For Quick Alerts
  ALLOW NOTIFICATIONS  
  For Daily Alerts

  'ಅರ್ಜುನ್ ರೆಡ್ಡಿ' ರಿಮೇಕ್ ನಲ್ಲಿ ನಟ ವಿಕ್ರಂ ಮಗ, ನಟಿ ಗೌತಮಿ ಮಗಳು

  By Naveen
  |

  ತೆಲುಗಿನಲ್ಲಿ ಕಮಾಲ್ ಮಾಡಿದ್ದ 'ಅರ್ಜುನ್ ರೆಡ್ಡಿ' ಸಿನಿಮಾ ಅಲ್ಲಿ ರಿಮೇಕ್ ಆಗುತ್ತೆ... ಇಲ್ಲಿ ರಿಮೇಕ್ ಆಗುತ್ತೆ... ಎನ್ನುವ ಮಾತು ಪದೇ ಪದೇ ಕೇಳಿ ಬರುತಿತ್ತು. ಆದರೆ ಈಗ ಈ ಸಿನಿಮಾ ಕಾಲಿವುಡ್ ನಲ್ಲಿ ಬರುತ್ತಿದೆ. ಮುತ್ತಿನ ಮಳೆಯನ್ನೇ ಸುರಿಸಿದ್ದ ಈ ಸಿನಿಮಾ ಮತ್ತೆ ತೆರೆ ಮೇಲೆ ಬರುವುದಕ್ಕೆ ಸಿದ್ಧವಾಗಿದೆ.

  ವಿಶೇಷ ಅಂದರೆ ಈ ಸಿನಿಮಾದಿಂದ ಈಗ ಒಬ್ಬ ನಟ ಮತ್ತು ಒಬ್ಬ ನಟಿಯ ಮಕ್ಕಳು ಚಿತ್ರರಂಗಕ್ಕೆ ಪರಿಚಯ ಆಗುತ್ತಿದ್ದಾರೆ. ತಮಿಳಿನ ಸ್ಟಾರ್ ನಟ ವಿಕ್ರಂ ಅವರ ಮಗ ಮತ್ತು ನಟಿ ಗೌತಮಿ ಅವರ ಮಗಳು ಈ ಚಿತ್ರದ ಮೂಲಕ ಚಿತ್ರರಂಗದ ಪಯಣ ಶುರು ಮಾಡಲಿದ್ದಾರೆ. ಕಾಲಿವುಡ್ ನಲ್ಲಿ ಬರುತ್ತಿರುವ 'ಅರ್ಜುನ್ ರೆಡ್ಡಿ' ಸಿನಿಮಾಗೆ ವಿಕ್ರಂ ಪುತ್ರ ಧ್ರುವಾ ಮತ್ತು ಗೌತಮಿ ಪುತ್ರಿ ಸುಬ್ಬಲಕ್ಷ್ಮಿ ಜೋಡಿಯಾಗಿದ್ದಾರೆ. ವಿಜಯ್ ದೇವರಕೊಂಡ ಪಾತ್ರದಲ್ಲಿ ಧ್ರುವಾ ಮತ್ತು ಶಾಲಿನಿ ಪಾಂಡೆ ಪಾತ್ರದಲ್ಲಿ ಸುಬ್ಬಲಕ್ಷ್ಮಿ ಕಾಣಿಸಿಕೊಳ್ಳಲಿದ್ದಾರೆ.

  ಕಿಸ್ಸಿಂಗ್ ದೃಶ್ಯಕ್ಕಾಗಿ 'ಅರ್ಜುನ್ ರೆಡ್ಡಿ' ಬಿಟ್ಟಿದ್ದ ನಟಿ ಒಂದು ತಿಂಗಳು ಕೊರಗಿದರು

  ನಟ ವಿಕ್ರಂ ವರ್ಷಗಳಿಂದ ತಮ್ಮ ಮಗನನ್ನು ಲಾಂಚ್ ಮಾಡುವ ಪ್ಲಾನ್ ನಲ್ಲಿ ಇದ್ದರು. 'ಅರ್ಜುನ್ ರೆಡ್ಡಿ' ಒಬ್ಬ ಯುವ ನಟನಿಗೆ ಸೂಟ್ ಆಗುವ ಕಥೆ ಆಗಿದ್ದು, ಅವರಿಗೆ ಸಿನಿಮಾ ತುಂಬ ಇಷ್ಟ ಆಗಿದೆ. ಸೋ, ಈ ಚಿತ್ರದಿಂದ ತಮ್ಮ ಮಗನನ್ನು ವಿಕ್ರಂ ಪರಿಚಯ ಮಾಡುತ್ತಿದ್ದಾರೆ. ಇನ್ನು ನಟಿ ಗೌತಮಿ ಕನ್ನಡದಲ್ಲಿ ರವಿಚಂದ್ರನ್ ಅವರ 'ಚೆಲುವ', 'ಚಿಕ್ಕೆಜಮಾನ್ರು' ಸಿನಿಮಾದಲ್ಲಿ ನಟಿಸಿದ್ದರು. ಅವರ ಮಗಳು ಕೂಢ ಚಿತ್ರರಂಗಕ್ಕೆ ಎಂಟ್ರಿಯಾಗುತ್ತಿದ್ದಾರೆ.

  ತಮಿಳಿನ ಈ ಸಿನಿಮಾಗೆ ಈಗಾಗಲೇ ಟೈಟಲ್ ಫಿಕ್ಸ್ ಆಗಿದೆ. ಚಿತ್ರಕ್ಕೆ 'ವರ್ಮಾ' ಎಂದು ಹೆಸರಿಡಲಾಗಿದೆ. ಖ್ಯಾತ ನಿರ್ದೇಶಕ ಬಾಲ ಈ ಚಿತ್ರವನ್ನು ಡೈರೆಕ್ಟ್ ಮಾಡುತ್ತಿದ್ದಾರೆ. ಕಳೆದ ವಾರದಿಂದ ಸಿನಿಮಾದ ಚಿತ್ರೀಕರಣ ಶುರು ಆಗಿದೆ. 'ಅರ್ಜುನ್ ರೆಡ್ಡಿ' ಯುವ ಪ್ರೇಮಿಗಳ ಮನಸು ಕದ್ದ ಸಿನಿಮಾವಾಗಿದ್ದು, ಇದರ ರಿಮೇಕ್ ಈ ಚಿತ್ರ ಕೂಡ ಯಶಸ್ಸು ಕಾಣುತ್ತಾ ಎನ್ನುವ ಕುತೂಹಲ ಇದೆ.

  English summary
  kollywood actor Vikram son Dhruva and actress Gowthami daughter Subbalakshmi make their debut from Arjun Reddy remake.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X