»   » ಯಶ್ ಹಿಂದಿಕ್ಕಿ ನಂ.1 ಪಟ್ಟ ಗಿಟ್ಟಿಸಿಕೊಂಡ ಕಿಚ್ಚ ಸುದೀಪ್

ಯಶ್ ಹಿಂದಿಕ್ಕಿ ನಂ.1 ಪಟ್ಟ ಗಿಟ್ಟಿಸಿಕೊಂಡ ಕಿಚ್ಚ ಸುದೀಪ್

Posted By:
Subscribe to Filmibeat Kannada

ಪ್ರತೀ ವರ್ಷ 'ಬೆಂಗಳೂರು ಟೈಮ್ಸ್' ನವರು ನಡೆಸುವ ಹಾಟ್ ಐಕಾನ್ ಆನ್ ಲೈನ್ ಮತ ಸಮೀಕ್ಷೆಯಲ್ಲಿ ಎಲ್ಲರ ಮೆಚ್ಚಿನ ಆರಡಿ ಎತ್ತರದ ನಟ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು 2015ನೇ ಸಾಲಿನ 'ಮೋಸ್ಟ್ ಡಿಸೈರಬಲ್ ಮೆನ್' ಎಂದು ಕರೆಸಿಕೊಂಡಿದ್ದಾರೆ.

ಸ್ಯಾಂಡಲ್ ವುಡ್ ಸೇರಿದಂತೆ ದಕ್ಷಿಣ ಭಾರತ ಹಾಗೂ ಬಾಲಿವುಡ್ ನಲ್ಲಿ ತಮ್ಮದೇ ಆದ ಛಾಪು ಮೂಡಿಸಿ, ಎಲ್ಲರ ಹಾಟ್ ಫೇವರಿಟ್ ಆಗಿರುವ ನಟ ಕಿಚ್ಚ ಸುದೀಪ್ ಅವರು ಕಳೆದ ಬಾರಿ ಎರಡನೇ ಸ್ಥಾನದಲ್ಲಿದ್ದರು.[ಕಿಚ್ಚ ಸುದೀಪ್ ಹಿಂದಿಕ್ಕಿದ ಯಶ್ ನಂ.1]

Actor Sudeep Bangalore Times 'Most Desirable Men' 2015

2013 ರಲ್ಲಿ ರಾಕಿಂಗ್ ಸ್ಟಾರ್ ಯಶ್ ಅವರು 'ಮೋಸ್ಟ್ ಡಿಸೈರಬಲ್ ಮೆನ್' ಆಗಿದ್ದರು. ಈ ಬಾರಿ ಕಿಚ್ಚ ಸುದೀಪ್ ಅವರು ಯಶ್ ಅವರನ್ನು ಬೀಟ್ ಮಾಡಿ ಮೊದಲನೇ ಸ್ಥಾನ ಗಿಟ್ಟಿಸಿಕೊಂಡು 2015ನೇ ಸಾಲಿನ 'ಮೋಸ್ಟ್ ಡಿಸೈರಬಲ್ ಮೆನ್' ಎಂಬ ಕಿರೀಟವನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ.

ಈ ಬಾರಿ ಕಿಚ್ಚ ಸುದೀಪ್ ಅವರು ಆಯ್ಕೆಯಾಗಿರುವುದರಲ್ಲಿ ಯಾವುದೇ ಸಂದೇಹವಿಲ್ಲ ಯಾಕೆಂದರೆ ನಿರ್ದೇಶಕ ಎಸ್ ಎಸ್ ರಾಜಮೌಳಿ, ನಿರ್ದೇಶಕ ರಾಮ್ ಗೋಪಾಲ್ ವರ್ಮಾ, ಅಮಿತಾಭ್ ಬಚ್ಚನ್ ಮತ್ತು ಶ್ರೀದೇವಿಯವರಂತಹ ದೊಡ್ಡವರ ಜೊತೆ ಕಾಣಿಸಿಕೊಂಡು ಎಲ್ಲಾ ಚಿತ್ರರಂಗ ಕ್ಷೇತ್ರದಲ್ಲೂ ತಮ್ಮ ಕಂಪನ್ನು ಬೀರಿದ್ದಾರೆ.[ಕೃತಿ ಮುಡಿಗೇರಿದ 'ಬೆಂಗಳೂರಿಗರ ಬಹುಮೆಚ್ಚುಗೆಯ ನಟಿ' ಕಿರೀಟ]

