»   » ತೆಲುಗು ಅಭಿಮಾನಿ ದೇವರುಗಳಿಗೆ ಕಿಚ್ಚನ ಕೊಡುಗೆ

ತೆಲುಗು ಅಭಿಮಾನಿ ದೇವರುಗಳಿಗೆ ಕಿಚ್ಚನ ಕೊಡುಗೆ

Posted By:
Subscribe to Filmibeat Kannada

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿನಯದ 'ಕೋಟಿಗೊಬ್ಬ 2' ಕನ್ನಡ ಮತ್ತು ತಮಿಳು ಭಾಷೆಯಲ್ಲಿ ದಾಖಲೆ ಹುಟ್ಟುಹಾಕಿದ್ದು, ಎಲ್ಲರಿಗೂ ಗೊತ್ತೇ ಇದೆ. ಮಾತ್ರವಲ್ಲದೇ ಚಿತ್ರದ ಹಿಂದಿ ಹಕ್ಕು ಮತ್ತು ಸ್ಯಾಟಲೈಟ್ ಹಕ್ಕು ದಾಖಲೆ ಮೊತ್ತಕ್ಕೆ ಸೇಲ್ ಆಗಿರೋದು ಇತಿಹಾಸ.

ಇದೀಗ ಕಿಚ್ಚ ಸುದೀಪ್ ಅವರ 'ಕೋಟಿಗೊಬ್ಬ 2' ಮತ್ತೊಂದು ರೀತಿಯಲ್ಲಿ ಸುದ್ದಿ ಮಾಡಿದೆ. ಈ ಬಾರಿ ಸಂಪೂರ್ಣ ತೆಲುಗಿಗೆ ಡಬ್ ಆಗಿ, ತೆಲುಗು ಜನರಿಗೂ ಕಮಾಲ್ ಮಾಡಲು ಸಜ್ಜಾಗಿದೆ.[ಕನ್ನಡ ಚಿತ್ರರಂಗದ ಇತಿಹಾಸದಲ್ಲೇ 'ಕೋಟಿ ಕಿಚ್ಚ'ನ ಹೊಸ ದಾಖಲೆ]


ತಮಿಳಿನಲ್ಲಿ 'ಮುಡಿಂಜ ಇವನ ಪುಡಿ' ಎಂಬ ಹೆಸರಿನಲ್ಲಿ ತೆರೆಕಂಡ ಈ ಸಿನಿಮಾ ಅಲ್ಲಿನ ಜನರಿಗೆ ಸಖತ್ ಕಿಕ್ ಕೊಟ್ಟಿತ್ತು. ಜೊತೆಗೆ ಇಳೆಯದಳಪತಿ ವಿಜಯ್ ಅವರ 'ಪುಲಿ' ಚಿತ್ರದಲ್ಲಿ ಸುದೀಪ್ ಅವರು ವಿಲನ್ ರೋಲ್ ನಲ್ಲಿ ಮಿಂಚಿದ್ದರಿಂದ ಕಾಲಿವುಡ್ ನಲ್ಲೂ ಸುದೀಪ್ ಅವರಿಗೆ ಸಾಕಷ್ಟು ಅಭಿಮಾನಿಗಳಿದ್ದಾರೆ. ಮುಂದೆ ಓದಿ....


