For Quick Alerts
  ALLOW NOTIFICATIONS  
  For Daily Alerts

  ವಿಷ್ಣು 9ನೇ ಪುಣ್ಯ ಸ್ಮರಣೆ : ದಾದಾರನ್ನು ನೆನೆದ ದರ್ಶನ್

  |

  ನಟ, ಸಾಹಸ ಸಿಂಹ ವಿಷ್ಣುವರ್ಧನ್ ಅಗಲಿ ಇಂದಿಗೆ 9 ವರ್ಷಗಳು ಕಳೆದಿವೆ. ಅವರ ಪುಣ್ಯ ಸ್ಮರಣೆಯ ಈ ದಿನ ಅಭಿಮಾನಿಗಳು ಪ್ರೀತಿಯ ನಟನನ್ನು ನೆನೆದಿದ್ದಾರೆ.

  ಅಭಿಮಾನ್ ಸ್ಟೂಡಿಯೋದಲ್ಲಿರುವ ವಿಷ್ಣುವರ್ಧನ್ ಅವರ ಪುಣ್ಯ ಭೂಮಿಗೆ ನೂರಾರೂ ಅಭಿಮಾನಿಗಳು ಆಗಮಿಸಿ ವಿಷ್ಣು ಸಮಾಧಿಗೆ ಪೂಜೆ ಸಲ್ಲಿಸಿದ್ದಾರೆ. ಪ್ರತಿವರ್ಷ ವಿಷ್ಣು ಹುಟ್ಟುಹಬ್ಬದ ದಿನ ಮತ್ತು ನಿಧನರಾದ ದಿನದಂದು ಅಭಿಮಾನಿಗಳು ಇಲ್ಲಿಗೆ ಬಂದು ಪೂಜೆ ಸಲ್ಲಿಸುತ್ತಾರೆ.

  ವಿಷ್ಣು ಸಿಂಪಲ್ ಬದುಕಿನ ಬಗ್ಗೆ ಇಂಟ್ರೆಸ್ಟಿಂಗ್ ವಿಚಾರ ಇಲ್ಲಿದೆ!

  ಈ ವರ್ಷ ಕೂಡ ಅಭಿಮಾನಿಗಳ ಪೂಜಾ ಕಾರ್ಯಗಳು ನಡೆಯುತ್ತಿದೆ. ಅನ್ನದಾನ ಹಾಗೂ ರಕ್ತದಾನದ ರೀತಿಯ ಮಹತ್ವ ಕೆಲಸವನ್ನು ಕೂಡ ಮಾಡಲಾಗುತ್ತಿದೆ.

  'ನಾಗರಹಾವು' ಚಿತ್ರದ ಈ ಪುಟ್ಟ ರಾಮಾಚಾರಿ ಯಾರು ಗೊತ್ತಾ?

  ಇನ್ನು ನಟ ದರ್ಶನ್ ಸಹ ಈ ದಿನ ವಿಷ್ಣು ಅವರನ್ನು ನೆನೆದಿದ್ದಾರೆ. ''ಇಂದು ಅಭಿನಯ ಭಾರ್ಗವ ಸಾಹಸ ಸಿಂಹ ಡಾ|| ವಿಷ್ಣುವರ್ಧನ್ ರವರ 9ನೇ ಪುಣ್ಯತಿಥಿ. ತಮ್ಮ ಹೃದಯವಂತಿಕೆ ಹಾಗೂ ಕಲಾಸೇವೆಯಿಂದ ಕೋಟ್ಯಾಂತರ ಕನ್ನಡಿಗರ ಮನಸ್ಸಲ್ಲಿ ಅಜರಾಮರವಾಗಿ ನೆಲೆಸಿರುವ ವಿಷ್ಣು ಸರ್ ಗೆ ಭಾವಪೂರ್ಣ ನಮನಗಳು.'' ಎಂದು ಟ್ವೀಟ್ ಮಾಡಿದ್ದಾರೆ.

  English summary
  Kannada actor Vishnuvardhan's 9th death anniversary.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X