»   » ಅವಕಾಶಗಳ ಬೆನ್ನೇರಿ ಸವಾರಿ ಆರಂಭಿಸಿದ ಕ್ಯೂಟ್ ವಿಲನ್ ವಸಿಷ್ಟ

ಅವಕಾಶಗಳ ಬೆನ್ನೇರಿ ಸವಾರಿ ಆರಂಭಿಸಿದ ಕ್ಯೂಟ್ ವಿಲನ್ ವಸಿಷ್ಟ

Posted By:
Subscribe to Filmibeat Kannada

'ಸಿಂಪಲ್ ಹುಡುಗ' ರಕ್ಷಿತ್ ಶೆಟ್ಟಿ ಮತ್ತು ಎವರ್ ಗ್ರೀನ್ ನಟ ಅನಂತ್ ನಾಗ್ ಅವರ ಜುಗಲ್ ಬಂದಿಯಲ್ಲಿ ಮೂಡಿಬಂದಿದ್ದ 'ಗೋಧಿ ಬಣ್ಣ ಸಾಧಾರಣ ಮೈಕಟ್ಟು' ಚಿತ್ರದಲ್ಲಿ ಇವರಿಬ್ಬರಿಗಿಂತ ಹೆಚ್ಚು ಪಬ್ಲಿಸಿಟಿ ಗಿಟ್ಟಿಸಿಕೊಂಡ ಮೂರನೇ ವ್ಯಕ್ತಿ ಎಂದರೆ ಅದು ನಟ ವಸಿಷ್ಟ ಎನ್.ಸಿಂಹ ಅವರು.

ಈ ಚಿತ್ರದಲ್ಲಿ ನೆಗೆಟಿವ್ ಪಾತ್ರ ಮಾಡಿ ಎಲ್ಲರ ನೆಚ್ಚಿನ ನಟನಾದ ವಸಿಷ್ಟ ಅವರಿಗೆ ಇದೀಗ ಅವಕಾಶಗಳು ತಾನಾಗೇ ಬಂದು ಮನೆಯ ಕದ ತಟ್ಟುತ್ತಿವೆ. ಸುಂದರ ಮೊಗದ ಈ ನಟನ ನಟನೆಗೆ ಸಿನಿಪ್ರೀಯರು ಫಿದಾ ಆದ ಹಿನ್ನಲೆಯಲ್ಲಿ ಇದೀಗ ಸಾಕಷ್ಟು ಅಭಿಮಾನಿಗಳು ಕೂಡ ಹುಟ್ಟಿಕೊಂಡಿದ್ದಾರೆ.['ಗೋಧಿ ಬಣ್ಣ' ವಿಮರ್ಶೆ: ಅಪ್ಪ-ಮಗನ ಅ'ಸಾಧಾರಣ' ಭಾವ-ಬಂಧ]

Actor Vasishta N.Simha's next film with Actor Sri Murali

ಈ ಮುಂಚೆ 'ನನ್ ಲವ್ ಟ್ರ್ಯಾಕ್', 'ಅಲೋನ್', 'ರಾಜಾಹುಲಿ' ಮುಂತಾದ ಸಿನಿಮಾಗಳಲ್ಲಿ ಮಿಂಚಿದ್ದರೂ ಕೂಡ ವಸಿಷ್ಟ ಅವರಿಗೆ ಬ್ರೇಕ್ ಕೊಟ್ಟು ಅವರನ್ನು ಫೇಮಸ್ ಮಾಡಿದ್ದು ಮಾತ್ರ 'ಗೋಧಿ ಬಣ್ಣ ಸಾಧಾರಣ ಮೈಕಟ್ಟು' ಸಿನಿಮಾ.

'ಗೋಧಿ ಬಣ್ಣ' ಚಿತ್ರದ ಮೂಲಕ ಗಾಂಧಿನಗರದಲ್ಲಿ ಚಾಲ್ತಿಗೆ ಬಂದ ವಸಿಷ್ಟ ಅವರು ಇದೀಗ 'ರೋರಿಂಗ್ ಸ್ಟಾರ್' ಶ್ರೀಮುರಳಿ ಮತ್ತು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರು ಕಾಣಿಸಿಕೊಂಡಿರುವ ಇನ್ನೂ ಹೆಸರಿಡದ ಚಿತ್ರದಲ್ಲಿ ಪ್ರಮುಖ ಪಾತ್ರ ವಹಿಸಲಿದ್ದಾರೆ. ಈ ಚಿತ್ರಕ್ಕೆ ನರ್ತನ್ ಅವರು ನಿರ್ದೇಶನ ಮಾಡುತ್ತಿದ್ದು, ನಟಿ ಶಾನ್ವಿ ಶ್ರೀವಾಸ್ತವ ಅವರು ನಾಯಕಿಯಾಗಿ ಮಿಂಚಲಿದ್ದಾರೆ.[ಶ್ರೀಮುರಳಿ ಜೊತೆ ಗ್ಲಾಮರ್ ಬೊಂಬೆ ಶಾನ್ವಿ ಶ್ರೀವಾಸ್ತವ ಡ್ಯುಯೆಟ್]

Actor Vasishta N.Simha's next film with Actor Sri Murali

ಈ ಬಗ್ಗೆ ವಸಿಷ್ಟ ಅವರನ್ನೇ ಕೇಳೋಣ ಅಂತ ಅವರನ್ನು ಸಂಪರ್ಕ ಮಾಡಿದಾಗ ಅವರಂತಾರೆ, "ಹೌದು ನಾನು ಈ ಸಿನಿಮಾದಲ್ಲಿ ಒಂದು ಪ್ರಮುಖ ಪಾತ್ರ ವಹಿಸುತ್ತಿದ್ದೇನೆ, ಈಗಾಗಲೇ ಚಿತ್ರತಂಡದವರು ಕೂಡ ನನ್ನ ಪಾತ್ರದ ಬಗ್ಗೆ ನನ್ನ ಬಳಿ ಚರ್ಚೆ ನಡೆಸಿದ್ದಾರೆ".[ಶ್ರೀಮುರಳಿ-ಶಿವಣ್ಣ ಚಿತ್ರದ ಬಗ್ಗೆ ಸುಮ್ಮನೆ ಗಾಸಿಪ್ ಹಬ್ಬಿಸ್ಬೇಡಿ.!]

Actor Vasishta N.Simha's next film with Actor Sri Murali

"ನಾನೂ ಒಪ್ಪಿಕೊಂಡಿದ್ದೇನೆ, ಆದರೆ ಇನ್ನೂ ಶೂಟಿಂಗ್ ಸೆಟ್ ಸೇರಿಕೊಂಡಿಲ್ಲ. ಅದಕ್ಕಿಂತ ಮುಂಚೆ ನನಗೆ ಉಪೇಂದ್ರ ಅವರ 'ಉಪೇಂದ್ರ ಮತ್ತೆ ಹುಟ್ಟಿ ಬಾ ಇಂತಿ ಪ್ರೇಮ' ಮತ್ತು 'ದಯವಿಟ್ಟು ಗಮನಿಸಿ' ಚಿತ್ರದ ಶೂಟಿಂಗ್ ಮುಗಿಸಿಕೊಡಬೇಕಾಗಿದೆ. ಆನಂತರ ನರ್ತನ್ ಅವರನ್ನು ಸೇರಿಕೊಳ್ಳುತ್ತೇನೆ" ಎನ್ನುತ್ತಾರೆ.[ಕನ್ನಡಾಭಿಮಾನಿಗಳಿಗೆ ನಟ ಶ್ರೀಮುರಳಿ ಕೊಟ್ಟ 'ಬಾಂಬ್' ನ್ಯೂಸ್ ಏನು?]

Actor Vasishta N.Simha's next film with Actor Sri Murali

'ಗೋಧಿ ಬಣ್ಣ'ಕ್ಕಿಂತಲೂ ಈ ಚಿತ್ರದಲ್ಲಿ ವಿಭಿನ್ನ ಪಾತ್ರ ವಹಿಸಲಿರುವ ವಸಿಷ್ಟ ಅವರು ಹ್ಯಾಟ್ರಿಕ್ ಹೀರೋ ಶಿವಣ್ಣ ಹಾಗೂ ಶ್ರೀಮುರಳಿ ಅವರ ಜೊತೆ ನಟಿಸಲು ಅವಕಾಶ ಸಿಕ್ಕಿದ್ದಕ್ಕೆ ಫುಲ್ ಖುಷ್ ಆಗಿ ಆಕಾಶದೆತ್ತರಕ್ಕೆ ಹಾರಿದ್ದಾರೆ.

ಒಟ್ನಲ್ಲಿ ವಸಿಷ್ಟ ಅವರನ್ನು ಮತ್ತೆ-ಮತ್ತೆ ತೆರೆಯ ಮೇಲೆ ನೋಡಲು ಕಾತರರಾಗಿರುವ ಅಭಿಮಾನಿಗಳಿಗೆ ಇದು ಬಿಗ್ ನ್ಯೂಸ್ ಆಗಿದೆ. ಯಾಕೆಂದರೆ ಇವರು ಉಪೇಂದ್ರ ಅವರ ಜೊತೆ ಮಾತ್ರವಲ್ಲದೇ, ಗಣೇಶ್ ಅವರ 'ಗಂಡು ಎಂದರೆ ಗಂಡು' ಎಂಬ ಚಿತ್ರದಲ್ಲೂ ಇಂಟ್ರೆಸ್ಟಿಂಗ್ ಪಾತ್ರ ವಹಿಸಿದ್ದಾರೆ.

English summary
'Godhi Banna Sadharana Mykattu' fame Kannada Actor Vasishta N.Simha's next film with Kannada Actor Sri Murali and Kannada Actor Shiv Rajkumar. Actress Shanvi Srivastava played the heroine in this film. The movie is directed by Narthan.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada