For Quick Alerts
  ALLOW NOTIFICATIONS  
  For Daily Alerts

  ಸಾವಿರ ಕೋಟಿ ಆಫರ್‌ ಕೈ ಬಿಟ್ಟಿದ್ದೇಕೆ ನಟ ಯಶ್!

  |

  ಕನ್ನಡದ ನಟ ಯಶ್ ಈಗ ಕನ್ನಡ ಸಿನಿಮಾಕ್ಕೆ ಮಾತ್ರ ಸೀಮಿತವಾಗಿಲ್ಲ. ಎಲ್ಲ ಅಡೆತಡೆಗಳನ್ನು ಮೀರಿ ವಿಶ್ವ ಮಟ್ಟದಲ್ಲಿ ಯಶ್ ಬೆಳೆದು ನಿಂತಿದ್ದಾರೆ. ಯಶ್‌ಗೆ ವಿಶ್ವಮಟ್ಟದಲ್ಲಿ ಬೇಡಿಕೆ ಇದೆ ಅನ್ನೋದು ಕೂಡ ಅಷ್ಟೇ ಸತ್ಯ. ಕೆಜಿಎಫ್ ಅನ್ನೋ ಒಂದು ಸಿನಿಮಾ ಯಶ್ ನಸೀಬನ್ನು ಬದಲಾಯಿಸಿದೆ. ಕೆಜಿಎಫ್ ಯಶ್‌ರನ್ನು ಸೂಪರ್‌ ಸ್ಟಾರ್‌ ಆಗಿ ಮಿಂಚುವಂತೆ ಮಾಡಿದೆ. ಹೀಗಿರೋ ಯಶ್ ಈಗ ಏನ್‌ ಮಾಡ್ತಿದ್ದಾರೆ? ಅವರನ್ನು ಎಂಥಹ ಸಿನಿಮಾಗಳು ಅರಸಿ ಬರ್ತಿವೆ ಅನ್ನೋದನ್ನ ತಿಳದುಕೊಳ್ಳುವ ಕುತೂಹಲ ಪ್ರತಿಯೊಬ್ಬರಿಗೂ ಇದೆ.

  ಸಿನಿಮಾ ಕ್ವಾಲಿಟಿ, ಮೇಕಿಂಗ್ ಮತ್ತು ಪ್ಯಾನ್ ಇಂಡಿಯಾ ವಿಚಾರಗಳಿಂದಾಗಿ ಇತ್ತೀಚೆಗೆ ಕನ್ನಡ ಸಿನಿಮಾಗಳ ಬಜೆಟ್ ಹೆಚ್ಚಾಗಿದೆ. ಅದು 100 ಕೋಟಿಯ ಮುಟ್ಟಿದೆ. ಅಂಥದ್ರಲ್ಲಿ ಯಶ್‌ ಸಾವಿರ ಕೋಟಿ ಪ್ರಾಜೆಕ್ಟ್‌ ಮಾಡ್ತಾ ಅಂದ್ರೆ ಅದು ಸಾಮಾನ್ಯ ವಿಷ್ಯ ಅಲ್ಲ. ಹೌದು ನಟ ಯಶ್‌ಗೆ ಬಾಲಿವುಡ್‌ನಿಂದ ಬುಲಾವ್ ಬಂದಿತ್ತು.ಈ ಕುತೂಹಲದ ಬಗ್ಗೆ ವಿಶೇಷ ಸುದ್ದಿ ಇಲ್ಲಿದೆ. ಮುಂದೆ ಓದಿ.

  ಸಾವಿರ ಕೋಟಿ ಸರದಾರ ಕನ್ನಡದ ನಟ ಯಶ್!

  ಸಾವಿರ ಕೋಟಿ ಸರದಾರ ಕನ್ನಡದ ನಟ ಯಶ್!

  ಬಾಲಿವುಡ್‌ನ ಹೆಸರಾಂತ ನಿರ್ಮಾಣ ಸಂಸ್ಥೆಯೊಂದು ಯಶ್‌ಗಾಗಿ ನೂರಾರು ಕೋಟಿ ಖರ್ಚು ಮಾಡಲು ಸಿದ್ದವಾಗಿತ್ತು. ಯಶ್‌ಗೆ ಬರೊಬ್ಬರಿ 700 ಕೋಟಿ ಆಫರ್ ಯಶ್ ಮುಂದೆ ಇಟ್ಟಿತ್ತು ಬಾಲಿವುಡ್‌ನ ಆ ನಿರ್ಮಾಣ ಸಂಸ್ಥೆ. 5 ವರ್ಷ ಯಶ್ ಅದೆ ನಿರ್ಮಾಣ ಸಂಸ್ಥೆಯಲ್ಲಿ 5 ಸಿನಿಮಾಗಳನ್ನು ಮಾಡೋ ನಿಯಮವಿತ್ತು. ಆದ್ರೆ ಯಶ್ ಇದಕ್ಕೆ ಇಟ್ಟ ಬೇಡಿಕೆ ಒಂದು ಸಾವಿರ ಕೋಟಿಯಂತೆ. ಸಾವಿರ ಕೋಟಿಗೆ ಒಪ್ಪಂದ ಆಗದ ಹಿನ್ನೆಲೆ ಯಶ್ 700 ಕೋಟಿಯನ್ನು ಬಿಟ್ಟು ಬಂದಿದ್ದಾರೆ.

  ಯಶ್‌ ಮೇಲೆ ಬಾಲಿವುಡ್ ಕಣ್ಣು!

  ಯಶ್‌ ಮೇಲೆ ಬಾಲಿವುಡ್ ಕಣ್ಣು!

  ಕೆಜಿಎಫ್ ಚಿತ್ರದ ಬಳಿಕ ನಟ ಯಶ್ ದಕ್ಷಿಣ ಭಾರತದ ಜೊತೆಗೆ ಉತ್ತರ ಭಾರತದಲ್ಲೂ ಹೆಸರು ಮಾಡಿದ್ದಾರೆ. ಉತ್ತರ ಭಾರತದಲ್ಲೂ ಯಶ್ ಪ್ರಭಾವ ಹೆಚ್ಚಾಗಿ ಇದೆ. ಯಶ್‌ಗೆ ಹೆಚ್ಚಿನ ಸಂಖ್ಯೆಯಲ್ಲಿ ಅಭಿಮಾನಿಗಳು ಇದ್ದಾರೆ. ಯಶ್ ಮುಂಬೈಗೆ ಭೇಟಿ ಕೊಟ್ಟರೆ ಅಲ್ಲಿನ ಅಭಿಮಾನಿಗಳು ಯಶ್‌ ಅವರನ್ನು ನೋಡಲು ಮುಗಿ ಬೀಳುತ್ತಾರೆ. ಸದ್ಯ ಯಶ್‌ ಮೇಲೆ ಬಾಲಿವುಡ್ ಕಣ್ಣು ಬಿದ್ದಿದೆ. ತೆಲುಗು, ತಮಿಳು ಸೇರಿದಂತೆ ಬಾಲಿವುಡ್‌ನಲ್ಲಿ ಯಶ್‌ಗೆ ಎಲ್ಲಿಲ್ಲದ ಬೇಡಿಕೆ ಇದೆ. ಆದ್ರೆ ಯಶ್‌ ಮಾತ್ರ ಯಾವುದೇ ಸುಳಿವು ಬಿಟ್ಟು ಕೊಡದೆ ಸೈಲೆಂಟಾಗಿ ಸಿನಿಮಾಗಳನ್ನು ಅಳೆದು ತೂಗಿ ಆಯ್ಕೆ ಮಾಡಿ ಕೊಳ್ಳುತ್ತಿದ್ದಾರೆ.

  ಎಲ್ಲರ ಚಿತ್ತ ಕೆಜಿಎಫ್2 ನತ್ತ!

  ಎಲ್ಲರ ಚಿತ್ತ ಕೆಜಿಎಫ್2 ನತ್ತ!

  ಯಶ್‌ ಈಗ ಕೆಜಿಎಫ್ ಸಿನಿಮಾದ ರಿಲೀಸ್‌ಗಾಗಿ ಕಾಯ್ತಿದ್ದಾರೆ. ಮುಂದಿನ ವರ್ಷ ಏಪ್ರಿಲ್ 14ಕ್ಕೆ ಕೆಜಿಎಫ್2 ಚಿತ್ರ ರಿಲೀಸ್‌ ಆಗಲಿದೆ. ಕೆಜಿಎಫ್ 2 ಚಿತ್ರಕ್ಕಾಗಿ ಯಶ್ ಅಭಿಮಾನಿ ಬಳಗ, ಸಿನಿಮಾ ಪ್ರೇಕ್ಷಕ ವರ್ಗ ಸೇರಿದಂತೆ ಚಿತ್ರರಂಗವೂ ಎದುರು ನೋಡ್ತಾ ಇದೆ. ಕೆಜಿಎಫ್ ಮೊದಲ ಭಾಗ ಮಾಡಿರೊ ಯಶಸ್ಸು ಭಾಗ ಎರಡರ ಮೇಲೆ ದುಪ್ಪಟ್ಟು ನಿರೀಕ್ಷೆ ಹುಟ್ಟುವಂತೆ ಮಾಡಿದೆ. ಈ ಚಿತ್ರದಲ್ಲೂ ಕೆಜಿಎಫ್ ಭಾಗ ಒಂದರ ಇಡೀ ಟೀಂ ಇದೆ.

   ಬಂಗಾರದ ಗಣಿ ಕಥೆಗೆ ಸಿಗುವ ಅಂತ್ಯ

  ಬಂಗಾರದ ಗಣಿ ಕಥೆಗೆ ಸಿಗುವ ಅಂತ್ಯ

  ಇನ್ನೂ ಪ್ರಶಾಂತ್ ನೀಲ್‌ ನಿರ್ದೇಶನದ ಮೇಲೆ ಹೆಚ್ಚಿನ ನಿರೀಕ್ಷೆ ಇದೆ. ಈ ಬಂಗಾರದ ಗಣಿ ಕಥೆಗೆ ಸಿಗುವ ಅಂತ್ಯ ಹೇಗಿರತ್ತೆ ಅನ್ನೋದನ್ನ ನೋಡಲು ಸಿನಿಪ್ರಿಯರು ಕಾತರರಾಗಿದ್ದಾರೆ. ಇನ್ನೂ ಯಶ್‌ಗೆ ಪರ ಭಾಷೆಯಿಂದ ಸಾಕಷ್ಟು ಬೇಡಿಕೆ ಇದೆ. ಹಾಗಾಗಿ ಯಶ್ ಮುಂದಿನ ಆಯ್ಕೆ ಹೇಗಿರುತ್ತದೆ ಅನ್ನೊ ಬಗ್ಗೆ ಸಹಜವಾಗಿಯೇ ಕುತೂಹಲ ಮನೆ ಮಾಡಿದೆ.

  English summary
  Know why Actor Yash has rejected rs 1000cr offer from Bollywood!

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X