For Quick Alerts
ALLOW NOTIFICATIONS  
For Daily Alerts

50 ದಿನ ಪೂರೈಸಿದ 'ಕೋಟಿಗೊಬ್ಬ 2': ಬಾಕ್ಸಾಫೀಸ್ ನಲ್ಲಿ ಬಿಗ್ಗೆಸ್ಟ್ ಹಿಟ್

By Suneetha
|

ಸುದೀಪ್ ಅಭಿನಯದ 'ಕೋಟಿಗೊಬ್ಬ 2' ಕಿಚ್ಚನ ಸಿನಿಮಾ ಇತಿಹಾಸದಲ್ಲಿ ದಾಖಲೆ ಮಾಡಿದ್ದ ಎಲ್ಲರಿಗೂ ಗೊತ್ತೇ ಇದೆ. ಕನ್ನಡ ಮತ್ತು ತಮಿಳಿನಲ್ಲಿ ಏಕಕಾಲದಲ್ಲಿ ತೆರೆ ಕಂಡ ಈ ಸಿನಿಮಾ ಕಲೆಕ್ಷನ್ ವಿಚಾರದಲ್ಲೂ ಸಖತ್ ಸೌಂಡ್ ಮಾಡಿದೆ.

ಆಗಸ್ಟ್ 12, ವರಮಹಾಲಕ್ಷ್ಮಿ ಹಬ್ಬದಂದು ತೆರೆಕಂಡ 'ಕೋಟಿಗೊಬ್ಬ 2' ಇದೀಗ 50ನೇ ದಿನ ಪೂರೈಸಿ 100ನೇ ದಿನದತ್ತ ದಾಪುಗಾಲಿಕ್ಕುತ್ತಿದೆ. ಇದೇ ಖುಷಿಯಲ್ಲಿ, ಇಲ್ಲಿಯವರೆಗೆ ಸಿನಿಮಾ ಮಾಡಿದ ಒಟ್ಟು ಕಲೆಕ್ಷನ್ ರಿಪೋರ್ಟ್ ಕೂಡ ಹೊರಬಿದ್ದಿದೆ.['ಕೋಟಿಗೊಬ್ಬ 2' ಚಿತ್ರದಿಂದ ಮತ್ತೊಂದು ದಾಖಲೆ ಸುದ್ದಿ !]

ಈಗಾಗಲೇ ಚಿತ್ರದ ಹಿಂದಿ ಹಕ್ಕು ಮತ್ತು ತೆಲುಗು ಹಕ್ಕು ಭಾರಿ ಮೊತ್ತಕ್ಕೆ ಸೇಲ್ ಆಗಿದ್ದು, ಸಿನಿಮಾ ತೆಲುಗಿನಲ್ಲಿ ಕೂಡ ಮೂಡಿಬರುತ್ತಿದೆ. ಇದೀಗ 50 ದಿನಗಳ ಸಂಭ್ರಮದಲ್ಲಿ 'ಕೋಟಿಗೊಬ್ಬ 2' ಒಟ್ಟಾರೆ ಬಾಕ್ಸಾಫೀಸ್ ನಲ್ಲಿ ಎಷ್ಟು ಕಲೆಕ್ಷನ್ ಮಾಡ್ತು, ನೋಡಲು ಮುಂದೆ ಓದಿ...

50ರ ಸಂಭ್ರಮದಲ್ಲಿ 'ಕೋಟಿಗೊಬ್ಬ 2'

50ರ ಸಂಭ್ರಮದಲ್ಲಿ 'ಕೋಟಿಗೊಬ್ಬ 2'

ಈಗಾಗಲೇ ಸುಮಾರು 100 ಚಿತ್ರಮಂದಿರಗಳಲ್ಲಿ 50 ದಿನ ಪೂರೈಸಿರುವ 'ಕೋಟಿಗೊಬ್ಬ 2', ಒಟ್ಟಾರೆಯಾಗಿ ಬರೋಬ್ಬರಿ 50 ಕೋಟಿ ರೂಪಾಯಿ ಕಮಾಯಿಸಿದೆ, ಎನ್ನುತ್ತಿವೆ ಚಿತ್ರದ ವಿತರಕರ ಮೂಲಗಳು.[ಕಿಚ್ಚ ಸುದೀಪ್ ಸಿನಿ ಇತಿಹಾಸದಲ್ಲೇ ಇದು 'ಮೊಟ್ಟ ಮೊದಲ ಬಾರಿಗೆ'!]

ಗ್ರಾಸ್ ಕಲೆಕ್ಷನ್ ಎಷ್ಟು?

ಗ್ರಾಸ್ ಕಲೆಕ್ಷನ್ ಎಷ್ಟು?

ಅಲ್ಲದೇ ಕಿಚ್ಚ ಸುದೀಪ್ ಅವರ 'ಕೋಟಿಗೊಬ್ಬ 2' ಗ್ರಾಸ್ ಬಾಕ್ಸ್ ಆಫೀಸ್ ಕಲೆಕ್ಷನ್ ಸುಮಾರು 35 ಕೋಟಿ ರೂಪಾಯಿ ಆಗಿದೆ. ಬಿಡುಗಡೆಯಾದ ನಾಲ್ಕು ದಿನದಲ್ಲಿ, ಅದೂ ಬರೀ ಕರ್ನಾಟಕದಲ್ಲಿ ಬರೋಬ್ಬರಿ 17 ರಿಂದ 18 ಕೋಟಿ ರೂಪಾಯಿ ಕಮಾಯಿಸಿದ್ದ 'ಕೋಟಿಗೊಬ್ಬ 2' ಕಿಚ್ಚ ಸುದೀಪ್ ಅವರಿಗೆ ಹೊಸ ಇಮೇಜ್ ತಂದುಕೊಟ್ಟಿತ್ತು.[ಕನ್ನಡ ಚಿತ್ರರಂಗದ ಇತಿಹಾಸದಲ್ಲೇ 'ಕೋಟಿ ಕಿಚ್ಚ'ನ ಹೊಸ ದಾಖಲೆ]

ವಿದೇಶದಲ್ಲೂ 'ಕೋಟಿ' ಕಿಚ್ಚನ ಕಮಾಲ್

ವಿದೇಶದಲ್ಲೂ 'ಕೋಟಿ' ಕಿಚ್ಚನ ಕಮಾಲ್

ಮೊದಲು ಕರ್ನಾಟಕದಲ್ಲಿ ಮತ್ತು ತಮಿಳುನಾಡಿನಲ್ಲಿ ತೆರೆಕಂಡ ಈ ಸಿನಿಮಾ, ತದನಂತರ ಒಂದೆರಡು ವಾರ ಕಳೆದ ಮೇಲೆ ಇನ್ನಿತರೇ ಪ್ರದೇಶಗಳಾದ ಆಂಧ್ರಪ್ರದೇಶ, ತೆಲಂಗಾಣ ಹೀಗೆ ಹಲವೆಡೆ ತೆರೆಕಂಡವು. ಇದೀಗ ವಿದೇಶದಲ್ಲೂ ಕಮಾಲ್ ಮಾಡಲು ಸಜ್ಜಾಗಿರುವ 'ಕೋಟಿಗೊಬ್ಬ' ಯುಎಸ್ಎ ಥಿಯೇಟರ್ ಲಿಸ್ಟ್ ಹೊರಬಿದ್ದಿದೆ.

