For Quick Alerts
  ALLOW NOTIFICATIONS  
  For Daily Alerts

  'ಬಾಹುಬಲಿ'ಯಲ್ಲಿ ಸುದೀಪ್ ಹೆಸರು, ಪಾತ್ರ ಬಹಿರಂಗ

  By ಅನಂತರಾಮು, ಹೈದರಾಬಾದ್
  |

  ಶ್ರಾವಣ ಮಾಸದ ಕೊನೆಯ ಸೋಮವಾರ (ಸೆ.2) ತಮ್ಮ 40ನೇ ಹುಟ್ಟುಹಬ್ಬವನ್ನು ಅಭಿಮಾನಿಗಳೊಂದಿಗೆ ಸೆಲೆಬ್ರೇಟ್ ಮಾಡಿಕೊಂಡು ಕಿಚ್ಚ ಸುದೀಪ್ ಸಂಭ್ರಮಿಸಿದ್ದಾರೆ. 'ಈಗ ಚಿತ್ರದ ಬಳಿಕ ಅವರು ಮತ್ತೊಮ್ಮೆ ರಾಜಮೌಳಿ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ.

  ಪ್ರಭಾಸ್ ನಾಯಕ ನಟನಾಗಿರುವ ಈ ಚಿತ್ರದಲ್ಲಿ ಸುದೀಪ್ ಅವರು ಗಮನಾರ್ಹ ಪಾತ್ರವನ್ನು ಪೋಷಿಸುತ್ತಿದ್ದಾರೆ. ಸುದೀಪ್ ಅವರದು ಅತಿಥಿ ಪಾತ್ರವಾದರೂ ಚಿತ್ರದಲ್ಲಿ ಮಹತ್ತರ ತಿರುವು ನೀಡುವ ಪಾತ್ರ ಎನ್ನಲಾಗುತ್ತಿದೆ. ಈ ಪಾತ್ರದ ಬಗ್ಗೆ ಸುದೀಪ್ ಸಹ ಅಷ್ಟೇ ಕುತೂಹಲದಿಂದಿದ್ದಾರೆ.

  ತಮ್ಮ ಹುಟ್ಟುಹಬ್ಬದ ಸಂದರ್ಭದಲ್ಲಿ ಸುದೀಪ್ ಮಾತನಾಡುತ್ತಾ, "ಬಾಹುಬಲಿ ಚಿತ್ರದಲ್ಲಿ ತಾನು ಆಯುಧಗಳ ವ್ಯಾಪಾರಿಯಾಗಿ ಕಾಣಿಸುತ್ತೇನೆ. ನನ್ನ ಪಾತ್ರದ ಹೆಸರು ಅಸ್ಲಂ ಖಾನ್. ಇದಿಷ್ಟೇ ಅಲ್ಲದೆ ಈ ಚಿತ್ರದಲ್ಲಿ ನನ್ನ ಹಾಗೂ ಸತ್ಯರಾಜ್ ನಡುವೆ ಕತ್ತಿಯೊಂದಿಗೆ ಕಾದಾಡುವ ಸನ್ನಿವೇಶವೂ ಇದೆ" ಎಂದಿದ್ದಾರೆ.

  ಬಾಹುಬಲಿ ಚಿತ್ರೀಕರಣ ನನಗೆ ಮರೆಯಲಾಗದ ಅನುಭವ ಕೊಟ್ಟಿದೆ. ಚಿತ್ರದಲ್ಲಿ ಅದ್ಭುತವಾದ ಸೆಟ್ಸ್, ಉತ್ತಮ ಟೀಂ, ಮುಖ್ಯವಾಗಿ ರಾಜಮೌಳಿ ಅವರೊಂದಿಗೆ ಮತ್ತೆ ಕೆಲಸ ಮಾಡುತ್ತಿರುವುದು ತುಂಬಾ ಸಂತಸ ತಂದಿದೆ. ಶೀಘ್ರದಲ್ಲೇ ಮತ್ತಷ್ಟು ವಿವರಗಳನ್ನು ಟ್ವೀಟ್ ಮಾಡುತ್ತೇನೆ ಎಂದಿದ್ದಾರೆ.

  ಬೆಂಗಳೂರು ಸಂಪಿಗೆ ಅನುಷ್ಕಾ ಶೆಟ್ಟಿ ಚಿತ್ರದ ನಾಯಕಿ. ಬಾಹುಬಲಿ ಚಿತ್ರದ ಪಾತ್ರವರ್ಗದಲ್ಲಿ ರಾಣಾ, ಅಡಿವಿ ಶೇಷ್ ಮುಂತಾದವರು ಇದ್ದಾರೆ. ಚಿತ್ರದ ಪ್ರಭಾಸ್ ನಾಯಕ ನಟನಾದರೆ ರಾಣಾ ಖಳನಾಯಕನ ಪಾತ್ರ. ಈ ಚಿತ್ರ ತಾಂತ್ರಿಕವಾಗಿಯೂ ಅತ್ಯುತ್ತಮವಾಗಿದ್ದು 'arri alexa XT' ಎಂಬ ಅತ್ಯಾಧುನಿಕ ಕ್ಯಾಮೆರಾ ಬಳಸಲಾಗಿದೆ.

  ತೆಲುಗು, ತಮಿಳು ಭಾಷೆಗಳಲ್ಲಿ ಏಕಕಾಲಕ್ಕೆ ಚಿತ್ರೀಕರಣ ನಡೆಯುತ್ತಿದೆ. ಹಿಂದಿ, ಮಲಯಾಳಂ ಭಾಷೆಗಳಲ್ಲೂ ಬಿಡುಗಡೆ ಮಾಡಲು ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಗ್ರಾಫಿಕ್ಸ್ ಗೂ ಅತ್ಯಧಿಕ ಪ್ರಾಮುಖ್ಯತೆಯನ್ನು ನೀಡಲಾಗಿದೆ. ಮಗಧೀರ, ಈಗ ಚಿತ್ರಗಳಿಗೆ ಕ್ಯಾಮೆರಾ ಹಿಡಿದಿದ್ದ ಸೆಂಥಿಲ್ ಕುಮಾರ್ ಈ ಚಿತ್ರದಲ್ಲೂ ತಮ್ಮ ಕೈಚಳಕ ತೋರಲಿದ್ದಾರೆ.

  English summary
  Kannada superstar ‘Kicha’ Sudeep, who won the hearts of Telugu audiences with his brilliant performance in ‘Eega’, is becoming a new opportunity to work with Tollywood No 1 director S S Rajamouli. He will play a small role in the upcoming SS Rajamouli film Bahubali ‘. The actor spoke about his character in the film with the media recently and mentioned that he will be playing the role of an arms dealer named Aaslam Khan.He also said there will be a sword fight between him and Satyaraj.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X