TRENDING ON ONEINDIA
-
ಸಾಕ್ಷ್ಯಾಧಾರ ಇಲ್ಲದೆ ಪಾಕಿಸ್ತಾನವನ್ನು ದೂಷಿಸಬೇಡಿ ಎಂದ ಚೀನಾ
-
7 ಸೀಟರ್ ವೈಶಿಷ್ಟ್ಯತೆಗಳೊಂದಿಗೆ ಬಿಡುಗಡೆಯಾಗಲಿದೆ ಕಿಯಾ ಕಾರ್ನಿವಾಲ್
-
ಯಾವುದೇ ಆಪ್ಗಳ ಕ್ಯಾಶೆ ಕ್ಲಿಯರ್ ಮಾಡುತ್ತಿರಬೇಕು ಏಕೆ ಮತ್ತು ಹೇಗೆ?
-
'ಬೆಲ್ ಬಾಟಮ್' ಪಾಸು, 'ಕೆಮಿಸ್ಟ್ರಿ ಆಫ್ ಕರಿಯಪ್ಪ'ನ ಫಾರ್ಮೂಲಾ ವರ್ಕೌಟ್
-
ಭಾರತ ಪಾಕ್ ನಡುವೆ ಯುದ್ದ ನಡೆದರೆ ಉಂಟಾಗುವ ಆರ್ಥಿಕ ದುಷ್ಪರಿಣಾಮಗಳೇನು?
-
ಮುಖಮೈಥುನ ನಡೆಸುವ ಪುರುಷರಿಗೆ 'ಬಾಯಿ-ಗಂಟಲ ಕ್ಯಾನ್ಸರ್' ಬರಬಹುದು!
-
ಅಭಿಮಾನಿಗಳಿಂದ ಕೊಹ್ಲಿ-ಎಬಿಡಿ ಪೋಸ್ಟರ್ಗೆ ಹಾಲಭಿಷೇಕ: ವಿಡಿಯೋ
-
ಐಟಿಐ ಲಿಮಿಟೆಡ್ ನಲ್ಲಿ ಕಾನೂನು ಪದವಿ ಅಭ್ಯರ್ಥಿಗೆ ಉದ್ಯೋಗಾವಕಾಶ
'ಕೋಟಿಗೊಬ್ಬ' ಹಬ್ಬಕ್ಕೆ ಕಿಚ್ಚನ ಫ್ಯಾನ್ಸ್ ಮಾಡ್ತಿರೋ ಖರ್ಚೆಷ್ಟು.?
ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರ ಸಿನಿಮಾ ತೆರೆಗೆ ಬರುತ್ತೆ ಅಂದ್ರೆ, ಇಡೀ ಕರ್ನಾಟಕದಾದ್ಯಂತ ಹಾಗೂ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಹಬ್ಬದ ವಾತಾವರಣ ಸೃಷ್ಟಿಯಾಗುತ್ತೆ.
ಎಲ್ಲಾ ಚಿತ್ರಮಂದಿರಗಳ ಎದುರಲ್ಲಿ ಬಣ್ಣ-ಬಣ್ಣದ ಕಾಗದ, ಹೂವಿನಿಂದ ಸಿಂಗರಿಸಿರುವ ಚಿತ್ರಮಂದಿರಗಳು, ಒಂಥರಾ ಮದುವೆ ಮನೆಯನ್ನು ಜ್ಞಾಪಿಸುತ್ತದೆ. ಇದೆಲ್ಲಕ್ಕಿಂತ ಹೆಚ್ಚಾಗಿ ಸಿನಿಮಾ ಬಿಡುಗಡೆಯ ದಿನದ ಸಂಭ್ರಮದ ದಿನಕ್ಕೆ ಸಾವಿರಾರು ಅಭಿಮಾನಿಗಳು ಸಾಕ್ಷಿಯಾಗುತ್ತಾರೆ.[ಸುದೀಪ್ ಫ್ಯಾನ್ಸ್ ಗೆ 'ಕೋಟಿಗೊಬ್ಬ-2' ಎಕ್ಸ್ ಕ್ಲೂಸಿವ್ ಶೋ.!]
ಅಂದಹಾಗೆ ತಮ್ಮ ನೆಚ್ಚಿನ ನಟನ ಸಿನಿಮಾ ರಿಲೀಸ್ ಆಗುತ್ತೆ ಅಂದ್ರೆ ಅಭಿಮಾನಿಗಳು ಭಾರಿ ಬಿಜಿಯಾಗಿ ಬಿಡುತ್ತಾರೆ. ಕಟೌಟ್ ನಿಲ್ಲಿಸೋದು, ಚಿತ್ರಮಂದಿರ ಸಿಂಗಾರ ಮಾಡೋದು ಇತ್ಯಾದಿ. ಇದೀಗ ಕಿಚ್ಚ ಸುದೀಪ್ ಅವರ 'ಕೋಟಿಗೊಬ್ಬ 2' ಚಿತ್ರದ ಬಿಡುಗಡೆಗೆ ದಿನಗಣನೆ ಶುರುವಾಗಿದ್ದು, ಅಭಿಮಾನಿಗಳ ಉತ್ಸಾಹ ಕೂಡ ಇಮ್ಮಡಿಯಾಗಿದೆ.
