For Quick Alerts
  ALLOW NOTIFICATIONS  
  For Daily Alerts

  ಇನ್ಮುಂದೆ ಯಶ್ ಗೆ ಏನಾದ್ರೂ ಹೇಳ್ಬೊದು-ಕೇಳ್ಬೊದು, ಹೀಗಂತ ನಾವ್ ಹೇಳ್ತಿಲ್ಲ

  By Suneetha
  |

  ಕನ್ನಡ ಚಿತ್ರರಂಗದಲ್ಲಿ ಕ್ಯೂಟ್ ಕಪಲ್ ಅಂತಾನೇ ಖ್ಯಾತಿ ಗಳಿಸಿದ್ದ ರಾಕಿಂಗ್ ಸ್ಟಾರ್ ಯಶ್ ಮತ್ತು ರಾಧಿಕಾ ಪಂಡಿತ್ ಅವರು, ನಿನ್ನೆ (ಆಗಸ್ಟ್ 12) ವರಮಹಾಲಕ್ಷ್ಮಿ ಹಬ್ಬದ ದಿನ ಗೋವಾದ ತಾಜ್ ವಿವಾಂತ್ ಹೊಟೇಲ್ ನಲ್ಲಿ ನಿಶ್ಚಿತಾರ್ಥ ಮಾಡಿಕೊಳ್ಳುವ ಮೂಲಕ ರಿಯಲ್ ಲೈಫ್ ನಲ್ಲೂ ಜೊತೆ-ಜೊತೆಯಾಗಿ ಹೆಜ್ಜೆ ಹಾಕಲು ನಿರ್ಧರಿಸಿದ್ದಾರೆ.

  'ನಂದಗೋಕುಲ' ಧಾರಾವಾಹಿ ಮೂಲಕ ಪರದೆಯ ಮೇಲೆ ಜೊತೆ-ಜೊತೆಯಾಗಿ ಮಿಂಚಲು ಆರಂಭಿಸಿದ ಈ ಜೋಡಿ. ಮೊದಲು ಪರಿಚಯ ಆಗಿ, ನಂತರ ಸ್ನೇಹಿತರಾಗಿ, ತದನಂತರ ಆ ಸ್ನೇಹ, ಪ್ರೀತಿಗೆ ತಿರುಗಿ, ಪ್ರೇಮಿಗಳಾಗಿ, ಕೊನೆಗೂ ನಿಶ್ಚಿತಾರ್ಥ ಮಾಡಿಕೊಳ್ಳುವ ಮೂಲಕ ತಮ್ಮಿಬ್ಬರ ದಶಕದ ಬಂಧನಕ್ಕೆ ಭದ್ರ ಬುನಾದಿ ಹಾಕಿದ್ದಾರೆ.[ನಿಶ್ಚಿತಾರ್ಥದ ವಜ್ರದುಂಗುರಕ್ಕೆ ಯಶ್ ಫೆವಿಕಾಲ್]

  ಈ ಸುಂದರ ಜೋಡಿಯ ನಿಶ್ಚಿತಾರ್ಥಕ್ಕೆ ಕುಟುಂಬಸ್ಥರು ಹಾಗೂ ಸ್ಯಾಂಡಲ್ ವುಡ್ ನ ದಿಗ್ಗಜರು ಆಗಮಿಸಿ, ಶುಭ ಹಾರೈಸಿದ್ದಾರೆ.[ಚಿತ್ರಪಟ: ಎಂಗೇಜ್ ಆದ ಮಿ.ಅಂಡ್.ಮಿಸಸ್ ರಾಮಾಚಾರಿ]

  ಇವರೆಲ್ಲರ ಆಶೀರ್ವಾದ ಹಾಗೂ ಶುಭ ಹಾರೈಕೆಗಳಿಗೆ, ಇದೀಗ ನವ ಜೋಡಿಗಳಾದ ರಾಕಿಂಗ್ ಸ್ಟಾರ್ ಯಶ್ ಮತ್ತು ಸ್ಯಾಂಡಲ್ ವುಡ್ ಪ್ರಿನ್ಸಸ್ ರಾಧಿಕಾ ಪಂಡಿತ್ ಅವರು ತಮ್ಮ ಟ್ವಿಟ್ಟರ್ ಮತ್ತು ಫೇಸ್ ಬುಕ್ಕಿನಲ್ಲಿ ಎಲ್ಲರಿಗೂ ಧನ್ಯವಾದ ತಿಳಿಸಿ, ನಮ್ಮಿಬ್ಬರನ್ನು ಹರಸಿ ಎಂದು ಕೇಳಿಕೊಂಡಿದ್ದಾರೆ. ಮುಂದೆ ಓದಿ...

