For Quick Alerts
  ALLOW NOTIFICATIONS  
  For Daily Alerts

  JOB VACANCY : ಉಪ್ಪಿ ಜೊತೆ ಕೆಲಸ ಮಾಡುವವರಿಗೆ 2 ಲಕ್ಷ ಸಂಬಳ!

  |
  ಉಪ್ಪಿ ಜೊತೆ ಕೆಲಸ ಮಾಡುವವರಿಗೆ 2 ಲಕ್ಷ ಸಂಬಳ! | Filmibeat Kannada

  ಒಂದು ಕೆಲಸ ಹುಡುಕಿಕೊಂಡು ಪ್ರತಿ ದಿನ ಅದೆಷ್ಟೋ ಜನ ಬೆಂಗಳೂರಿಗೆ ಬರುತ್ತಾರೆ. ಕಷ್ಟ ಪಟ್ಟು ಕೆಲಸ ಹುಡುಕಿ ತಿಂಗಳ ಸಂಬಳಕ್ಕೆ ದುಡಿಯುತ್ತಾರೆ. ಹೀಗಿರುವಾಗ, ಈಗ ಲಕ್ಷ ಲಕ್ಷ ಸಂಬಳ ನೀಡುವ ಆಫರ್ ಒಂದು ಬಂದಿದೆ.

  ಹೌದು, ನಟ ಉಪೇಂದ್ರ ಈಗ ಕೆಲವು ಹುದ್ದೆಗಳ ನೇಮಕಾತಿಗೆ ಕರೆದಿದ್ದಾರೆ. ಉಪೇಂದ್ರ ತಮ್ಮ ಜೊತೆಗೆ ಕೆಲಸ ಮಾಡುವವರಿಗೆ ನೀಡುತ್ತಿರುವುದು ಬರೋಬ್ಬರಿ 2 ದಿಂದ 2 ಲಕ್ಷ 60 ಸಾವಿರದ ವರೆಗೆ ಸಂಬಳ. ಯಾವುದೇ ಕೆಲಸಕ್ಕೆ ತೆಗೆದುಕೊಂಡರೆ ಮೊದಲು ಅನುಭವ ಕೇಳುತ್ತಾರೆ. ಆದರೆ, ಉಪ್ಪಿ ತಮ್ಮ ಈ ಕೆಲಸಕ್ಕೆ ಯಾವುದೇ ಅನುಭವ ಮತ್ತು ವಿದ್ಯಾರ್ಹತೆ ಬೇಕಿಲ್ಲ ಎಂದು ಹೇಳುತ್ತಿದ್ದಾರೆ

  ವಿಧ್ಯೆ, ಅನುಭವ ಇಲ್ಲದೆ ಇದ್ದರೂ ಹೇಗೆ ಲಕ್ಷ ಲಕ್ಷ ಸಂಬಳ ಪಡೆಯಲು ಸಾಧ್ಯ?, ಇಷ್ಟೊಂದು ಸಂಬಳ ನೀಡುವ ಈ ಕೆಲಸ ಯಾವುದು ಎಂಬ ಕುತೂಹಲ ನಿಮಗೂ ಬಂದಿರಬಹುದು. ಅಂದಹಾಗೆ, ಉಪೇಂದ್ರ ಹೇಳುತ್ತಿರುವ ಈ ಕೆಲಸದ ವಿವರ ಮುಂದಿದೆ ಓದಿ...

  ಲೋಕಸಭಾ ಸದಸ್ಯ

  ಲೋಕಸಭಾ ಸದಸ್ಯ

  ಉಪೇಂದ್ರ ಜನರನ್ನು ಕೆಲಸಕ್ಕೆ ಕರೆಯುತ್ತಿರುವುದು ಲೋಕಸಭಾ ಸದಸ್ಯ ಸ್ಥಾನಕ್ಕಾಗಿ. ಈ ಬಗ್ಗೆ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಒಂದು ಫೋಟೋ ಹಾಕಿರುವ ಉಪ್ಪಿ. ಲೋಕಸಭಾ ಸದಸ್ಯ ಕೆಲಸಕ್ಕೆ ಅರ್ಜಿ ಹಾಕಿ ಎಂದು ಹೇಳಿದ್ದಾರೆ. ಈ ಮೂಲಕ ತಮ್ಮ ಉತ್ತಮ ಪ್ರಜಾಕೀಯ ಪಕ್ಷ ಸೇರಲು ಎಲ್ಲರಿಗೆ ಮುಕ್ತ ವೇದಿಕೆ ನೀಡಿದ್ದಾರೆ.

  ಇದು ಸೇವೆಯಲ್ಲ.. ಕೆಲಸ..

  ಇದು ಸೇವೆಯಲ್ಲ.. ಕೆಲಸ..

  ಉಪೇಂದ್ರ ತಮ್ಮ ಪಕ್ಷ ಸ್ಥಾಪನೆ ಮಾಡಿದ ದಿನದಿಂದ 'ಚುನಾವಣೆ ಗೆದ್ದ ಅಭ್ಯರ್ಥಿಗಳು ಮಾಡುವುದು ಸೇವೆಯಲ್ಲ.. ಅದು ಅವರ ಕೆಲಸ' ಎಂದು ಹೇಳುತ್ತಾ ಬರುತ್ತಿದ್ದಾರೆ. ಈಗ ಅದೇ ರೀತಿ ಲೋಕಸಭಾ ಚುನಾವಣೆಗೆ ತಮ್ಮ ಪಕ್ಷದಿಂದ ಸ್ಪರ್ಧೆ ಮಾಡಲು ಆಹ್ವಾನ ನೀಡಿದ್ದಾರೆ. ಕೆಲಸಕ್ಕೆ ಬರುವವರಿಗೆ ಸಂಬಳವನ್ನು ಸಹ ಫಿಕ್ಸ್ ಮಾಡಿದ್ದಾರೆ.

  ಅರ್ಹತೆಗಳು

  'ಪ್ರಾಮಾಣಿಕ, ಸದಾ ಕಾರ್ಯನಿರತ, ದೇಶಪ್ರೇಮಿ ಭಾರತೀಯ ನಾಗರೀಕನಾಗಿರಬೇಕು'

  ವಯೋಮಿತಿ : 25 ವರ್ಷ ದಾಟಿರಬೇಕು, ಗಂಡು ಹೆಣ್ಣು ಬೇದವಿಲ್ಲ

  ಅನುಭವ, ಅರ್ಹತೆ ಕಡ್ಡಾಯವಿಲ್ಲ

  (ಇವಿಷ್ಟು ಅರ್ಹತೆಗಳು ಇರಬೇಕು)

  2 ಲಕ್ಷ ಸಂಬಳ

  2 ಲಕ್ಷ ಸಂಬಳ

  ಚುನಾವಣೆಯಲ್ಲಿ ಭಾಗಿಯಾಗಿ, ಗೆದ್ದು ಲೋಕಸಭಾ ಸದಸ್ಯ ಆದ ಮೇಲೆ ಪ್ರತಿ ತಿಂಗಳಿಗೆ ಸರ್ಕಾರದಿಂದ ಸಂಬಳ ಬರುತ್ತಿದೆ. ಆಯ್ಕೆ ಆದ ಲೋಕಸಭಾ ಸದಸ್ಯರಿಗೆ 2 ದಿಂದ 2 ಲಕ್ಷ 60 ಸಾವಿರದವರಗೆ ಸರ್ಕಾರದಿಂದಲೇ ಸಂಬಳ ಸಿಗುತ್ತದೆ. ಈ ಪ್ರಕ್ರಿಯೆಯನ್ನು ಉಪೇಂದ್ರ ಈ ರೀತಿ ಹೇಳಿದ್ದಾರೆ.

  ಉಪ್ಪಿ ಸ್ಪರ್ಧೆ ಮಾಡುತ್ತಿಲ್ಲ

  ಉಪ್ಪಿ ಸ್ಪರ್ಧೆ ಮಾಡುತ್ತಿಲ್ಲ

  ಈ ಬಾರಿಯ ಚುನಾವಣೆಗೆ ತಮ್ಮ ಪಕ್ಷದಿಂದ ರಾಜ್ಯದ ಎಲ್ಲ ಲೋಕಸಭೆ ಕ್ಷೇತ್ರಗಳಿಂದ ಅಭ್ಯರ್ಥಿಗಳು ಸ್ಪರ್ಧೆ ಮಾಡುತ್ತಾರೆ ಎಂದು ಉಪೇಂದ್ರ ಹೇಳಿದ್ದಾರೆ. ಜೊತೆಗೆ ತಾವು ಈ ಬಾರಿ ಚುನಾವಣೆಗೆ ಸ್ಪರ್ಧೆ ಮಾಡುತ್ತಿಲ್ಲ ಎಂದು ತಿಳಿಸಿದ್ದಾರೆ. ಮುಂದಿನ ವಿಧಾನಸಭೆಗೆ ಉಪ್ಪಿ ಅಖಾಡಕ್ಕೆ ಇಳಿತಾರಂತೆ.

  English summary
  Kannada actor Upendra's call for 2 lakh MP's with the salary of 2 lakh rupees.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X