ರಾಕಿಂಗ್ ಸ್ಟಾರ್ ಯಶ್ ಅವರು ಈ ಬಾರಿ ಎರಡನೇ ಸ್ಥಾನಕ್ಕೆ ಕುಸಿದಿದ್ದು, 'ಜೆಸ್ಸಿ' ಖ್ಯಾತಿಯ ಪ್ರತಿಭಾವಂತ ನಟ ಧನಂಜಯ್ ಅವರು ಮೂರನೇ ಸ್ಥಾನವನ್ನು ಗಿಟ್ಟಿಸಿಕೊಂಡಿದ್ದಾರೆ. ಪವರ್ ಸ್ಟಾರ್ ಪುನೀತ್‌ ರಾಜ್ ಕುಮಾರ್ ಅವರು ಈ ಬಾರಿ 4ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರೆ, ಕ್ರಿಕೆಟಿಗ ರಾಹುಲ್ ದ್ರಾವಿಡ್ ಮತ್ತು ಮನೀಶ್ ಪಾಂಡೆ 5ನೇ ಮತ್ತು 6ನೇ ಸ್ಥಾನದಲ್ಲಿದ್ದಾರೆ.

ಪಟ್ಟಿಯಲ್ಲಿ ದೂದ್ ಪೇಡಾ ದಿಗಂತ್, ಶ್ರೀಮುರಳಿ, ರಕ್ಷಿತ್ ಶೆಟ್ಟಿ, ಬಿಗ್ ಬಾಸ್ ಚಂದನ್, ದರ್ಶನ್, ಸೂರಜ್ ಗೌಡ, ಪ್ರತೀಕ್ ಜೈನ್, ಉಪೇಂದ್ರ, ಜೆ.ಕೆ(ಜಯ್ ಕಾರ್ತಿಕ್), ರಾಹುಲ್ ರಾಜಶೇಖರನ್ ನಾಯರ್, ಅವಿನಾಶ್ ನರಸಿಂಹ ರಾಜು, ರಾಹುಲ್ ಆರ್.ಕೆ, ನಿರುಪ್ ಭಂಡಾರಿ, ಗುರುನಂದನ್, ಸೃಜನ್ ಲೋಕೇಶ್, ವಿಜಯ್ ಸೂರ್ಯ, ರಘು ಮುಖರ್ಜಿ, ರಾಬಿನ್ ಉತ್ತಪ್ಪ, ಅವರು ಇದ್ದು, ಎನ್.ಸಿ ಅಯ್ಯಪ್ಪ ಅವರು 25ನೇ ಸ್ಥಾನದಲ್ಲಿದ್ದಾರೆ.[ರಮ್ಯಾ ಕೈ ಜಾರಿದ 'ಹಾಟ್' ಐಕಾನ್ ಪಟ್ಟ ಕೃತಿ ಮುಡಿಗೆ]

ಐ ಟೈಮ್ಸ್ ವೆಬ್ ತಾಣದಲ್ಲಿ ಆನ್ ಲೈನ್ ಸಮೀಕ್ಷೆ ನಡೆಸಲಾಗಿತ್ತು. ಈ ಸ್ಪರ್ಧೆಯಲ್ಲಿ ಚಲನಚಿತ್ರ ನಟರು, ಮಾಡೆಲ್ ಗಳು ಹಾಗೂ ಕ್ರಿಕೆಟಿಗರು ಕಣದಲ್ಲಿದ್ದರು. ಓದುಗರಿಗೆ ಹಾಗೂ ಅಭಿಮಾನಿಗಳಿಗೆ ತಮ್ಮ ನೆಚ್ಚಿನ ಸ್ಟಾರ್ ಗಳಿಗೆ ಮತ ಹಾಕುವ ವ್ಯವಸ್ಥೆ ಮಾಡಲಾಗಿತ್ತು. ಈ ಬಾರಿಯ 'ಮೋಸ್ಟ್ ಡಿಸೈರಬಲ್ ಮೆನ್' ಫಲಿತಾಂಶ ಏಪ್ರಿಲ್ 26, ಮಂಗಳವಾರ ಪ್ರಕಟಗೊಂಡಿದೆ.

-
-
-
-
-
-
-
-
-
-
-
-
-
-
-
-
-
-
'ಬೆಂಗಳೂರಿಗರ ಮೆಚ್ಚಿನ ನಟ' ಪಟ್ಟ ಹೊತ್ತುಕೊಂಡ ಕಿಚ್ಚ ಸುದೀಪ್

'ಬೆಂಗಳೂರಿಗರ ಮೆಚ್ಚಿನ ನಟ' ಪಟ್ಟ ಹೊತ್ತುಕೊಂಡ ಕಿಚ್ಚ ಸುದೀಪ್

-
-
-
-
-
English summary
Kannada Actor Sudeep has topped the list of Most Desirable Men 2015 In a poll conducted by Bangalore Times. Kannada Actor Yash is runner up. Here are the Bangalore Times Most Desirable Men 2015 list.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada