For Quick Alerts
  ALLOW NOTIFICATIONS  
  For Daily Alerts

  ಕೆಜಿಎಫ್ ಚಿತ್ರಕ್ಕಾಗಿ ಅಣ್ಣಾವ್ರನ್ನು ಅನುಸರಿಸಿದ ರಾಕಿಂಗ್ ಸ್ಟಾರ್ ಯಶ್?

  |

  ಭಾರತೀಯ ಚಿತ್ರರಂಗದ ನಿರೀಕ್ಷಿತ ಕೆಜಿಎಫ್ ಚಾಪ್ಟರ್ 2 ಸಿನಿಮಾದ ನಿರ್ಮಾಣ ಕಾರ್ಯಗಳು ಕಳೆದ ಎರಡು ವರ್ಷದಿಂದ ನಡೆಯುತ್ತಿವೆ. ಕೆಜಿಎಫ್ ಪ್ರಾಜೆಕ್ಟ್‌ನಲ್ಲಿ ಕೆಲಸ ಮಾಡಿದ ಕಲಾವಿದ ತಂತ್ರಜ್ಞರು ತಮ್ಮ ಕಾರ್ಯಗಳನ್ನು ಮುಗಿಸಿ ಬೇರೆ ಬೇರೆ ಸಿನಿಮಾ ಕಾರ್ಯಗಳಲ್ಲಿ ತೊಡಗಿಕೊಂಡಿದ್ದಾರೆ. ಆದರೆ ರಾಕಿ ಭಾಯ್ ಮಾತ್ರ ಕೆಜಿಎಫ್​​​ ಸರಹದ್ದಿನಲ್ಲೇ ಇದ್ದಾರೆ.

  ಸದ್ಯ, ಯಶ್ ಕೆಜಿಎಫ್ ಚಾಪ್ಟರ್ ಸಿನಿಮಾದ ಡಬ್ಬಿಂಗ್ ಆರಂಭಿಸಿದ್ದಾರೆ. ಡಬ್ಬಿಂಗ್‌ನಲ್ಲಿ ತೊಡಗಿಕೊಂಡಿರುವ ಫೋಟೋಗಳನ್ನು ಇತ್ತೀಚಿಗಷ್ಟೆ ವೈರಲ್ ಆಗಿದ್ದವು. ನಿರ್ದೇಶಕ ಪ್ರಶಾಂತ್ ನೀಲ್ ಮತ್ತು ಯಶ್ ಡಬ್ಬಿಂಗ್ ಸ್ಟುಡಿಯೋದಲ್ಲಿ ಮಗ್ನರಾಗಿರುವುದು ಕಂಡು ಬಂದಿತ್ತು.

  'KGF-2' ಡಬ್ಬಿಂಗ್ ನಲ್ಲಿ ಯಶ್; ಫೋಟೋ ಶೇರ್ ಮಾಡಿ ಪ್ರಶಾಂತ್ ನೀಲ್ ಹೇಳಿದ್ದೇನು?'KGF-2' ಡಬ್ಬಿಂಗ್ ನಲ್ಲಿ ಯಶ್; ಫೋಟೋ ಶೇರ್ ಮಾಡಿ ಪ್ರಶಾಂತ್ ನೀಲ್ ಹೇಳಿದ್ದೇನು?

  ಕೆಜಿಎಫ್​ ಚಾಪ್ಟರ್ 2 ಚಿತ್ರದ ಡಬ್ಬಿಂಗ್ ಕಾರ್ಯ ಬೆಂಗಳೂರಿನ ಆಕಾಶ್ ಸ್ಟುಡಿಯೋದಲ್ಲಿ ನಡೆಯುತ್ತಿದೆ. ಬಹುತೇಕ ಕಲಾವಿದರು ತಮ್ಮ ಪಾತ್ರಗಳಿಗೆ ಮಾತುಗಳ ಜೋಡಣ ಕಾರ್ಯ ಮುಗಿಸಿದ್ದಾರೆ. ಯಶ್ ನಿರ್ವಹಿಸಿರುವ ರಾಕಿ ಭಾಯ್ ಪಾತ್ರದ ಧ್ವನಿ ಜೋಡಣ ಕಾರ್ಯ ಮಾತ್ರ ಬಾಕಿ ಇತ್ತು. ಈ ಆ ಕಾರ್ಯ ಪ್ರಶಾಂತ್ ನೀಲ್ ಸಾರಥ್ಯದಲ್ಲಿ ಈಗ ಪ್ರಗತಿಯಲ್ಲಿದೆ.