ತೆಲುಗಿನಲ್ಲಿ ಕಿಚ್ಚನಿಗೆ ಅಧಿಕ ಅಭಿಮಾನಿಗಳಿದ್ದಾರೆ

ಅಂದಹಾಗೆ ತೆಲುಗಿನಲ್ಲಿ ಕಿಚ್ಚ ಸುದೀಪ್ ಅವರಿಗೆ ಬೇಜಾನ್ ಅಭಿಮಾನಿಗಳಿದ್ದಾರೆ. ಎಸ್.ಎಸ್ ರಾಜಮೌಳಿ ನಿರ್ದೇಶನದ 'ಈಗ' ಮತ್ತು 'ಬಾಹುಬಲಿ' ಚಿತ್ರದಲ್ಲಿ ಸುದೀಪ್ ಅವರ ಅಭಿನಯ ನೋಡಿದ್ದ ಹಲವರು ಕಿಚ್ಚನಿಗೆ ಅಭಿಮಾನಿಗಳಾಗಿದ್ದಾರೆ.['ಕೋಟಿಗೊಬ್ಬ 2' ಚಿತ್ರದಿಂದ ಮತ್ತೊಂದು ದಾಖಲೆ ಸುದ್ದಿ !]


ತೆಲುಗಿನಲ್ಲಿ 'ಕೋಟಿಕೊಕ್ಕಡು'

ತೆಲುಗಿನಲ್ಲಿ 'ಕೋಟಿಕೊಕ್ಕಡು' ಎಂಬ ಹೆಸರಿನಲ್ಲಿ ಈ ಸಿನಿಮಾ ತೆರೆ ಕಾಣಲಿದೆ. ಸ್ಟಾರ್ ನಿರ್ದೇಶಕ ಕೆ.ಎಸ್ ರವಿಕುಮಾರ್ ನಿರ್ದೇಶನ ಮಾಡಿದ್ದ ಈ ಚಿತ್ರದಲ್ಲಿ ನಟಿ ನಿತ್ಯಾ ಮೆನನ್ ಅವರು ಕಿಚ್ಚನ ಜೊತೆ ಮೊಟ್ಟ ಮೊದಲ ಬಾರಿಗೆ ಡ್ಯುಯೆಟ್ ಹಾಡಿದ್ದರು.[ಕಿಚ್ಚ ಸುದೀಪ್ ಸಿನಿ ಇತಿಹಾಸದಲ್ಲೇ ಇದು 'ಮೊಟ್ಟ ಮೊದಲ ಬಾರಿಗೆ'!]


ಆಕರ್ಷಕ ಪೋಸ್ಟರ್ ಗಳು

ಈಗಾಗಲೇ ತೆಲುಗಿಗೆ ಡಬ್ ಆಗಿ ರಿಲೀಸ್ ಆಗಲು ತಯಾರಾಗಿ ನಿಂತಿದ್ದು, ಇನ್ನೇನು ಕೆಲವೇ ದಿನಗಳಲ್ಲಿ 'ಕೋಟಿಕೊಕ್ಕಡು' ಸಿನಿಮಾ ಗ್ರ್ಯಾಂಡ್ ಆಗಿ ತೆರೆಗೆ ಅಪ್ಪಳಿಸಲಿದೆ. ತೆಲುಗಿನಲ್ಲಿ 'ಕೋಟಿಕೊಕ್ಕಡು' ಅಂತ ಟೈಟಲ್ ಬರೆದಿರುವ ಆಕರ್ಷಕ ಪೋಸ್ಟರ್ ಗಳು ಸಖತ್ ರೆಸ್ಪಾನ್ಸ್ ಗಿಟ್ಟಿಸಿಕೊಳ್ಳುತ್ತಿದೆ.


ಕಿಚ್ಚನ ಹೊಸ ದಾಖಲೆ

ಕಿಚ್ಚ ಸುದೀಪ್ ಅವರ ಸಿನಿ ಜರ್ನಿಯಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಿರುವ ಈ ಸಿನಿಮಾದಲ್ಲಿ, ಕಿಚ್ಚ ಎರಡು ರೋಲ್ ಅನ್ನು ನಿಭಾಯಿಸಿದ್ದು, ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದೆ.


English summary
Kannada Actor Sudeep who is well known to Telugu audiences with his terrific acting in 'Eega' and 'Baahubali'. Now he is all set to visit Telugu audience with his Kannada blockbuster film 'Kotigobba 2', will be coming in Telugu with the title 'Kotikokkadu'.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada