»   » 'ರಾಜು' ನೋಡಿ ಫಸ್ಟ್ ಕ್ಲಾಸ್ ಎಂದ ಉಪ್ಪಿ

'ರಾಜು' ನೋಡಿ ಫಸ್ಟ್ ಕ್ಲಾಸ್ ಎಂದ ಉಪ್ಪಿ

Posted By:
Subscribe to Filmibeat Kannada

'ರಂಗಿತರಂಗ' ಎಂಬ ಹೊಸಬರ ಉಡುಗೊರೆ ಸ್ಯಾಂಡಲ್ ವುಡ್ ಗೆ ಕೊಡುಗೆಯಾಗಿ ಸಿಕ್ಕ ನಂತರ ಹೊಸ ಪ್ರತಿಭೆಗಳು ಮುಟ್ಟಿದ್ದೆಲ್ಲಾ ಚಿನ್ನ ಆಗುತ್ತಿದೆ. ಅದಕ್ಕೆ ಉತ್ತಮ ನಿದರ್ಶನ ಎಂದರೆ ತದನಂತರ ಬಂದ 'ಕೆಂಡಸಂಪಿಗೆ', 'ನಾನು ಅವನಲ್ಲ ಅವಳು' ಮತ್ತು 'ಫಸ್ಟ್‌ ರ‍್ಯಾಂಕ್‌ ರಾಜು'.

ಇನ್ನು ಹೊಸಬರ ಸಿನಿಮಾಗಳನ್ನು ನಮ್ಮ ಚಂದನವನದ ಸ್ಟಾರ್ ನಟರು ನೋಡಿ ಮೆಚ್ಚಿಕೊಂಡು ಹೊಸ ಪ್ರತಿಭೆಗಳಿಗೆ ಶುಭ ಹಾರೈಸೋದು ಇತ್ತೀಚೆಗೆ ಒಂಥರಾ ಟ್ರೆಂಡ್ ಆಗುತ್ತಿದೆ.[ಫಸ್ಟ್ Rank ರಾಜು ಚಿತ್ರವಿಮರ್ಶೆ: ಡಿಸ್ಟಿಂಕ್ಷನ್ ಗೆ ಕೊಂಚ ಕಮ್ಮಿ]

Actor Upendra watch well appreciated movie 'First Rank Raju'

'ರಂಗಿತರಂಗ', 'ಕೆಂಡಸಂಪಿಗೆ', 'ನಾನು ಅವನಲ್ಲ ಅವಳು' ಮುಂತಾದ ಸಿನಿಮಾಗಳನ್ನು ನಮ್ಮ ಸ್ಟಾರ್ ನಟರಾದ ದರ್ಶನ್, ಯಶ್, ಶಿವರಾಜ್ ಕುಮಾರ್, ಸುದೀಪ್, ಪುನೀತ್ ರಾಜ್ ಕುಮಾರ್ ಮುಂತಾದವರು ನೋಡಿದರೆ, ಇದೀಗ ಸಾಫ್ಟ್ ವೇರ್ ಇಂಜಿನಿಯರ್ ನರೇಶ್ ಕುಮಾರ್ ಆಕ್ಷನ್-ಕಟ್ ಹೇಳಿದ್ದ ಹೊಸ ಪ್ರತಿಭೆಗಳ 'ಫಸ್ಟ್‌ ರ‍್ಯಾಂಕ್‌ ರಾಜು' ಸಿನಿಮಾವನ್ನು ರಿಯಲ್ ಸ್ಟಾರ್ ಉಪೇಂದ್ರ ಮತ್ತು ಸಂಗೀತ ನಿರ್ದೇಶಕ ಗುರುಕಿರಣ್ ಅವರು ನೋಡಿ ಮೆಚ್ಚಿಕೊಂಡಿದ್ದಾರೆ.

ಹೌದು ಬರೀ ಉಪೇಂದ್ರ, ಗುರುಕಿರಣ್ ಅವರು ಮಾತ್ರವಲ್ಲದೆ ಸ್ಯಾಂಡಲ್ ವುಡ್ ನ ಖ್ಯಾತ ನಿರ್ದೇಶಕರುಗಳಾದ ಮಂಜು ಮಾಂಡವ್ಯ (ಮಾಸ್ಟರ್ ಪೀಸ್) ಮತ್ತು ಶಶಾಂಕ್ (ಕೃಷ್ಣಲೀಲಾ) ಮತ್ತು ರಾಜಕೀಯ ವ್ಯಕ್ತಿ ಸಿ.ಟಿ ರವಿ ಅವರು ನೋಡಿ ಮೆಚ್ಚಿಕೊಂಡಿದ್ದಾರೆ.['ಫಸ್ಟ್‌ ರ‍್ಯಾಂಕ್‌ ರಾಜು' ತಮಿಳಿಗೆ ರಿಮೇಕ್ ಆಗುತ್ತಾ?]

Actor Upendra watch well appreciated movie 'First Rank Raju'

ಅಂದಹಾಗೆ ಹೊಸ ಪ್ರತಿಭೆ ನಟ ಗುರುನಂದನ್, ನಟಿ ಅಪೂರ್ವ ಗೌಡ ಮತ್ತು ತನಿಷ್ಕಾ ಅವರು ನಟಿಸಿರುವ ಈ ಸಿನಿಮಾವನ್ನು ಈ ಮೊದಲು ನಟ ಶಿವರಾಜ್ ಕುಮಾರ್, ರಾಘವೇಂದ್ರ ರಾಜ್ ಕುಮಾರ್ ಮತ್ತು ತಮಿಳು ನಟ ಸೂರ್ಯ ಅವರು ನೋಡಿ ವಾವ್ ಸಖತ್ ಆಗಿದೆ ಎಂಬ ಉದ್ಘಾರ ತೆಗೆದಿದ್ದರು. ಇದೀಗ ಉಪ್ಪಿ ಮತ್ತು ನಿರ್ದೇಶಕರುಗಳ ಸರದಿ.

ಒಟ್ನಲ್ಲಿ ಹೊಸಬರ ಈ ವಿನೂತನ ಪ್ರಯತ್ನವನ್ನು ಕಂಡ ಉಪೇಂದ್ರ ಮತ್ತು ಖ್ಯಾತ ನಿರ್ದೇಶಕರು ಮನಸಾರೆ ಹೊಗಳಿದ್ದನ್ನು ಕಂಡು ನರೇಶ್ ಮತ್ತು ತಂಡದವರು ಫುಲ್ ಖುಷ್ ಆಗಿದ್ದಾರೆ.

English summary
Kannada Actor Upendra, Music director Gurukiran, Director Manju Mandavya and Director Shashank to watch appreciated Movie 'First Rank Raju'. The movie is directed by Newbie Naresh Kumar.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada