»   » ಮಾಣಿಕ್ಯ ಚಿತ್ರೀಕರಣದಲ್ಲಿ ನಟ ಸುದೀಪ್ ಗೆ ಗಾಯ

ಮಾಣಿಕ್ಯ ಚಿತ್ರೀಕರಣದಲ್ಲಿ ನಟ ಸುದೀಪ್ ಗೆ ಗಾಯ

Posted By:
Subscribe to Filmibeat Kannada

ನಟ ಕಿಚ್ಚ ಸುದೀಪ್ ಅವರು ಸೆಲೆಬ್ರಿಟಿ ಕ್ರಿಕೆಟ್ ಲೀಗ್ ನಲ್ಲಿ ಗಾಯಗೊಂಡ ನಲವತ್ತೆಂಟು ಗಂಟೆಗಳಲ್ಲೇ ಮತ್ತೊಮ್ಮೆ ಪೆಟ್ಟು ತಿಂದಿದ್ದಾರೆ. ಅಬ್ಬಾಯಿ ನಾಯ್ಡು ಸ್ಟುಡಿಯೋದಲ್ಲಿ ನಡೆಯುತ್ತಿರುವ 'ಮಾಣಿಕ್ಯ' ಚಿತ್ರದ ಬೈಕ್ ಸ್ಟಂಟ್ ಚಿತ್ರೀಕರಣ ವೇಳೆ ಅವರು ಗಾಯಗೊಂಡರು.

ಅವರ ಕಾಲುಗಳಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಅವರು ಅಪಾಯದಿಂದ ಪಾರಾಗಿದ್ದಾರೆ ಎಂದು ಚಿತ್ರತಂಡದ ಮೂಲಗಳು ತಿಳಿಸಿವೆ. ಮಂಗಳವಾರ (ಫೆ.5) ಸಂಜೆ ಸುಮಾರು 6.30ರ ಸಮಯದಲ್ಲಿ ಈ ಘಟನೆ ನಡೆದಿದೆ. [ಸುದೀಪ್ 'ಮಾಣಿಕ್ಯ' ಮೇಕಿಂಗ್ ವಿಡಿಯೋ ಹೈಲೈಟ್ಸ್]

Kichcha Sudeep

ಭಾನುವಾರವಷ್ಟೇ (ಫೆ.2) ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಚೆನ್ನೈ ರೈನೋಸ್ ವಿರುದ್ಧ ಆಡಬೇಕಾದರೆ ಅವರು ಲೆಗ್ ಇಂಜ್ಯುರಿಗೆ ಒಳಗಾಗಿದ್ದರು. ಅಲ್ಲಿ ಚೇತರಿಸಿಕೊಂಡು 'ಮಾಣಿಕ್ಯ' ಚಿತ್ರೀಕರಣದಲ್ಲಿ ಮಂಗಳವಾರ ಪಾಲ್ಗೊಂಡಿದ್ದರು. ಈಗ ಮತ್ತೊಮ್ಮೆ ಗಾಯಗೊಂಡಿದ್ದಾರೆ.

ಸ್ವಲ್ಪ ದಿನಗಳ ಕಾಲ ವಿಶ್ರಾಂತಿ ತೆಗೆದುಕೊಳ್ಳಲು ವೈದ್ಯರು ಸೂಚಿಸಿದ್ದಾರೆ. ತೆಲುಗಿನ ಹಿಟ್ ಚಿತ್ರ 'ಮಿರ್ಚಿ' ರೀಮೇಕ್ ಮಾಣಿಕ್ಯ. ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುವುದರ ಜೊತೆಗೆ ಅಭಿನಯಿಸುತ್ತಿದ್ದಾರೆ ಸುದೀಪ್. ಪಾತ್ರವರ್ಗದಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್, ರಮ್ಯ ಕೃಷ್ಣ, ರವಿಶಂಕರ್, ವರಲಕ್ಷ್ಮಿ ಶರತ್ ಕುಮಾರ್ ಮುಂತಾದವರಿದ್ದಾರೆ. (ಏಜೆನ್ಸೀಸ್)

English summary
Even less than 48 hours after getting injured in Celebrity Cricket League (CCL 4), Kiccha Sudeep has again got injured on the sets of Maanikya. The actor was busy shooting for the movie in Abhaya Naidu Studio, which is in Chikkalasandra, Bangalore.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada