»   » 'ಲೀ'ಗಾಗಿ ಮಾರ್ಷಲ್ ಆರ್ಟ್ಸ್ ಕಲಿತ ಸುಮಂತ್ ಶೈಲೇಂದ್ರ

'ಲೀ'ಗಾಗಿ ಮಾರ್ಷಲ್ ಆರ್ಟ್ಸ್ ಕಲಿತ ಸುಮಂತ್ ಶೈಲೇಂದ್ರ

Posted By:
Subscribe to Filmibeat Kannada

'ಬೆತ್ತನೆ ಗೆರೆ' ಸಿನಿಮಾ ಖ್ಯಾತಿಯ ನಟ ಸುಮಂತ್ ಶೈಲೇಂದ್ರ ಅವರ 'ಭಲೇ ಜೋಡಿ' ಸಿನಿಮಾ ಇನ್ನೂ ಪೆಂಡಿಂಗ್ ನಲ್ಲಿರುವಾಗಲೇ ಮತ್ತೊಂದು ಸಿನಿಮಾ ಒಪ್ಪಿಕೊಂಡಿದ್ದಾರೆ. ಜನವರಿ 24, ಆದಿತ್ಯವಾರದಂದು 'ಕಂಠೀರವ ಸ್ಟುಡಿಯೋದಲ್ಲಿ' ಚಿತ್ರದ ಮೂಹೂರ್ತ ನೆರವೇರಲಿದ್ದು, ಚಿತ್ರಕ್ಕೆ 'ಲೀ' ಎಂದು ಹೆಸರಿಡಲಾಗಿದೆ.

ಹೌದು ಜಗ್ಗೇಶ್ ಮತ್ತು ದರ್ಶನ್ ಕಾಣಿಸಿಕೊಂಡಿದ್ದ 'ಅಗ್ರಜ' ಸಿನಿಮಾವನ್ನು ನಿರ್ದೇಶನ ಮಾಡಿದ್ದ ನಿರ್ದೇಶಕ ಶ್ರೀನಂದನ್ ಅವರು ಸುಮಂತ್ ಅವರ ಹೊಸ ಚಿತ್ರ 'ಲೀ'ಗೆ ಆಕ್ಷನ್-ಕಟ್ ಹೇಳುತ್ತಿದ್ದಾರೆ.[ವಿಮರ್ಶೆ: ಒಂದು ಬಾರಿ ನೋಡಲಡ್ಡಿಯಿಲ್ಲ ಮಾರಾಯ್ರೆ 'ಬೆತ್ತನಗೆರೆ' ]

Actor Sumanth Shailendra's 'Lee' movie to be launched on Sunday

ಕೆ.ಎಫ್.ಸಿ.ಸಿ ಅಧ್ಯಕ್ಷ ಸಾ.ರಾ ಗೋವಿಂದು ಅವರು ದೀಪ ಬೆಳಗುವ ಮೂಲಕ ಚಿತ್ರಕ್ಕೆ ಮೂಹೂರ್ತ ನೆರವೇರಿಸಿದರೆ, ಸಿ.ಆರ್ ಮನೋಹರ್ ಅವರು ಕ್ಯಾಮರಾ ಬಟನ್ ಒತ್ತಿ ಚಾಲನೆ ನೀಡಲಿದ್ದಾರೆ. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ಫಸ್ಟ್ ಶಾಟ್ ಗೆ ಕ್ಲಾಪ್ ಮಾಡಿದರೆ, ನಿರ್ದೇಶಕ ದುನಿಯಾ ಸೂರಿ ಅವರು ಡೈರೆಕ್ಷನ್ ಗೆ ಕ್ಲಾಪ್ ಮಾಡುವ ಮೂಲಕ ಚಿತ್ರೀಕರಣಕ್ಕೆ ಚಾಲನೆ ನೀಡಲಿದ್ದಾರೆ.

