»   » ಯಶ್ 'ಕೆ.ಜಿ.ಎಫ್'ಗೆ ಬಂದ 'ರಾಜಾಹುಲಿ' ವಿಲನ್.!

ಯಶ್ 'ಕೆ.ಜಿ.ಎಫ್'ಗೆ ಬಂದ 'ರಾಜಾಹುಲಿ' ವಿಲನ್.!

Posted By:
Subscribe to Filmibeat Kannada
KGF: Kannada movie second poster is released

ರಾಕಿಂಗ್ ಸ್ಟಾರ್ ಯಶ್ ಅಭಿನಯಿಸುತ್ತಿರುವ ಬಹುಕೋಟಿ ವೆಚ್ಚದ ಸಿನಿಮಾ 'ಕೆ.ಜಿ.ಎಫ್' ಭರದಿಂದ ಚಿತ್ರೀಕರಣ ಮಾಡುತ್ತಿದೆ. 'ಉಗ್ರಂ' ಖ್ಯಾತಿ ಪ್ರಶಾಂತ್ ನೀಲ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದು, ಶ್ರೀನಿಧಿ ಶೆಟ್ಟಿ ನಾಯಕಿ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಈಗ ಕೆ.ಜಿ.ಎಫ್ ಗೆ ಮತ್ತೋರ್ವ ನಟನ ಎಂಟ್ರಿ ಅಗಿದೆ.

ಕನ್ನಡದ ಖ್ಯಾತ ನಟ ವಸಿಷ್ಠ ಸಿಂಹ ಈಗ ಯಶ್ ಅವರ 'ಕೆ.ಜಿ.ಎಫ್' ತಂಡವನ್ನ ಸೇರಿಕೊಂಡಿದ್ದಾರೆ. ಮೈಸೂರಿನಲ್ಲಿ ನಡೆಯುತ್ತಿರುವ ಕೆ.ಜಿ.ಎಫ್ ಚಿತ್ರೀಕರಣದಲ್ಲಿ ವಸಿಷ್ಠ ಭಾಗಿಯಾಗಿದ್ದಾರೆ. ಚಿತ್ರದ ಪ್ರಮುಖ ಪಾತ್ರವೊಂದರಲ್ಲಿ ವಸಿಷ್ಠ ಅಭಿನಯಿಸುತ್ತಿದ್ದು, ಪಾತ್ರದ ಬಗ್ಗೆ ಗೌಪ್ಯವಾಗಿರಿಸಲಾಗಿದೆ.

actor Vasishta N Simha bags a pivotal role in yash KGF

ಅಂದ್ಹಾಗೆ, ನಟ ವಸಿಷ್ಠ ಮತ್ತು ಯಶ್ ಈ ಹಿಂದೆ 'ರಾಜಾಹುಲಿ' ಚಿತ್ರದಲ್ಲಿ ಒಟ್ಟಿಗೆ ಅಭಿನಯಿಸಿದ್ದರು. ಈ ಸಿನಿಮಾ ಈ ಇಬ್ಬರು ಕಲಾವಿದರಿಗೂ ದೊಡ್ಡ ಬ್ರೇಕ್ ಕೊಟ್ಟ ಚಿತ್ರ. ಅದಾದ ನಂತರ ಬೇರೆ ಯಾವ ಚಿತ್ರದಲ್ಲೂ ಇವರಿಬ್ಬರು ಒಟ್ಟಿಗೆ ಬಣ್ಣ ಹಚ್ಚಿರಲಿಲ್ಲ. ಈಗ ನಾಲ್ಕು ವರ್ಷದ ನಂತರ ಒಂದೇ ಸಿನಿಮಾದಲ್ಲಿ ಮತ್ತೆ ಎಂಟ್ರಿ ಕೊಡ್ತಿದ್ದಾರೆ.

English summary
Kannada Actor Vasishta N Simha has bagged a pivotal role in the Yash starrer KGF film. The Movie Directed by Prashanth Neel.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada