ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಮಗ ಮನೋರಂಜನ್ ಅಭಿನಯದ ಎರಡನೇ ಸಿನಿಮಾ 'ಬೃಹಸ್ಪತಿ' ಇದೇ ವಾರ ರಾಜ್ಯಾದ್ಯಂತ ತೆರೆಕಾಣುತ್ತಿದೆ. ಚಿತ್ರದ ಟ್ರೈಲರ್ ಮತ್ತು ಹಾಡುಗಳಿಗೆ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದ್ದು, ಚಿತ್ರದ ಬಗ್ಗೆ ನಿರೀಕ್ಷೆ ಹೆಚ್ಚಿದೆ.
ಇದೀಗ, ರಾಕಿಂಗ್ ಸ್ಟಾರ್ ಯಶ್ 'ಬೃಹಸ್ಪತಿ' ಚಿತ್ರಕ್ಕೆ ಶುಭಕೋರಿದ್ದಾರೆ. ಚಿತ್ರದ ಹಾಡು ಹಾಗೂ ಟ್ರೈಲರ್ ವೀಕ್ಷಿಸಿದ ಮಾಸ್ಟರ್ ಪೀಸ್, ವಿ.ಹರಿಕೃಷ್ಣ ಮ್ಯೂಸಿಕ್ ಗೆ ಫಿದಾ ಆಗಿದ್ದಾರೆ. ಜೊತೆಗೆ ಮನೋರಂಜನ್ ಅಭಿನಯದ ಬಗ್ಗೆಯೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಕ್ರೇಜಿಪುತ್ರನ 'ಬೃಹಸ್ಪತಿ' ನೋಡೋಕೂ ಮುಂಚೆ ಈ ಅಂಶಗಳನ್ನ ಗಮನಿಸಿ
''ಮನೋರಂಜನ್ ಅವರ ಡೆಡಿಕೇಶನ್ ತುಂಬ ಇಷ್ಟ. ನಾನು ನೋಡಿದ್ದೇನೆ, ಮನು ಡ್ಯಾನ್ಸ್, ಫೈಟ್ ಪ್ರಾಕ್ಟೀಸ್ ಮಾಡಿರುವುದು. ಹಾಡುಗಳು ಸೂಪರ್ ಆಗಿದೆ. ನಂದಕಿಶೋರ್ ಹಿಟ್ ಸಿನಿಮಾ ಕೊಟ್ಟಿದ್ದಾರೆ. ನಾನು ಕೂಡ ಈ ಸಿನಿಮಾಗಾಗಿ ಕಾಯ್ತಿನಿ. ಸೋ ಎಲ್ಲರೂ ನೋಡಿ. ಹಾರೈಸಿ'' ಎಂದು ವಿಶ್ ಮಾಡಿದ್ದಾರೆ.
ನಂದಕಿಶೋರ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದು, ರಾಕ್ ಲೈನ್ ವೆಂಕಟೇಶ್ ನಿರ್ಮಾಣ ಮಾಡಿದ್ದಾರೆ. ವಿ.ಹರಿಕೃಷ್ಣ ಈ ಚಿತ್ರಕ್ಕೆ ಸಂಗೀತ ಸಂಯೋಜನೆ ಇದೆ. ಮಿಷ್ಠಿ ಚಕ್ರವರ್ತಿ ಬೃಹಸ್ಪತಿಗೆ ನಾಯಕಿ.
ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ | Subscribe to Kannada Filmibeat.