For Quick Alerts
  ALLOW NOTIFICATIONS  
  For Daily Alerts

  'ಏಕ್ ಲವ್ ಯಾ' ಚಿತ್ರಕ್ಕೆ ಎಂಟ್ರಿ ನೀಡಿದ ಖಡಕ್ ವಿಲನ್

  |

  ಜೋಗಿ ಪ್ರೇಮ್ ಸದ್ಯ 'ಏಕ್ ಲವ್ ಯಾ' ಸಿನಿಮಾದ ನಿರ್ದೇಶನ ಮಾಡುತ್ತಿದ್ದಾರೆ. ಈ ಸಿನಿಮಾಗೆ ಈಗ ಒಬ್ಬ ಖಡಕ್ ವಿಲನ್ ಆಗಮನವಾಗಿದೆ.

  ಖಳ ನಟ ಯಶವಂತ್ ಶೆಟ್ಟಿ ಈ ಸಿನಿಮಾದಲ್ಲಿ ಖಳನಟನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಸಿನಿಮಾದ ಪಾತ್ರದ ಬಗ್ಗೆ ಫಿಲ್ಮಿಬೀಟ್ ಕನ್ನಡದ ಜೊತೆಗೆ ಮಾಹಿತಿ ಹಂಚಿಕೊಂಡಿದ್ದಾರೆ. ಯಶ್ ಶೆಟ್ಟಿ ಜೋಗಿ ಪ್ರೇಮ್ ನಿರ್ದೇಶನದಲ್ಲಿ ಮೊದಲ ಬಾರಿಗೆ ನಟಿಸುತ್ತಿದ್ದು, ಸಂತಸ ವ್ಯಕ್ತ ಪಡಿಸಿದ್ದಾರೆ.

  ಸಂದರ್ಶನ : 'ಯಾವತ್ತೂ ಹೀರೋ ಆಗಬಾರದು' ಎಂದಿದ್ದ ಯಶ್ ಶೆಟ್ಟಿ ನಿಯಮ ಮುರಿದರು

  ಬೆಂಗಳೂರಿನ ಮತ್ತಿಕೆರೆಯಲ್ಲಿ ಸಿನಿಮಾದ ಚಿತ್ರೀಕರಣ ನಡೆಯುತ್ತಿದೆ. ಇದರಲ್ಲಿ ಯಶ್ ಶೆಟ್ಟಿ ಕೂಡ ಭಾಗಿಯಾಗಿದ್ದಾರೆ. ತಮ್ಮ ಪಾತ್ರಕ್ಕೆ ಬಹಳ ಪ್ರಾಮುಖ್ಯತೆ ಇದೆಯಂತೆ. ಪ್ರೇಮ್ ಸರ್ ತುಂಬ ಕ್ಲಿಯರ್ ಆಗಿ ಚಿತ್ರೀಕರಣ ಮಾಡುತ್ತಾರೆ, ನನಗೆ ಇದೊಂದು ಒಳ್ಳೆಯ ಅನುಭವ ಎನ್ನುತ್ತಾರೆ ಎಂದು ಹೇಳಿದ್ದಾರೆ.

  ಪ್ರೇಮ್ ಅವರ 'ಕರಿಯ' ಸಿನಿಮಾ ಯಶ್ ಶೆಟ್ಟಿಗೆ ಬಹಳ ಇಷ್ಟವಂತೆ. ಅವರ ಜೊತೆಗೆ ಕೆಲಸ ಮಾಡಬೇಕು ಎನ್ನುವ ಕನಸು ಈಗ ನೆರವೇರಿದೆಯಂತೆ. ಚಿತ್ರದ ನಾಯಕ ರಾಣಾ ಕೂಡ ತುಂಬ ಚೆನ್ನಾಗಿ ನಟಿಸುತ್ತಾರೆ ಎನ್ನುತ್ತಾರೆ ಯಶ್ ಶೆಟ್ಟಿ.

  ಪ್ರತಿ ಸಿನಿಮಾದಲ್ಲಿಯೂ ಡಿಫರೆಂಟ್ ಪಾತ್ರ ಮಾಡುವ ಯಶ್ ಶೆಟ್ಟಿ ಈ ಚಿತ್ರದ ಪಾತ್ರದ ಬಗ್ಗೆ ನಿರೀಕ್ಷೆ ಇದೆ. ಈ ಸಿನಿಮಾದ ಜೊತೆಗೆ 'ರವಿಚಂದ್ರ', 'ಆ ದೃಶ್ಯ', 'ಸಲಗ', 'ಆದಿ ಲಕ್ಷ್ಮಿ ಪುರಾಣ' ಸೇರಿದಂತೆ ಅನೇಕ ಸಿನಿಮಾಗಳಲ್ಲಿ ಇವರು ನಟಿಸುತ್ತಿದ್ದಾರೆ.

  English summary
  Actor Yashwanth Shetty playing negative character in Ek Love Ya kannada movie. The movie is directing by Prem.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X