twitter
    For Quick Alerts
    ALLOW NOTIFICATIONS  
    For Daily Alerts

    ಸಿದ್ಧರಾಮಯ್ಯ ಭೇಟಿ ಬೆನ್ನಲ್ಲೆ ರಾಜಕೀಯ ಪ್ರವೇಶ ಸುದ್ದಿ ಬಗ್ಗೆ ಸುದೀಪ್ ಮಾತು!

    By Naveen
    |

    ಕರ್ನಾಟಕ ಚುನಾವಣೆ ಹತ್ತಿರಕ್ಕೆ ಬರುತ್ತಿದೆ. ಅದರ ಪ್ರಭಾವ ಚಿತ್ರರಂಗದ ಮೇಲೆ ಸಹ ಬೀರುತ್ತಿದೆ. ಈಗಾಗಲೇ ಅನೇಕ ನಟ ನಟಿಯರು ಮುಂದಿನ ಚುನಾವಣೆಯಲ್ಲಿ ಸ್ಪರ್ಧೆ ಮಾಡಲು ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಈಗ ನಟ ಸುದೀಪ್ ಸಹ ರಾಜಕೀಯದ ಬಗ್ಗೆ ಮಾತನಾಡಿದ್ದಾರೆ.

    ಇತ್ತೀಚಿಗಷ್ಟೆ ನಟ ಸುದೀಪ್ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರನ್ನು ಭೇಟಿ ಮಾಡಿದ್ದರು. ಅದರ ಹಿಂದೆಯೇ ಈಗ ಸುದೀಪ್ ರಾಜಕೀಯ ಸುದ್ದಿ ಹರಿದಾಡಿದೆ. ಇದೀಗ ಉಪೇಂದ್ರ ನಂತರ ಸುದೀಪ್ ಸಹ ರಾಜಕೀಯ ಪ್ರವೇಶ ಮಾಡುತ್ತಾರೆ. ಕಾಂಗ್ರೆಸ್ ಪಕ್ಷದಿಂದ ಅವರು ಕಣಕ್ಕಿಳಿಯುತ್ತಾರೆ ಎನ್ನುವ ಅನೇಕ ಗಾಸಿಪ್ ಸೃಷ್ಟಿಯಾಗಿವೆ. ಆದರೆ ಈಗ ಸುದೀಪ್ ಈ ಎಲ್ಲ ರಾಜಕೀಯದ ವಿಷಯದ ಬಗ್ಗೆ ಮಾತನಾಡಿದ್ದಾರೆ. ಮುಂದೆ ಓದಿ..

    ನಿರಾಕರಿಸಿದ ಸುದೀಪ್

    ನಿರಾಕರಿಸಿದ ಸುದೀಪ್

    ತಾವು ರಾಜಕೀಯ ಪ್ರವೇಶ ಮಾಡುವ ಸುದ್ದಿಯ ಬಗ್ಗೆ ಮಾತನಾಡಿರುವ ಸುದೀಪ್ ಆ ಸುದ್ದಿಯನ್ನು ನಿರಾಕರಿಸಿದ್ದಾರೆ. ಈ ಮೂಲಕ ಎಲ್ಲ ಗಾಸಿಪ್ ಗಳಿಗೆ ಕಿಚ್ಚ ತೆರೆ ಎಳೆದಿದ್ದಾರೆ.

    ರಾಜಕೀಯ ಸುದ್ದಿ ಬಗ್ಗೆ ಸುದೀಪ್ ಮಾತು

    ರಾಜಕೀಯ ಸುದ್ದಿ ಬಗ್ಗೆ ಸುದೀಪ್ ಮಾತು

    ರಾಜಕೀಯ ಸುದ್ದಿಯ ಬಗ್ಗೆ ಮಾತನಾಡಿರುವ ಸುದೀಪ್ ''ನನಗೆ ರಾಜಕೀಯ ಕ್ಷೇತ್ರದಲ್ಲಿ ಆಸಕ್ತಿ ಇಲ್ಲ. ಸಮಾಜಸೇವೆ ಮಾಡಲು ರಾಜಕೀಯಕ್ಕೆ ಬರಬೇಕು ಅಂತ ಏನು ಇಲ್ಲ. ನಾನು ಒಬ್ಬ ನಟನಾಗಿಯೇ ಅನೇಕ ಸಮಾಜಮುಖಿ ಕೆಲಸವನ್ನು ಮಾಡಿದ್ದೇನೆ'' ಎಂದಿದ್ದಾರೆ.

