For Quick Alerts
  ALLOW NOTIFICATIONS  
  For Daily Alerts

  ಕಿಚ್ಚ ಸುದೀಪ್ ವಾಯ್ಸ್ ಕೊಟ್ಟರೆ ಆ ಸಿನಿಮಾ ಹಿಟ್ ಆಗುತ್ತಾ?

  By Suneetha
  |

  ಕಿಚ್ಚ ಸುದೀಪ್ ಅವರು ಒಂದು ಚಿತ್ರಕ್ಕೆ ವಾಯ್ಸ್ ಕೊಟ್ಟರೆ ಆ ಸಿನಿಮಾ ಸೂಪರ್ ಹಿಟ್ ಆಗುತ್ತೇ ಅನ್ನೋ ನಂಬಿಕೆ ಎಲ್ಲಾ ಸಿನಿಮಾ ನಿರ್ಮಾಪಕರ ಮನದಲ್ಲಿ ಮನೆ ಮಾಡಿಬಿಟ್ಟಿದೆ. ಬರೀ ಸಿನಿಪಂಡಿತರು ಮಾತ್ರವಲ್ಲದೇ, ಗಾಂಧಿನಗರದ ಮಂದಿಯೂ ಇದೇ ರೀತಿ ಲೆಕ್ಕ ಹಾಕುತ್ತಿದ್ದಾರೆ.

  ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು ಯಾವುದೇ ಒಂದು ಚಿತ್ರಕ್ಕೆ ಹಿನ್ನಲೆ ಧ್ವನಿ ನೀಡಿದ್ರೆ, ಆ ಸಿನಿಮಾ ಬಾಕ್ಸಾಫೀಸ್ ನಲ್ಲಿ ಹಿಟ್ ಆಗೋದು ಗ್ಯಾರಂಟಿ ಅಂತ ಗಾಂಧಿನಗರದ ಹಲವರು, ಕೆಲವು ನಿದರ್ಶನಗಳನ್ನು ತೋರಿಸಿ ಮೇಜು ಗುದ್ದಿ ಈ ಮಾತನ್ನು ಹೇಳುತ್ತಿದ್ದಾರೆ.[ಇದಪ್ಪಾ ಕಿಚ್ಚ ಸುದೀಪ್ ಅವರ ಅಭಿಮಾನ ಅಂದ್ರೆ]

  ಇದು ನಿಜ ಅಂತಾನೂ ಅನಿಸುತ್ತಿದೆ. ಯಾಕೆಂದರೆ ಸುದೀಪ್ ಅವರ ನಟನೆಗೆ ಮಾತ್ರವಲ್ಲದೇ, ಅವರ ಅದ್ಭುತ ಖದರ್ ಇರುವ ಧ್ವನಿಗೂ ಸ್ಯಾಂಡಲ್ ವುಡ್ ನಲ್ಲಿ ಸಾಕಷ್ಟು ಮಂದಿ ಅಭಿಮಾನಿಗಳು ಕಾಣ ಸಿಗುತ್ತಾರೆ.

  ಇದೀಗ ನಿರ್ದೇಶಕ ಎ.ಹರ್ಷ ಮತ್ತು ಕಾಮಿಡಿ ನಟ ಶರಣ್ ಜುಗಲ್ ಬಂದಿಯಲ್ಲಿ ಮೂಡಿಬರುತ್ತಿರುವ 'ಜೈ ಮಾರುತಿ 800' ಚಿತ್ರಕ್ಕೂ ಸುದೀಪ್ ಅವರು ತಮ್ಮ ಧ್ವನಿ ನೀಡಿದ್ದಾರೆ.[ಚಿತ್ರಗಳು ; ಕಿಚ್ಚ ಸುದೀಪ್ - ಪುನೀತ್ ಒಂದಾಗೇಬಿಟ್ಟರು ನೋಡಿ.!]

  ಅಂದಹಾಗೆ ಕಿಚ್ಚ ಸುದೀಪ್ ಅವರು ಹಲವಾರು ಸಿನಿಮಾಗಳಿಗೆ ತಮ್ಮ ಧ್ವನಿ ನೀಡಿದ್ದಾರೆ. ಅದರಲ್ಲಿ ಯಾವುದು ತುಂಬಾ ಕ್ಲಿಕ್ ಆಯ್ತು ಅನ್ನೋದನ್ನ ನಾವು ನಿಮಗೆ ಹೇಳ್ತೀವಿ ನೋಡೋಕೆ ಸ್ಲೈಡ್ಸ್ ಕ್ಲಿಕ್ ಮಾಡಿ..

