»   » ಹೊಸ ಅವತಾರದಲ್ಲಿ ಜನರ ಮುಂದೆ ಬಂದ ನಟ ವಸಿಷ್ಠ ಸಿಂಹ

ಹೊಸ ಅವತಾರದಲ್ಲಿ ಜನರ ಮುಂದೆ ಬಂದ ನಟ ವಸಿಷ್ಠ ಸಿಂಹ

Posted By:
Subscribe to Filmibeat Kannada

'ರಾಜಹುಲಿ' ಸಿನಿಮಾದ ಮೂಲಕ ಚಿತ್ರರಂಗದ ಪ್ರೇಕ್ಷಕರ ಮನಸ್ಸು ಗೆದ್ದಿರುವ ನಟ ವಸಿಷ್ಠ ಸಿಂಹ. ನಾಯಕನ ಪಾತ್ರವನ್ನು ಬಿಟ್ಟು ವಿಭಿನ್ನ ಪಾತ್ರಗಳನ್ನ ಗಮನ ಹರಿಸುವ ಕನ್ನಡದ ನಾಯಕ.

ತಮ್ಮ ಕಂಚಿನ ಕಂಠದ ಹಾಗೂ ಅಭಿನಯದ ಮೂಲಕ ಸಕ್ಸಸ್ ಹಾದಿಯಲ್ಲಿ ಸಾಗುತ್ತಿರುವ ವಸಿಷ್ಠ ಸಿಂಹ ಮತ್ತೊಂದು ಚಾಲೆಂಜಿಂಗ್ ಪಾತ್ರವನ್ನ ಸ್ವೀಕರಿಸಿದ್ದಾರೆ. 'ನಾನಿ' ಸಿನಿಮಾ ಖ್ಯಾತಿಯ ನಿರ್ದೇಶಕ ಸುಮಂತ್ ಕ್ರಾಂತಿ ಆಕ್ಷನ್ ಕಟ್ ಹೇಳಿರುವ 'ಕಾಲಚಕ್ರ' ಸಿನಿಮಾದಲ್ಲಿ ನಟ ವಸಿಷ್ಠ ವಿಭಿನ್ನ ರೀತಿಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

'ಕಾಲಚಕ್ರ' ಚಿತ್ರದ ಫಸ್ಟ್ ಪೋಸ್ಟರ್ ಬಿಡುಗಡೆ ಆಗಿದ್ದು ಪೊಸ್ಟರ್ ನಲ್ಲಿ ವಸಿಷ್ಠ ಅವರ ಮುಖದಲ್ಲಿ ಎರಡು ಶೇಡ್ ಕಾಣಿಸುತ್ತಿದೆ. ನಿರ್ದೇಶಕ ಸುಮಂತ್ ಈ ಬಾರಿಯೂ ನೈಜಘಟನೆಯನ್ನ ಹುಡುಕಿ ತಂದಿದ್ದು ಮತ್ತೊಂದು ರೋಚಕವಾಗಿರುವ ಕಥೆಯನ್ನ ಕಾಲಚಕ್ರದ ಮೂಲಕ ಪ್ರೇಕ್ಷಕರ ಮುಂದೆ ಇಡಲಿದ್ದಾರೆ.

actor Vasishtha Simha plays a different role in the 'Kalachakra' film

ಕಾಲಚಕ್ರ ಸಿನಿಮಾದಲ್ಲಿ ವಸಿಷ್ಠ ಸಿಂಹ ನಾಯಕನಾಗಿ ಕಾಣಿಸಿಕೊಳ್ಳುತ್ತಿದ್ದು ರಕ್ಷಾ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ. ಅವಿಕಾ ರಾಥೋಡ್, ದೀಪಕ್ ಶೆಟ್ಟಿ ಹಾಗೂ ಸುಚೇಂದ್ರ ಪ್ರಸಾದ್ ಸಿನಿಮಾದ ಮುಖ್ಯಭೂಮಿಕೆಯಲ್ಲಿ ಅಭಿನಯಿಸಿದ್ದಾರೆ.

actor Vasishtha Simha plays a different role in the 'Kalachakra' film

ಸುಮಂತ್ ನಿರ್ದೇಶನ, ಗುರುಕಿರಣ್ ಸಂಗೀತ ಚಿತ್ರದಲ್ಲಿದೆ. ಕಾಲಚಕ್ರ ಸಿನಿಮಾದ ಚಿತ್ರೀಕರಣ ಕೊನೆಯ ಹಂತಕ್ಕೆ ಬಂದಿದ್ದು ಹಾಡುಗಳನ್ನ ಮಾತ್ರ ಬಾಕಿ ಉಳಿಸಿಕೊಂಡಿದೆ ಸಿನಿಮಾತಂಡ. ಮೊದಲ ಪೋಸ್ಟರ್ ನಲ್ಲೇ ಭಾರಿ ಕುತೂಹಲ ಮೂಡಿಸಿರುವ ಸಿನಿಮಾತಂಡ ಚಿತ್ರವನ್ನು ಆದಷ್ಟು ಬೇಗ ಬಿಡುಗಡೆ ಮಾಡಲು ತಯಾರಿ ಮಾಡಿಕೊಳ್ಳುತ್ತಿದ್ದಾರೆ.

English summary
Kannada actor Vasishtha Simha plays a different role in the 'Kalachakra' film. The film is directed by Sumanth Kranti, Deepak Shetty and Sukendra Prasad are in the lead roles.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada