For Quick Alerts
  ALLOW NOTIFICATIONS  
  For Daily Alerts

  ವಾವ್ ಏಪ್ರಿಲ್ ತಿಂಗಳು ಸುದೀಪ್ ಅಭಿಮಾನಿಗಳಿಗೆ ಹಬ್ಬ ರೀ..!

  By Suneetha
  |

  ಕಿಚ್ಚ ಸುದೀಪ್ ಮತ್ತು ಬಹುಭಾಷಾ ನಟಿ ನಿತ್ಯಾ ಮೆನನ್ ಇದೇ ಮೊದಲ ಬಾರಿಗೆ ಒಂದಾಗಿ ಕಾಣಿಸಿಕೊಂಡಿರುವ ಬಿಗ್ ಬಜೆಟ್ ನ ಸಿನಿಮಾ 'ಕೋಟಿಗೊಬ್ಬ 2' (ಟೆಂಪರರಿ ಹೆಸರು) ಚಿತ್ರತಂಡದಿಂದ ಸ್ಫೋಟಕ ಸುದ್ದಿಯೊಂದು ಹೊರಬಿದ್ದಿದೆ.

  ತಮಿಳಿನಲ್ಲಿ 'ಮುಡಿಂಜ ಇವನ ಪುಡಿ' ಹಾಗೂ ಕನ್ನಡ ಅವತರಣಿಕೆಯಲ್ಲಿ 'ಕೋಟಿಗೊಬ್ಬ 2' ಹೀಗೆ ಎರಡು ಭಾಷೆಯಲ್ಲಿ ಏಕಕಾಲದಲ್ಲಿ ತೆರೆ ಕಾಣುತ್ತಿರುವ ಈ ಚಿತ್ರ ಕಿಚ್ಚ ಸುದೀಪ್ ಅಭಿಮಾನಿಗಳಲ್ಲಿ ಭಾರಿ ಕುತೂಹಲ ಮೂಡಿಸಿದೆ.[ಇದಕ್ಕೆ ನೋಡಿ ಕನ್ನಡದ ಹುಡುಗರಿಗೆ ನಿತ್ಯಾ ಮೆನನ್ ಇಷ್ಟ ಆಗೋದು]

  ತಮಿಳು 'ಲಿಂಗಾ' ಚಿತ್ರದ ಖ್ಯಾತಿಯ ನಿರ್ದೇಶಕ ಕೆ.ಎಸ್ ರವಿಕುಮಾರ್ ಆಕ್ಷನ್-ಕಟ್ ಹೇಳಿರುವ ಈ ಚಿತ್ರಕ್ಕೆ ನಿರ್ಮಾಪಕ ಸೂರಪ್ಪ ಬಾಬು ಅವರು ಬಂಡವಾಳ ಹೂಡಿದ್ದಾರೆ.

  ಇನ್ನು ಎರಡು ಭಾಷೆಯಲ್ಲಿ ಏಕಕಾಲದಲ್ಲಿ ತೆರೆ ಕಾಣುತ್ತಿರುವ ಚಿತ್ರದ ಬಗ್ಗೆ ಕಿಚ್ಚ ಸುದೀಪ್ ಅವರ ಅಭಿಮಾನಿಗಳು ಮಾತ್ರವಲ್ಲದೇ, ಕನ್ನಡ ಸಿನಿ ಪ್ರಿಯರು ಕೂಡ ಕಾತರದಿಂದ ಕಾದಿದ್ದು, ಈ ವರ್ಷ ಸಿನಿಮಾ ಬಾಕ್ಸಾಫೀಸ್ ನಲ್ಲಿ ಹಿಟ್ ಆಗುತ್ತಾ ಅನ್ನೋದನ್ನ ಕಾದು ನೋಡಬೇಕಿದೆ.[ಕಿಚ್ಚ ಸುದೀಪ್ ಅಭಿಮಾನಿಗಳಿಗೆ ಇಲ್ಲಿದೆ ಒಂದು ಸಿಹಿ ಸುದ್ದಿ]

  ಅಂದಹಾಗೆ ಈ ಚಿತ್ರದ ಬಗ್ಗೆ ಅದೇನಪ್ಪಾ ಸ್ಫೋಟಕ ಸುದ್ದಿ ಹೊರ ಬಿದ್ದಿದೆ ಅಂತ ಯೋಚನೆ ಮಾಡುತ್ತೀದ್ದೀರಾ? ಅದೇನೆಂಬುದನ್ನು ನೋಡಲು ಕೆಳಗಿನ ಸ್ಲೈಡ್ಸ್ ಕ್ಲಿಕ್ ಮಾಡಿ...

  ಇದೇ ತಿಂಗಳಿನಲ್ಲಿ ತೆರೆಗೆ?

  ಇದೇ ತಿಂಗಳಿನಲ್ಲಿ ತೆರೆಗೆ?

