For Quick Alerts
  ALLOW NOTIFICATIONS  
  For Daily Alerts

  ವರ್ಷಾ ಬೆಳವಾಡಿ ಜೊತೆ ಸಪ್ತಪದಿ ತುಳಿದ ನಟ ವಿನಾಯಕ್ ಜೋಶಿ

  |

  ಕಿರುತೆರೆ ಮತ್ತು ಸಿನಿಮಾಗಳಲ್ಲಿ ನಟಿಸಿ ಪ್ರೇಕ್ಷಕರ ಮನ ಸೆಳೆದಿರುವ ನಟ ವಿನಾಯಕ್ ಜೋಶಿ ಇಂದು (ಆಗಸ್ಟ್ 28) ಶಾಸ್ತ್ರೋಕ್ತವಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ರಾಷ್ಟ್ರ ಮಟ್ಟದ ಬ್ಯಾಡ್ಮಿಂಟನ್ ಆಟಗಾರ್ತಿ ವರ್ಷ ಬೆಳವಾಡಿ ಜೊತೆ ಶುಕ್ರವಾರ ನವಜೀವನ ಆರಂಭಿಸಿದ್ದಾರೆ.

  Ayogya ಸಿನಿಮಾದ ಕ್ಲೈಮ್ಯಾಕ್ಸ್ ಸನ್ನಿವೇಶದ ತೆರೆ ಹಿಂದಿನ ದೃಶ್ಯ | Ayogya Climax Making | Filmibeat Kannada

  ಕೊರೊನಾ ವೈರಸ್ ಭೀತಿಯ ನಡುವೆಯೂ ಸಂಪ್ರದಾಯವಾಗಿ ನಡೆದ ವಿವಾಹ ಕಾರ್ಯಕ್ರಮದಲ್ಲಿ ವರ್ಷಾ ಅವರ ಜೊತೆ ವಿನಾಯಕ್ ಜೋಶಿ ಸಪ್ತಪದಿ ತುಳಿದು, ದಾಂಪತ್ಯ ಜೀವನಕ್ಕೆ ಪ್ರವೇಶ ಮಾಡಿದ್ದಾರೆ. ಮುಂದೆ ಓದಿ...

  8.45ಕ್ಕೆ ನಡೆದ ಮುಹೂರ್ತ

  8.45ಕ್ಕೆ ನಡೆದ ಮುಹೂರ್ತ

  ಬೆಂಗಳೂರಿನ ದೇವಸ್ಥಾನವೊಂದರಲ್ಲಿ 8 ಗಂಟೆಯಿಂದ ಆರಂಭವಾದ ಮದುವೆ ಶಾಸ್ತ್ರಗಳು, ಹಿಂದೂ ಆರ್ಯ ಸಮಾಜದ ಸಂಪ್ರದಾಯದಂತೆ ನಡೆದಿದೆ. 8.45 ರಿಂದ 9.45ಕ್ಕೆ ನಡೆದ ಶುಭಲಘ್ನದಲ್ಲಿ ವಿನಾಯಕ್ ಜೋಶಿ ಮಾಂಗಲ್ಯಧಾರಣೆ ಮಾಡಿದರು. 10 ಗಂಟೆ ಬಳಿಕ ಫೋಟೋಶೂಟ್ ಕಾರ್ಯಕ್ರಮ ಜರುಗಿದೆ.

  ನಟ ವಿನಾಯಕ್ ಜೋಶಿಗೆ ಕಂಕಣ ಭಾಗ್ಯ: ಬ್ಯಾಡ್ಮಿಂಟನ್ ಚಾಂಪಿಯನ್ ಜತೆ ಮದುವೆ

  ಮದುವೆ ವೀಕ್ಷಣೆಗೆ ಅವಕಾಶ

  ಮದುವೆ ವೀಕ್ಷಣೆಗೆ ಅವಕಾಶ

  ಕೊರೊನಾ ವೈರಸ್ ಭೀತಿ ಕಾರಣ ನಿರ್ದಿಷ್ಟ ಮಂದಿಗೆ ಮಾತ್ರ ವಿವಾಹ ಕಾರ್ಯಕ್ರಮದಲ್ಲಿ ಭಾಗಿಯಾಗಲು ಅವಕಾಶ ಇತ್ತು. ಎಲ್ಲ ರೀತಿಯ ಮಾರ್ಗಸೂಚಿ ಅನುಸರಿಸಿ ಮದುವೆ ಕಾರ್ಯಕ್ರಮ ನಡೆಸಲಾಗಿದೆ. ಹಾಗೆ, ಅಭಿಮಾನಿಗಳಿಗೆ ಮದುವೆ ಆಹ್ವಾನ ನೀಡದ ಕಾರಣ, ಆನ್‌ಲೈನ್ ಮೂಲಕ ವಿಕ್ಷಣೆಗೆ ಅವಕಾಶ ಮಾಡಿಕೊಟ್ಟಿದ್ದರು.

  ವರ್ಷಾ ಬೆಳವಾಡಿ ಕುರಿತು

  ವರ್ಷಾ ಬೆಳವಾಡಿ ಕುರಿತು

  ವರ್ಷಾ ಬೆಳವಾಡಿ ಮತ್ತು ವಿನಾಯಕ್ ಜೋಶಿ ಅವರಿಗೆ ಬಾಲ್ಯದ ಪರಿಚಯ. ರಾಷ್ಟ್ರ ಮಟ್ಟದ ಬ್ಯಾಡ್ಮಿಂಟನ್ ಆಟಗಾರ್ತಿಯಾಗಿರುವ ವರ್ಷಾ, ಕಳೆದ ವರ್ಷ 120ನೇ ಸ್ಥಾನದಲ್ಲಿದ್ದರು. ಪ್ರಸ್ತುತ ಬ್ಯಾಡ್ಮಿಂಟನ್ ಅಕಾಡೆಮಿಯಲ್ಲಿ ಕೋಚ್‌ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ತಮಿಳು ಸಿನಿಮಾ ಒಂದರಲ್ಲಿ ವರ್ಷಾ ನಟಿಸಿದ್ದಾರೆ.

  ಅಪರೂಪದ ಲವ್ ಸ್ಟೋರಿ ಇದು

  ಅಪರೂಪದ ಲವ್ ಸ್ಟೋರಿ ಇದು

  ವಿನಾಯಕ್ ಜೋಶಿ ಅವರಿಗೆ ಏಳು ವರ್ಷ ವಿದ್ದಾಗ ವರ್ಷಾ ಬೆಳವಾಡಿ ಜೊತೆ ಡ್ಯಾನ್ಸ್ ಮಾಡಿದ್ದರಂತೆ. ತದನಂತರ ಇಬ್ಬರೂ ಮತ್ತೆ ಭೇಟಿಯಾಗಲೇ ಇಲ್ಲ. ಆದರೆ, 25 ವರ್ಷದ ಬಳಿಕ ಕಾಮನ್ ಫ್ರೆಂಡ್ ಒಬ್ಬರ ಮೂಲಕ ಅಚಾನಕ್ ಆಗಿ ಭೇಟಿ ಮಾಡಿದರು. ಮತ್ತೆ ಅಲ್ಲಿಂದ ಸ್ನೇಹ ಮುಂದುವರಿಯಿತು. ಈ ಸ್ನೇಹ ಪ್ರೀತಿಯಾಗಿ, ಬಳಿಕ ಮದುವೆ ರೂಪ ಪಡೆದಿದೆ.

  English summary
  Actor Vinayak Joshi got maaried with Varsha Balewadi today.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X