'ಕೋಟಿಗೊಬ್ಬ 2' ಸಿನಿಮಾ ಬಿಡುಗಡೆ ದಿನದಂದು ಹಬ್ಬ ಮಾಡಲು ಬರೋಬ್ಬರಿ 7 ಲಕ್ಷ ಹಣ ಖರ್ಚು ಮಾಡಲು ಅಖಿಲ ಕರ್ನಾಟಕ ಕಿಚ್ಚ ಸುದೀಪ್ ಸೇನಾ ಸಮಿತಿ ನಿರ್ಧರಿಸಿದೆ. ಇದರಲ್ಲಿ 5 ಲಕ್ಷ ರೂಪಾಯಿಯನ್ನು ಗಾಂಧಿನಗರದಲ್ಲಿರುವ ಸಂತೋಷ್ ಚಿತ್ರಮಂದಿರಕ್ಕೆ ಹೋಗುವ ರಸ್ತೆಯನ್ನು ಹೂವುಗಳಿಂದ ಸಿಂಗರಿಸಲು ಖರ್ಚು ಮಾಡಲಾಗುತ್ತಿದೆ.[ಕಿಚ್ಚನ ಡೈಲಾಗ್ ಅಭಿಮಾನಿಗಳ ಬಾಯಲ್ಲಿ, ನೋಡಿ ಆನಂದಿಸಿ....]
ಮಾತ್ರವಲ್ಲದೇ ಸುಮಾರು 70 ಅಡಿ ಇರುವ ಕಿಚ್ಚ ಸುದೀಪ್ ಅವರ ಬೃಹತ್ ಕಟೌಟ್ ಅನ್ನು ಮುಖ್ಯ ಚಿತ್ರಮಂದಿರ ಸಂತೋಷ್ ಎದುರುಗಡೆ ನಿಲ್ಲಿಸಲಾಗುತ್ತದೆ. ಜೊತೆಗೆ ಬಿಡುಗಡೆಯ ಸಂದರ್ಭದಲ್ಲಿ ಅಭಿಮಾನಿಗಳು ದೊಡ್ಡಬಳ್ಳಾಪುರದಲ್ಲಿ ರಕ್ತದಾನ ಶಿಬಿರ, ಉಚಿತ ಕಣ್ಣಿನ ತಪಾಸಣೆ ಮತ್ತು ಕನ್ನಡಕ ವಿತರಣೆಯನ್ನು ಹಮ್ಮಿಕೊಂಡಿದ್ದಾರೆ.
ಒಟ್ಟಿನಲ್ಲಿ ಅಭಿಮಾನಿಗಳು ಮಾಡುವ ಒಳ್ಳೆ ಕೆಲಸಕ್ಕೆ ಸದಾ ಬೆನ್ನುತಟ್ಟಿ ಪ್ರೋತ್ಸಾಹ ನೀಡುವ ಕಿಚ್ಚ ಸುದೀಪ್ ಅಂದ್ರೆ ಅಭಿಮಾನಿಗಳಿಗೂ ಅಚ್ಚುಮೆಚ್ಚು. ಆದ್ದರಿಂದ ನೆಚ್ಚಿನ ನಟನ ಅದ್ದೂರಿ ಸಿನಿಮಾ ತೆರೆ ಕಾಣುತ್ತಿದೆ ಎಂದಾಗ ಎಲ್ಲಾ ಅಭಿಮಾನಿ ಬಳಗದವರು ಒಂದಾಗಿ ಬಿಡುಗಡೆ ದಿನವನ್ನು 'ದೀಪಾವಳಿ' ಹಬ್ಬದಂತೆ ಆಚರಿಸುತ್ತಿದ್ದಾರೆ.
ಕೆ.ಎಸ್ ರವಿಕುಮಾರ್ ನಿರ್ದೇಶನ ಮಾಡಿರುವ 'ಕೋಟಿಗೊಬ್ಬ 2' ಆಗಸ್ಟ್ 12 ರಂದು ಕನ್ನಡ ಮತ್ತು ತಮಿಳು ಭಾಷೆಯಲ್ಲಿ ಏಕಕಾಲದಲ್ಲಿ ಅದ್ದೂರಿಯಾಗಿ ತೆರೆ ಕಾಣುತ್ತಿದೆ.[ಪವನ್ ಒಡೆಯರ್-ಕಿಚ್ಚ ಸುದೀಪ್ ನಡುವೆ ಹೊಸ ಒಪ್ಪಂದ.!]
ಚಿತ್ರದಲ್ಲಿ ಸುದೀಪ್ ಅವರ ಜೊತೆ ನಿತ್ಯಾ ಮೆನನ್ ಅವರು ಇದೇ ಮೊದಲ ಬಾರಿಗೆ ಡ್ಯುಯೆಟ್ ಹಾಡಿದ್ದು, ಪ್ರಕಾಶ್ ರಾಜ್, ರವಿಶಂಕರ್, ನೇಸರ್ ಸೇರಿದಂತೆ ಹಲವು ಘಟಾನುಘಟಿ ತಾರೆಯರು ಈ ಸಿನಿಮಾದಲ್ಲಿ ಮಿಂಚಿದ್ದಾರೆ.