  ಯಶ್ ಸಂದೇಶ

  ಯಶ್ ಸಂದೇಶ

  "ಇನ್ಮುಂದೆ ನೀವ್ ಕೇಳ್ಬೊದು.....ನಾವ್ ಹೇಳ್ಬೊದು, ಪ್ರೀತ್ಸಿ, ಹರಸಿ ಆಶೀರ್ವಾದ ಮಾಡಿ..." ಅಂತ ಎಂಗೇಜ್ ಆದ ರಿಂಗ್ ತೋರಿಸಿರುವ ಫೋಟೋ ಒಂದನ್ನು ಹಾಕಿ, ಇಷ್ಟು ದಿನ ಪ್ರಶ್ನೆ ಕೇಳಿ ತಲೆ ತಿನ್ನುತ್ತಿದ್ದ ಎಲ್ಲರಿಗೂ ಟಾಂಗ್ ಕೊಟ್ಟು ಸಾಮಾಜಿಕ ಜಾಲತಾಣದಲ್ಲಿ ಯಶ್ ಅವರು ವಿಭಿನ್ನವಾಗಿ ಸಂದೇಶ ಕಳುಹಿಸಿದ್ದಾರೆ.[ಟ್ವೀಟ್ಸ್ : ಯಶ್ -ರಾಧಿಕಾ ರಾಕಿಂಗ್ ಜೋಡಿ ನೂರ್ಕಾಲ ಬಾಳಿ]

  ರಾಧಿಕಾ ಏನಂತಾರೆ.?

  ರಾಧಿಕಾ ಏನಂತಾರೆ.?

  ನಟಿ ರಾಧಿಕಾ ಅವರು "ನನ್ನ ಹೀರೋನನ್ನ ಪರಿಚಯ ಮಾಡುತ್ತಿದ್ದೇನೆ...ನನ್ನ ನಿಶ್ಚಿತ ವರ..ನಿಮ್ಮೆಲ್ಲರ ಪ್ರೀತಿ ಮತ್ತು ಆಶೀರ್ವಾದಕ್ಕೆ ಎಲ್ಲರಿಗೂ ಧನ್ಯವಾದ..." ಎಂದು ಅದೇ ಫೋಟೋವನ್ನು ಹಾಕಿ ಫೇಸ್ ಬುಕ್-ಟ್ವಿಟ್ಟರ್ ನಲ್ಲಿ ಬರೆದುಕೊಂಡಿದ್ದಾರೆ.

  ಕಣ್ಣಾಮುಚ್ಚಾಲೆ ಆಟಕ್ಕೆ ತೆರೆ ಬಿತ್ತು

  ಕಣ್ಣಾಮುಚ್ಚಾಲೆ ಆಟಕ್ಕೆ ತೆರೆ ಬಿತ್ತು

  ಅಂತೂ-ಇಂತೂ ಕಣ್ಣಾಮುಚ್ಚಾಲೆ ಆಟಕ್ಕೆ ಇದೀಗ ತೆರೆ ಬಿದ್ದಿದ್ದು, ಅಭಿಮಾನಿಗಳು ಸೇರಿದಂತೆ, ಎಲ್ಲರ ಪ್ರಶ್ನೆಗೆ, ಯಶ್-ರಾಧಿಕಾ ಪಂಡಿತ್ ಅವರ ನಿಶ್ಚಿತಾರ್ಥದ ಮೂಲಕ ಉತ್ತರ ದೊರೆತಿದೆ.

  ಯಶ್-ರಾಧಿಕಾ

  ಯಶ್-ರಾಧಿಕಾ

  ನಿನ್ನೆ ನಿಶ್ಚಿತಾರ್ಥದ ಸಂದರ್ಭದಲ್ಲಿ ಹಿರಿಯರಾದ ರೆಬೆಲ್ ಸ್ಟಾರ್ ಅಂಬರೀಶ್ ದಂಪತಿಗಳ ಆಶೀರ್ವಾದ ಪಡೆದುಕೊಂಡ ಯಶ್-ರಾಧಿಕಾ ಅವರ ವಿಡಿಯೋ ಇಲ್ಲಿದೆ ನೋಡಿ...

  English summary
  Kannada Actor Yash and Kannada Actress Radhika Pandit thanks his fans for Engagement wishes. Actor Yash got engaged with Actress Radhika Pandit. A grand ceremony held at vivanta by taj holiday village Goa. After 5 long years of Dating, Kannada Actor Yash and Kannada Actress Radhika Pandit are finally getting engaged Yesterday (August 12th, 2016).

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X