  ಈ ಮೊದಲು ಏಪ್ರಿಲ್ ತಿಂಗಳಿನಲ್ಲಿ ಸಿನಿಮಾ ಬಿಡುಗಡೆ ಆಗಲಿದೆ ಅಂತ ಚಿತ್ರತಂಡದವರು ಸಣ್ಣ ಕ್ಲ್ಯೂ ನೀಡಿದ್ದರು. ಆದರೆ ದಿನಾಂಕ ಮಾತ್ರ ಫಿಕ್ಸ್ ಆಗಿರಲಿಲ್ಲ. ಇದೀಗ ಬಿಡುಗಡೆ ದಿನಾಂಕ ಕೂಡ ಫಿಕ್ಸ್ ಆಗಿದೆ.[2 ಕೋಟಿ ರೂ.ವೆಚ್ಚದಲ್ಲಿ ಸುದೀಪ್ ಚಿತ್ರದ ಕ್ಲೈಮ್ಯಾಕ್ಸ್ ಶೂಟಿಂಗ್]

  ಏಪ್ರಿಲ್ ಕೊನೆಯ ವಾರ?

  ಏಪ್ರಿಲ್ ಕೊನೆಯ ವಾರ?

  ಸದ್ಯಕ್ಕೆ ಚಿತ್ರತಂಡದಿಂದ ಹೊರ ಬಿದ್ದಿರುವ ಮಾಹಿತಿ ಪ್ರಕಾರ ಬಹುನಿರೀಕ್ಷಿತ 'ಕೋಟಿಗೊಬ್ಬ 2' ಸಿನಿಮಾ ಏಪ್ರಿಲ್ 29ಕ್ಕೆ ಅದ್ಧೂರಿಯಾಗಿ ಇಡೀ ಕರ್ನಾಟಕ ಸೇರಿದಂತೆ ದೇಶದಾದ್ಯಂತ ತೆರೆ ಕಾಣಲಿದೆ.[ರಿಲೀಸ್ ಗೂ ಮುನ್ನ ದಾಖಲೆ ಮೊತ್ತಕ್ಕೆ ಮಾರಾಟವಾದ ಕಿಚ್ಚನ ಚಿತ್ರ]

  ಬಿಗ್ ಕ್ಲ್ಯಾಷ್

  ಬಿಗ್ ಕ್ಲ್ಯಾಷ್

  ಅಂದಹಾಗೆ ಇಬ್ಬರು ಸ್ಟಾರ್ ನಟರಾದ ಪುನೀತ್ ರಾಜ್ ಕುಮಾರ್ ಮತ್ತು ಸುದೀಪ್ ಅವರ ಬಿಗ್ ಬಜೆಟ್ ನ ಸಿನಿಮಾಗಳಾದ 'ಚಕ್ರವ್ಯೂಹ' ಮತ್ತು 'ಮುಡಿಂಜ ಇವನ ಪುಡಿ' ಇದೇ ತಿಂಗಳಿನಲ್ಲಿ ತೆರೆ ಕಾಣುತ್ತಿರುವುದರಿಂದ ಬಿಗ್ ಕ್ಲ್ಯಾಷ್ ಆಗುವ ಎಲ್ಲಾ ಸಾಧ್ಯತೆಗಳು ಕಂಡುಬರುತ್ತಿವೆ.

  ಏಪ್ರಿಲ್ ನಲ್ಲಿ ತೆರೆ ಕಂಡಿದ್ದ 'ರನ್ನ'

  ಏಪ್ರಿಲ್ ನಲ್ಲಿ ತೆರೆ ಕಂಡಿದ್ದ 'ರನ್ನ'

  ಕಳೆದ ಬಾರಿ ಕಿಚ್ಚ ಸುದೀಪ್ ಅವರ 'ರನ್ನ' ಸಿನಿಮಾ ಕೂಡ ಏಪ್ರಿಲ್ ತಿಂಗಳಿನಲ್ಲಿ ತೆರೆಕಂಡು ಭರ್ಜರಿ 50 ದಿನಗಳನ್ನು ಪೂರೈಸಿತ್ತು.

  2 ಸಿನಿಮಾಗಳಲ್ಲಿ ಬ್ಯುಸಿ

  2 ಸಿನಿಮಾಗಳಲ್ಲಿ ಬ್ಯುಸಿ

  ಸದ್ಯಕ್ಕೆ ಕಿಚ್ಚ ಸುದೀಪ್ ಅವರು ನಿರ್ದೇಶಕ ನಂದ ಕಿಶೋರ್ ಅವರ ಜೊತೆ ಹಿಂದಿ ರೀಮೆಕ್ 'ಮುಕುಂದ ಮುರಾರಿ' ಮತ್ತು 'ಗಜಕೇಸರಿ' ಚಿತ್ರದ ಖ್ಯಾತಿಯ ನಿರ್ದೇಶಕ ಕೃಷ್ಣ ಅವರು ಆಕ್ಷನ್-ಕಟ್ ಹೇಳುತ್ತಿರುವ 'ಹೆಬ್ಬುಲಿ' ಚಿತ್ರದ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ. ತದನಂತರ ಜೋಗಿ ಪ್ರೇಮ್ ಅವರ ನಿರ್ದೇಶನದ 'ಕಲಿ' ಚಿತ್ರದಲ್ಲಿ ಶಿವಣ್ಣ ಅವರ ಜೊತೆ ತಮ್ಮನ್ನು ತಾವು ತೊಡಗಿಸಿಕೊಳ್ಳಲಿದ್ದಾರೆ.

  English summary
  Sudeep's bilingual flick Mudinja Ivana Pudi will be hitting the marquee on April 29. Directed by 'Lingaa' fame director KS Ravikumar and produced by Surapppa Babu. Kannada Actor Sudeep and Actress Nithya Menen in the lead roles.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X