    ಡಾ.ವಿಷ್ಣು ಸ್ಮಾರಕ ಸಂಬಂಧ ಸಿಎಂ ಅವರನ್ನ ಭೇಟಿ ಮಾಡಿದ ಸುದೀಪ್ಡಾ.ವಿಷ್ಣು ಸ್ಮಾರಕ ಸಂಬಂಧ ಸಿಎಂ ಅವರನ್ನ ಭೇಟಿ ಮಾಡಿದ ಸುದೀಪ್

    ನನಗೆ ರಾಜಕೀಯ ಆಗಿಬರಲ್ಲ

    ನನಗೆ ರಾಜಕೀಯ ಆಗಿಬರಲ್ಲ

    ''ನನಗೆ ರಾಜಕೀಯ ಆಗಿಬರಲ್ಲ. ನಾನು ಒಬ್ಬ ಕಲಾವಿದ. ಸದ್ಯ ಆ ಕೆಲಸದಲ್ಲಿ ನಾನು ಸಕ್ರೀಯನಾಗಿದ್ದೇನೆ. ಒಳ್ಳೆಯ ಕೆಲಸ ಮಾಡಲು ರಾಜಕೀಯಕ್ಕೆ ಹೋಗಬೇಕಿಲ್ಲ. ನಾನು ಈಗಲೂ ಸಮಾಜದಲ್ಲಿ ನೊಂದವರಿಗೆ ಖುಷಿ ನೀಡುವ ಕೆಲಸದಲ್ಲಿ ತೊಡಗಿದ್ದೇನೆ.'' ಎಂದು ರಾಜಕೀಯ ಸುದ್ದಿಯನ್ನು ಸುದೀಪ್ ತಳ್ಳಿ ಹಾಕಿದ್ದಾರೆ.

    ವಿಷ್ಣು ಸ್ಮಾರಕದ ಬಗ್ಗೆ ಮನವಿ

    ವಿಷ್ಣು ಸ್ಮಾರಕದ ಬಗ್ಗೆ ಮನವಿ

    ನಟ ವಿಷ್ಣುವರ್ಧನ್ ಅವರ ಸ್ಮಾರಕ ವಿಷಯದ ಬಗ್ಗೆ ಮನವಿ ಮಾಡಲು ಸುದೀಪ್ ಕೆಲ ದಿನಗಳ ಹಿಂದೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರನ್ನು ಭೇಟಿ ಮಾಡಿದ್ದರು. ಆದರೆ ಇದಕ್ಕೆ ಬಣ್ಣ ಹಚ್ಚಿ ಕೆಲವರು ಸುದೀಪ್ ಕಾಂಗ್ರೆಸ್ ಪಕ್ಷ ಸೇರುತ್ತಾರೆ ಎಂದು ಸುದ್ದಿ ಹಬ್ಬಿಸಿದ್ದರು.

    'ಅಯೋಧ್ಯೆ' ರಾಮಮಂದಿರ ಮಾದರಿಯಲ್ಲಿ 'ವಿಷ್ಣು ಪುಣ್ಯಭೂಮಿ' ನಿರ್ಮಾಣವಾಗುತ್ತಾ ?'ಅಯೋಧ್ಯೆ' ರಾಮಮಂದಿರ ಮಾದರಿಯಲ್ಲಿ 'ವಿಷ್ಣು ಪುಣ್ಯಭೂಮಿ' ನಿರ್ಮಾಣವಾಗುತ್ತಾ ?

    ಪದೇ ಪದೇ ಸುದ್ದಿ

    ಪದೇ ಪದೇ ಸುದ್ದಿ

    ಸುದೀಪ್ ರಾಜಕೀಯ ಸೇರುತ್ತಾರೆ ಎನ್ನುವ ಸುದ್ದಿ ಹಬ್ಬಿರುವುದು ಇದೇ ಮೊದಲೇನಲ್ಲ. ಈಗಾಗಲೇ ಅನೇಕ ಬಾರಿ ಆ ರೀತಿಯ ಸುದ್ದಿ ಕೇಳಿ ಬಂದಿದೆ. ಅದೇ ರೀತಿ ಸುದೀಪ್ ಅನೇಕ ಬಾರಿ ''ನಾನು ರಾಜಕೀಯಕ್ಕೆ ಬರಲ್ಲ'' ಎಂದು ಸ್ಪಷ್ಟವಾಗಿ ಹೇಳಿದ್ದಾರೆ.

    English summary
    Kannada actor Sudeep clarified about his political entry gossip. He told that he is not interested in politics.
    Thursday, December 14, 2017, 13:16
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X