  'ಕಠಾರಿ ವೀರ ಸುರ ಸುಂದರಾಂಗಿ'

  'ಕಠಾರಿ ವೀರ ಸುರ ಸುಂದರಾಂಗಿ'

  ರಿಯಲ್ ಸ್ಟಾರ್ ಉಪೇಂದ್ರ ಮತ್ತು ಲಕ್ಕಿ ಸ್ಟಾರ್ ರಮ್ಯಾ ಅವರು ಪ್ರಮುಖ ಪಾತ್ರದಲ್ಲಿ ಮಿಂಚಿದ್ದ 'ಕಠಾರಿ ವೀರ ಸುರ ಸುಂದರಾಂಗಿ' ಚಿತ್ರಕ್ಕೆ ಕಿಚ್ಚ ಸುದೀಪ್ ಅವರು ಮೊದಲ ಬಾರಿಗೆ ತಮ್ಮ ಧ್ವನಿ ನೀಡಿದರು.[ಕಿಚ್ಚ ಸುದೀಪ್ ಅಭಿಮಾನಿಗಳಿಗೆ ಇಲ್ಲಿದೆ ಒಂದು ಸಿಹಿ ಸುದ್ದಿ]

  'ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ'

  'ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ'

  ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಸೂಪರ್ ಹಿಟ್ ಸಿನಿಮಾ 'ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ' ಚಿತ್ರಕ್ಕೆ ಕಿಚ್ಚ ಸುದೀಪ್ ಅವರು ಹಿನ್ನಲೆ ಧ್ವನಿ ನೀಡಿದ್ದರು. ಈ ಚಿತ್ರದಲ್ಲಿ ಸುದೀಪ್ ಅವರ ವಾಯ್ಸ್ ಅನ್ನು ಅಭಿಮಾನಿಗಳು ಬೇಗನೇ ಕ್ಯಾಚ್ ಮಾಡಿದ್ದರು.

  ಮಂಡ್ಯ ಟು ಮುಂಬೈ

  ಮಂಡ್ಯ ಟು ಮುಂಬೈ

  ಮಂಡ್ಯ ಟು ಮುಂಬೈ ಎಂಬ ಹೊಸಬರ ಸಿನಿಮಾಗೆ ಕೂಡ ಸುದೀಪ್ ಅವರು ತಮ್ಮ ಕಂಚಿನ ಕಂಠದಿಂದ ಹಿನ್ನಲೆ ಧ್ವನಿ ನೀಡಿದ್ದರು. ಈ ಚಿತ್ರದ ಟ್ರೈಲರ್ ನಲ್ಲಿ ಸುದೀಪ್ ಅವರ ವಾಯ್ಸ್ ಸಖತ್ತಾಗಿ ಮೂಡಿಬಂದಿತ್ತು.

  ರಿಕ್ಕಿ

  ರಿಕ್ಕಿ

  ರಕ್ಷಿತ್ ಶೆಟ್ಟಿ ಮತ್ತು ಹರಿಪ್ರಿಯಾ ಕಾಣಿಸಿಕೊಂಡಿದ್ದ 'ರಿಕ್ಕಿ' ಚಿತ್ರಕ್ಕೆ ಕಿಚ್ಚ ಸುದೀಪ್ ಅವರು ತಮ್ಮ ಧ್ವನಿ ನೀಡಿದ್ದರು. 'ರಿಕ್ಕಿ' ಚಿತ್ರದ ಟ್ರೈಲರ್ ನಲ್ಲಿ ಅವರ ಅಬ್ಬರದ ಧ್ವನಿ ಕೇಳಿದ ಅಭಿಮಾನಿಗಳು ರೊಚ್ಚಿಗೆದ್ದಿದ್ದರು.

  'ಚಕ್ರವ್ಯೂಹ'

  'ಚಕ್ರವ್ಯೂಹ'

  ಇನ್ನೇನು ತೆರೆ ಕಾಣಬೇಕಿರುವ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ 'ಚಕ್ರವ್ಯೂಹ' ಚಿತ್ರದ ಸ್ಟೋರಿ ನರೇಶನ್ ಗೆ ಸುದೀಪ್ ಅವರು ತಮ್ಮ ಧ್ವನಿ ನೀಡಿದ್ದಾರೆ.

  'ಜೈ ಮಾರುತಿ 800'

  'ಜೈ ಮಾರುತಿ 800'

  'ಭಜರಂಗಿ' ನಿರ್ದೇಶಕ ಎ.ಹರ್ಷ ಅವರು ನಿರ್ದೇಶನ ಮಾಡುತ್ತಿರುವ ಶರಣ್ ಮತ್ತು ಶ್ರುತಿ ಹರಿಹರನ್ ಮುಖ್ಯ ಭೂಮಿಕೆಯಲ್ಲಿ ಮಿಂಚಿರುವ 'ಜೈ ಮಾರುತಿ 800' ಚಿತ್ರ ಸ್ಟೋರಿ ನರೇಶನ್ ಗೆ ಸುದೀಪ್ ಅವರು ಬಾಲಾಜಿ ಡಿಜಿಟಲ್ ಸ್ಟುಡಿಯೋದಲ್ಲಿ ತಮ್ಮ ಧ್ವನಿ ನೀಡಿದ್ದಾರೆ. ಚಿತ್ರದಲ್ಲಿ ಸುದೀಪ್ ಅವರ ಧ್ವನಿ ಒಂದು ಸರ್ಪ್ರೈಸ್ ರೂಪದಲ್ಲಿ ಬರಲಿದೆ ಎನ್ನುತ್ತಾರೆ ನಿರ್ದೇಶಕ ಹರ್ಷ.

  English summary
  Kiccha Sudeep has given voice over for Kannada Actor Sharan and Actres Sruthi Hariharan starrer Kannada Movie 'Jai Maruthi 800'. The movie is directed by A.Harsha.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X