ಯುಎಸ್ಎ ಥಿಯೇಟರ್ ಲಿಸ್ಟ್ ಔಟ್

ಯುಎಸ್ಎ ಥಿಯೇಟರ್ ಲಿಸ್ಟ್ ಔಟ್

ಸೆಪ್ಟೆಂಬರ್ 29, 30 ಮತ್ತು ಅಕ್ಟೋಬರ್ 1 ರಂದು 'ಕೋಟಿಗೊಬ್ಬ 2' ಅಮೆರಿಕದಲ್ಲಿ ಗ್ರ್ಯಾಂಡ್ ಆಗಿ ತೆರೆ ಕಾಣುತ್ತಿದೆ. ದುಬೈ, ಅಬುದಾಬಿ, ಶಾರ್ಜಾ ಮುಂತಾದೆಡೆ ಈ ಸಿನಿಮಾ ತೆರೆ ಕಾಣುತ್ತಿದ್ದು, ಥಿಯೇಟರ್ ಲಿಸ್ಟ್ ಕೂಡ ಔಟ್ ಆಗಿದೆ.

ಕನ್ನಡದ ಬಿಗ್ಗೆಸ್ಟ್ ಹಿಟ್

ಕನ್ನಡದ ಬಿಗ್ಗೆಸ್ಟ್ ಹಿಟ್

ಇಲ್ಲಿಯವರೆಗೆ ತೆರಕಂಡ ಕನ್ನಡ ಸಿನಿಮಾಗಳಲ್ಲಿ 'ಕೋಟಿಗೊಬ್ಬ 2' ಅತ್ಯಂತ ದೊಡ್ಡ ಮಟ್ಟದಲ್ಲಿ ಹಿಟ್ ಆಗಿದ್ದು, ಸ್ಯಾಂಡಲ್ ವುಡ್ ಬಾಕ್ಸಾಫೀಸ್ ನಲ್ಲಿ ಕಿಚ್ಚ ಸುದೀಪ್ ನೂತನ ದಾಖಲೆ ಬರೆದಿದ್ದಾರೆ. ಖ್ಯಾತ ಸ್ಟಾರ್ ನಿರ್ದೇಶಕ ಕೆ.ಎಸ್ ರವಿಕುಮಾರ್ ನಿರ್ದೇಶನ ಮಾಡಿದ್ದ ಈ ಚಿತ್ರದಲ್ಲಿ ನಿತ್ಯಾ ಮೆನನ್, ಪ್ರಕಾಶ್ ರಾಜ್, ಸಾಧು ಕೋಕಿಲಾ, ಮುಖೇಶ್ ತಿವಾರಿ ಮುಂತಾದವರು ಪ್ರಮುಖ ಪಾತ್ರ ವಹಿಸಿದ್ದರು.

'ಕೋಟಿಕೊಕ್ಕಡು' ಎಂಬ ಹೆಸರಿನಲ್ಲಿ ತೆರೆ ಕಾಣುತ್ತಿದೆ

'ಕೋಟಿಕೊಕ್ಕಡು' ಎಂಬ ಹೆಸರಿನಲ್ಲಿ ತೆರೆ ಕಾಣುತ್ತಿದೆ

ತೆಲುಗಿನಲ್ಲಿ ಕೂಡ ಈ ಸಿನಿಮಾ ತೆರೆ ಕಾಣುತ್ತಿದ್ದು, 'ಕೋಟಿಕೊಕ್ಕಡು' ಎಂಬ ಹೆಸರಿನಲ್ಲಿ ತೆರೆ ಕಾಣುತ್ತಿದೆ. 'ಈಗ' ಚಿತ್ರದ ಪರಿಣಾಮ ತೆಲುಗು ಚಿತ್ರರಂಗದಲ್ಲೂ ಸುದೀಪ್ ಅವರಿಗೆ ಹಲವಾರು ಅಭಿಮಾನಿಗಳಿದ್ದಾರೆ.

English summary
The overall collections of Kotigobba 2 has crossed Rs 50 crore according to the distributors. The gross box office collection of the film is at around Rs 35 crore now. The movie is releasing overseas shortly starting from several locations in the Middle-East. The movie is directed by KS Ravi Kumar.

Kannada Photos

Go to : More Photos
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more