ಪಕ್ಕಾ ಆಕ್ಷನ್ ಚಿತ್ರವಾಗಿರುವ 'ಲೀ' ಚಿತ್ರಕ್ಕೆ ನಟ ಸುಮಂತ್ ಶೈಲೇಂದ್ರ ಅವರು 'ವುಷು' ಎಂಬ ಏಳು ಮಾರ್ಷಿಯಲ್ ಆರ್ಟ್ಸ್ ಕಲೆಯನ್ನೊಳಗೊಂಡ ವಿದ್ಯೆಯನ್ನು ಮೂರು ತಿಂಗಳಿನಿಂದ ಕಲಿತು ಈಗಾಗಲೇ ಸಿದ್ಧವಾಗಿದ್ದಾರೆ.['ಬೆತ್ತನಗೆರೆ' ಸೀನನ (ಸುಮಂತ್ ಶೈಲೇಂದ್ರ) ಜೊತೆ ಚಿಟ್ ಚಾಟ್]

Actor Sumanth Shailendra's 'Lee' movie to be launched on Sunday

ಮಾರ್ಷಲ್ ಆರ್ಟ್ಸ್ ಚಿತ್ರವಾಗಿರುವುದರಿಂದ ಇದಕ್ಕೆ 'ಲೀ' ಎಂಬ ಟೈಟಲ್ ಕೊಟ್ಟಿರಬಹುದು. ನಿರ್ದೇಶಕ ಎ ಹರ್ಷ ಅವರ 'ವಜ್ರಕಾಯ' [ಚಿತ್ರವಿಮರ್ಶೆ ; ಶಿವ ಭಕ್ತರಿಗೆ 'ವಜ್ರಕಾಯ' ನೋ ಪ್ರಾಬ್ಲಂ.! ] ಚಿತ್ರದಲ್ಲಿ ನಟ ಶಿವರಾಜ್ ಕುಮಾರ್ ಅವರಿಗೆ ಗಂಡುಬೀರಿ ನಾಯಕಿಯಾಗಿ ಕಾಣಿಸಿಕೊಂಡಿದ್ದ ನಟಿ ನಭಾ ನಟೇಶ್ ಅವರು 'ಲೀ' ಚಿತ್ರದಲ್ಲಿ ನಟ ಸುಮಂತ್ ಶೈಲೇಂದ್ರ ಅವರ ಜೊತೆ ಡ್ಯುಯೆಟ್ ಹಾಡಲಿದ್ದಾರೆ.

Actor Sumanth Shailendra's 'Lee' movie to be launched on Sunday

ಇನ್ನು ಇವರ ಜೊತೆ ಖಳ ನಟ ರವಿಶಂಕರ್, ಕಾಮಿಡಿ ನಟ ಸಾಧುಕೋಕಿಲ, ರಂಗಾಯಣ ರಘು, ಅಚ್ಯುತ್ ಕುಮಾರ್, ಚಿಕ್ಕಣ್ಣ, ಸುಧಾ ಬೆಳವಾಡಿ ಮುಂತಾದವರ ತಾರಾಗಣವಿದ್ದು, ಸಂಗೀತ ನಿರ್ದೇಶಕ ಗುರುಕಿರಣ್ ಅವರು ಮ್ಯೂಸಿಕ್ ಕಂಪೋಸ್ ಮಾಡಲಿದ್ದಾರೆ.

ಒಟ್ಟಿನಲ್ಲಿ ಲವರ್ ಬಾಯ್ ಆಗಿ ತದನಂತರ 'ಬೆತ್ತನಗೆರೆ'ಯಲ್ಲಿ ರೌಡಿ ಶೀಟರ್ ಸೀನ ಆಗಿ ಮಿಂಚಿದ್ದ ಸುಮಂತ್ ಶೈಲೇಂದ್ರ ಅವರು ಮತ್ತೆ 'ಲೀ' ಮೂಲಕ ಆಕ್ಷನ್ ಕಿಂಗ್ ಆಗಲು ಹೊರಟಿದ್ದಾರೆ.

English summary
Sumanth Shailendra's new film 'Lee' which is being written and directed by Srinandan of 'Agraja' fame is all set to be launched on the 24th (Sunday) of January. The muhurath function is organised at the Kanteerava Studio and KFCC President Sa Ra Govindu will be lighting the lamp. C R Manohar will be switching on the camera while Puneeth Rajakumar will be sounding the clap for the first shot. 'Duniya' Soori will be directing the first shot.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada