»   » ಪವರ್ ಸ್ಟಾರ್ ಪುನೀತ್ ಚಿತ್ರದಲ್ಲಿ ಕಿಸ್ಸಿಂಗ್ ಸ್ಟಾರ್ ತಿಲಕ್

ಪವರ್ ಸ್ಟಾರ್ ಪುನೀತ್ ಚಿತ್ರದಲ್ಲಿ ಕಿಸ್ಸಿಂಗ್ ಸ್ಟಾರ್ ತಿಲಕ್

Posted By:
Subscribe to Filmibeat Kannada

ಈಟಿವಿ ಕನ್ನಡದ ಬಿಗ್ ಬಾಸ್ ರಿಯಾಲಿತಿ ಶೋ ಬಳಿಕ 'ಗಂಡಹೆಂಡತಿ' ತಿಲಕ್ ಏನಾದರು ಎಂಬ ಪ್ರಶ್ನೆಗೆ ಈ ಉತ್ತರ ಸಿಕ್ಕಿದೆ. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಮುಖ್ಯಭೂಮಿಕೆಯಲ್ಲಿರುವ 'ನಿನ್ನಿಂದಲೇ' ಚಿತ್ರದಲ್ಲಿ ತಿಲಕ್ ಅಭಿನಯಿಸುತ್ತಿದ್ದಾರೆ.

ಚಿತ್ರದಲ್ಲಿ ಅವರದು ಪೊಲೀಸ್ ಅಧಿಕಾರಿ ಪಾತ್ರ. ನ್ಯೂಯಾರ್ಕ್ ನ ವಿಶೇಷ ಪೊಲೀಸ್ ಅಧಿಕಾರಿಯಾಗಿ ತಿಲಕ್ ಕಾಣಿಸುತ್ತಿದ್ದಾರೆ. ಆದರೆ ತಮ್ಮ ಪಾತ್ರ ಉಳಿದ ವಿವರಗಳನ್ನು ನೀಡಲು ಅವರು ನಿರಾಕರಿಸಿದ್ದಾರೆ. ಈ ಹಿಂದೆ 'ರಾಮ್' ಚಿತ್ರದಲ್ಲೂ ಪುನೀತ್ ಜೊತೆ ಕಿಸ್ಸಿಂಗ್ ಸ್ಟಾರ್ ತಿಲಕ್ ಅಭಿನಯಿಸಿದ್ದರು.

Ninnindale still

ಈಗಾಗಲೆ ನಲವತ್ತು ದಿನಗಳ ಶೂಟಿಂಗ್ ಮುಗಿಸಿಕೊಂಡ 'ನಿನ್ನಿಂದಲೇ' ಚಿತ್ರತಂಡ ಹಿಂತಿರುಗಿದೆ. ತೆಲುಗಿನ ಯಶಸ್ವಿ ನಿರ್ದೇಶಕ ಜಯಂತ್ ಪರಾಂಜೆ ಇದೇ ಮೊದಲ ಬಾರಿಗೆ ಕನ್ನಡದಲ್ಲಿ ಆಕ್ಷನ್ ಕಟ್ ಹೇಳುತ್ತಿರುವ ಚಿತ್ರವಿದು. ಈ ಚಿತ್ರದ ಬಗ್ಗೆ ಮಾತನಾಡಿರುವ ಜಯಂತ್, "ಈ ಚಿತ್ರವನ್ನು ಹಿಂದಿಯಲ್ಲಿ ಮಾಡಬೇಕು ಎಂದುಕೊಂಡಿದ್ದೆ. ಆದರೆ ಪುನೀತ್ ಗೆ ಕಥೆ ಹೇಳಿದಾಗ ಅವರು ಕೂಡಲೆ ಒಪ್ಪಿಕೊಂಡರು".

ಹೊಂಬಾಳೆ ಫಿಲಂಸ್ ಲಾಂಛನದಲ್ಲಿ ಈ ಚಿತ್ರವನ್ನು ವಿಜಯ್ ಕುಮಾರ್ ನಿರ್ಮಿಸುತ್ತಿದ್ದಾರೆ. ಚಿತ್ರವನ್ನು ಭಾರಿ ಬಜೆಟ್ ನಲ್ಲಿ ನಿರ್ಮಿಸಲಾಗಿದೆ. ಅಮೆರಿಕಾದಲ್ಲಿ ನೆಲೆನಿಂತ ಭಾರತೀಯ ಕುಟುಂಬ, ಅಲ್ಲಿಗೆ ಬರುವ ಮತ್ತೊಂದು ಕುಟುಂಬದ ನಡುವಿನ ಕಥಾಹಂದರವನ್ನು 'ನಿನ್ನಿಂದಲೇ' ಒಳಗೊಂಡಿದೆ.

ಬಹುತೇಕ ಭಾಗದ ಚಿತ್ರೀಕರಣ ನ್ಯೂಯಾರ್ಕ್ ನಲ್ಲಿ ನಡೆದಿದೆ. ಕೊನೆಯ ಹಂತದ ಚಿತ್ರೀಕರಣವನ್ನು ಬೆಂಗಳೂರಿನಲ್ಲಿ ನಡೆಯಲಿದೆ. ಮಣಿಶರ್ಮ ಸಂಗೀತವುಳ್ಳ ಚಿತ್ರವನ್ನು ಕ್ರಿಸ್ಮಸ್ ಅಥವಾ ಸಂಕ್ರಾಂತಿ ಹಬ್ಬಕ್ಕೆ ಬಿಡುಗಡೆ ಮಾಡಬೇಕೆಂದು ನಿರ್ಧರಿಸಿದ್ದಾರೆ. ಎರಿಕಾ ಫರ್ನಾಂಡೀಸ್ ಚಿತ್ರದ ನಾಯಕಿ. (ಏಜೆನ್ಸೀಸ್)

English summary
Kannada films actor Tilak Shekar joins the team of Ninnidale, which leads Puneeth Rajkumar and Erica Fernandes. The team returned from a long shooting schudle in the US.
Please Wait while comments are loading...