  ಯಶ್ ಡಬ್ಬಿಂಗ್ ವಿಧಾನದಲ್ಲಿ ಡಾ ರಾಜ್ ಕುಮಾರ್ ಅವರನ್ನು ಅನುಸರಿಸುತ್ತಿದ್ದಾರೆ ಎಂಬ ಅಂಶ ಗಮನ ಸೆಳೆಯುತ್ತಿದೆ. ಹೌದು, ರಾಕಿ ಭಾಯ್ ಪಾತ್ರಕ್ಕಾಗಿ ಡಬ್ಬಿಂಗ್ ಆರಂಭಿಸಿರುವ ಯಶ್ ಸಮಯದ ವಿಚಾರದಲ್ಲಿ ಡಾ ರಾಜ್ ಅವರನ್ನು ಫಾಲೋ ಮಾಡ್ತಿದ್ದಾರೆ.

  ನಟ ಯಶ್ ಬೆಳ್ಳಂ ಬೆಳಗ್ಗೆಯೇ ಸ್ಟುಡಿಯೋಗೆ ಹಾಜರಾಗುತ್ತಿದ್ದಾರೆ. ಬೆಳಗ್ಗೆ 6 ಗಂಟೆಯಿಂದ ಬೆಳಗ್ಗೆ 9 ಗಂಟೆಯ ತನಕ ಮಾತ್ರ ಯಶ್ ತನ್ನ ಪಾತ್ರಕ್ಕೆ ಧ್ವನಿ ನೀಡ್ತಿದ್ದಾರೆ. ಅದಕ್ಕೆ ಕಾರಣ ಫ್ರೆಶ್ ವಾಯ್ಸ್.

  ಬೆಳಗಿನ ವಾತಾವರಣದಲ್ಲಿ ಧ್ವನಿ ಅದ್ಭುತವಾಗಿ ಹೊರಬರುತ್ತೆ. ಬೇಸ್ ವಾಯ್ಸ್​​​​ಗಳನ್ನು ಕ್ರಿಯೆಟ್ ಮಾಡೋದಕ್ಕೂ ಬೆಳಗಿನ ಕಾಲ ಉತ್ತವಾದದು. ಈ ಕಾರಣಕ್ಕೆ ಯಶ್ ಬೆಳಗ್ಗಿನ ಜಾವ ಮಾತ್ರ ಪಾತ್ರಕ್ಕೆ ಡಬ್ಬಿಂಗ್​​ ಮಾಡ್ತಿದ್ದಾರಂತೆ.

  ಗಾನ ಗಂಧರ್ವ ಡಾ.ರಾಜ್ ಕುಮಾರ್ ಕೂಡ ಬೆಳಗಿನ ಜಾವವೇ ಹಾಡುಗಳ ರೆರ್ಕಾಡಿಂಗ್ ಹೆಚ್ಚಾಗಿ ಮಾಡ್ತಿದ್ರಂತೆ. ಹಾಗಾಗಿ, ಅಣ್ಣಾವ್ರ ಧ್ವನಿ ಈಗಲೂ ಕನ್ನಡಿಗರ ಕಿವಿ ಮತ್ತು ಮನಸ್ಸಿನಲ್ಲಿ ಉಳಿದುಕೊಂಡಿದೆ.

  Prashanth Neel shares Photo with yash in KGF 2 dubbing.

  ಪ್ರಶಾಂತ್ ನೀಲ್ ನಿರ್ದೇಶನದ ಕೆಜಿಎಫ್ ಚಾಪ್ಟರ್ 2 ಸಿನಿಮಾದಲ್ಲಿ ಭರ್ಜರಿ ಡೈಲಾಗ್‌ಗಳಿವೆ ಎಂದು ಹೇಳಲಾಗುತ್ತಿದೆ. ಹೊಂಬಾಳೆ ಫಿಲಂಸ್ ಬ್ಯಾನರ್‌ನಲ್ಲಿ ನಿರ್ಮಾಣವಾಗಿರುವ ಈ ಚಿತ್ರದಲ್ಲಿ ಶ್ರೀನಿಧಿ ಶೆಟ್ಟಿ, ಸಂಜಯ್ ದತ್, ರವೀನಾ ಟಂಡನ್, ಪ್ರಕಾಶ್ ರೈ ಸೇರಿದಂತೆ ಹಲವರು ನಟಿಸಿದ್ದಾರೆ. ಜುಲೈ 16 ರಂದು ಕೆಜಿಎಫ್ ಬಹುಭಾಷೆಯಲ್ಲಿ ಬಿಡುಗಡೆಯಾಗುತ್ತಿದೆ.

  English summary
  Rocking star Yash Followes Dr Rajkumar In Dubbing Method.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X