For Quick Alerts
  ALLOW NOTIFICATIONS  
  For Daily Alerts

  ಸೂರಜ್ ಗೌಡ ಕುಟುಂಬದ ಕ್ಯೂಟಿ ಚಾರ್ಲಿ ಚಿತ್ರರಂಗಕ್ಕೆ ಎಂಟ್ರಿ

  By Bharath Kumar
  |

  'ಮದುವೆಯ ಮಮತೆಯ ಕರೆಯೋಲೆ' ಚಿತ್ರದ ಖ್ಯಾತಿಯ ನಟ ಸೂರಜ್ ಗೌಡ ಹೊಸ ಚಿತ್ರಕ್ಕೆ ಸಜ್ಜಾಗಿದ್ದಾರೆ. ವಿಶೇಷ ಏನಪ್ಪಾ ಅಂದ್ರೆ, ಈ ಚಿತ್ರದಲ್ಲಿ ಸೂರಜ್ ಗೌಡ ಅವರ ಮುದ್ದು ಬೆಕ್ಕು ಕೂಡ ಅಭಿನಯಿಸಲಿದೆಯಂತೆ. ಈ ಮೂಲಕ ಚಾರ್ಲಿ ಗೌಡ ಎಂಬ ಹೆಸರಿನ ಬೆಕ್ಕು ಸೂರಜ್ ಗೌಡ ಅವರೊಂದಿಗೆ ಚಿತ್ರರಂಗ ಪ್ರವೇಶ ಮಾಡುತ್ತಿದೆ.

  'ಕಹಿ' ಖ್ಯಾತಿಯ ಅರವಿಂದ್ ಶಾಸ್ತ್ರಿ ಈ ಚಿತ್ರವನ್ನ ನಿರ್ದೇಶನ ಮಾಡುತ್ತಿದ್ದು, ಸಂಗೀತಾ ಭಟ್ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಆಶು ಬೇದ್ರೆ ಕೂಡ ಚಿತ್ರದಲ್ಲಿ ಪ್ರಮುಖ ಪಾತ್ರವನ್ನ ನಿರ್ವಹಿಸುತ್ತಿದ್ದಾರೆ. ಚಿತ್ರದಲ್ಲಿ ಸೂರಜ್ ಗೌಡ ಅವರ ಬೆಕ್ಕು, ಸಂಗೀತಾ ಭಟ್ ಅವರ ಜೊತೆ ಕಾಣಿಸಿಕೊಳ್ಳಲಿದೆಯಂತೆ.

  ಇನ್ನು ಚಾರ್ಲಿ ಗೌಡ ಬೆಕ್ಕಿಗೆ ಆಕ್ಷನ್ ಕಟ್ ಹೇಳುತ್ತಿರುವುದು ಸ್ವತಃ ನಿರ್ದೇಶಕರಿಗೆ ಖುಷಿ ಕೊಟ್ಟಿದೆಯಂತೆ. ಚಾರ್ಲಿ ಗೌಡ ಬೆಕ್ಕನ್ನ ಈ ತಮ್ಮ ಚಿತ್ರದಲ್ಲಿ ನಟಿಸುವಂತೆ ಅರವಿಂದ್ ಶಾಸ್ತ್ರಿ ಅವರೇ ಆಫರ್ ಮಾಡಿದ್ದರಂತೆ. ಇದಕ್ಕು ಮುಂಚೆ ಚಾರ್ಲಿಗೆ ತುಂಬಾ ಅವಕಾಶ ಬಂದಿದ್ದರೂ ಸೂರಜ್ ಅವರು ಯಾವ ಚಿತ್ರಕ್ಕೂ ಸಮ್ಮತಿಸಿರಲಿಲ್ಲ. ಆದ್ರೆ, ಈ ಚಿತ್ರಕ್ಕಾಗಿ ಚಾರ್ಲಿಯನ್ನ ಸಿದ್ದ ಮಾಡಿದ್ದಾರೆ.

  ಚಾರ್ಲಿ ಗೌಡ ಬೆಕ್ಕು ಇನ್ಸ್ಟ್ ಗ್ರಾಮ್ ನಲ್ಲಿ ಸ್ವಂತ ಪೇಜ್ ಹೊಂದಿದ್ದು, ಫಾಲೋವರ್ಸ್ ಕೂಡ ಹೊಂದಿದೆ. ಒಟ್ನಲ್ಲಿ, ಇನ್ನು ಹೆಸರಿಡದ ಈ ಚಿತ್ರದಲ್ಲಿ ಕಲಾವಿದರ ಜೊತೆ ಸೂರಜ್ ಗೌಡ ಕುಟುಂಬದ ಕ್ಯೂಟಿ ಚಾರ್ಲಿ ಚಿತ್ರರಂಗಕ್ಕೆ ಎಂಟ್ರಿ ಕೊಡ್ತಿರುವುದು ವಿಶೇಷವೇ ಸರಿ.

  English summary
  Actor Suraj Gowda's Happy Lately, and this time Because his Cat Charlie Gowda is all set to Debut in films. Charlie will be Debuting in a film Directed by Arvind Sastry, who Made 'Kahi'

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X