಜೊತೆ ಕಳೆದ ಆ ಪ್ರತಿಯೊಂದು ಕ್ಷಣ ಕೂಡ ಅದ್ಭುತ. ನನಗೆ ಈ ಅವಕಾಶ ಕೊಟ್ಟ ಕರ್ನಾಟಕ ರಾಜ್ಯ ಕ್ರಿಕೆಟ್ ಮಂಡಳಿಗೆ ಧನ್ಯವಾದ" ಅಂತ ಖುದ್ದು ಕಿಚ್ಚ ಸುದೀಪ್ ಅವರೇ ಟ್ವೀಟ್ ಮಾಡಿದ್ದಾರೆ.[ಕಿಚ್ಚ ಸುದೀಪ್ 'ಸ್ಟಾರ್ಸ್' ವಿರುದ್ಧ ರಾಗಿಣಿ 'ಟಸ್ಕರ್ಸ್' ಗೆ ಜಯ]

  ಕಿಚ್ಚ ಸುದೀಪ್ ಅವರ ಈ ನಿರ್ಧಾರ ಸಾವಿರಾರು ಅಭಿಮಾನಿಗಳಿಗೆ ಬೇಸರ ತರಿಸಿದೆ. ಕಿಚ್ಚ ಸುದೀಪ್ ಸಾರಥ್ಯದ ರಾಕ್ ಸ್ಟಾರ್ ತಂಡದಲ್ಲಿ ಹಲವು ಸೆಲೆಬ್ರಿಟಿಗಳು ಮತ್ತು ಕ್ರಿಕೆಟ್ ಆಟಗಾರರು ಸ್ಥಾನ ಪಡೆದುಕೊಂಡಿದ್ದರು. ಇನ್ನು ಕಿಚ್ಚ ಸುದೀಪ್ ಅವರು ಈ ನಿರ್ಧಾರವನ್ನು ತೆಗೆದುಕೊಳ್ಳಲು ಮೂಲ ಕಾರಣ ಏನು ಅನ್ನೋದು ಇನ್ನೂ ಬಹಿರಂಗವಾಗಿಲ್ಲ.

  English summary
  Apart from being a proficient Actor, Sudeep is also an cricket player. As per the latest reports, the 43 year old star announced his retirement from Karnataka Premier League.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X