twitter
    For Quick Alerts
    ALLOW NOTIFICATIONS  
    For Daily Alerts

    ಹನಿಟ್ರ್ಯಾಪ್ ಮಾಡಿ 14 ಲಕ್ಷ ಹಣ ವಸೂಲಿ ಮಾಡಿದ್ದ ನಟನ ಬಂಧನ

    |

    ಸಿನಿಮಾ ಮಾಡಿ ಹೆಸರು ಮಾಡಬೇಕೆಂದು ಉದಯೋನ್ಮುಖ ನಟನೊಬ್ಬ ಮಾಡಬಾರದ ಕೆಲಸ ಮಾಡಿ ಪೊಲೀಸರಿಂದ ಬಂಧನಕ್ಕೆ ಒಳಗಾಗಿದ್ದಾನೆ.

    'ಮಿಸ್ಟರ್.ಭೀಮ್‌ರಾವ್' ಹೆಸರಿನ ಹೊಸ ಸಿನಿಮಾಕ್ಕೆ ನಾಯಕನಾಗಿ ಆಯ್ಕೆ ಆಗಿದ್ದ ನಟ ಯುವರಾಜ್ ಅಲಿಯಾಸ್ ಯುವನನ್ನು ಹನಿಟ್ರ್ಯಾಪ್ ಮಾಡಿ ಹಣ ವಸೂಲಿ ಮಾಡಿದ ಆರೋಪದ ಮೇಲೆ ಪೊಲೀಸರು ಬಂಧಿಸಿದ್ದಾರೆ.

    ಎಲೆಕ್ಟ್ರಾನಿಕ್ ಸಿಟಿ ಮೂಲದ ಉದ್ಯಮಿಯೊಬ್ಬರಿಗೆ ಯುವತಿಯ ಹೆಸರು ಹೇಳಿಕೊಂಡು ವಾಟ್ಸ್‌ಆಪ್ ಚಾಟ್ ಮಾಡಿದ್ದ ನಟ ಯುವರಾಜ್, ಆತನೊಟ್ಟಿಗೆ ಅಶ್ಲೀಲವಾಗಿ ಮಾತನಾಡಿ, ಆತನ ಕೆಲವು ಚಿತ್ರಗಳನ್ನು ತರಿಸಿಕೊಂಡಿದ್ದ. ಆ ನಂತರ ತಾನು ಪೊಲೀಸ್ ಅಧಿಕಾರಿಯೆಂದು ಸುಳ್ಳು ಹೇಳಿಕೊಂಡು ಉದ್ಯಮಿಗೆ ಕರೆ ಮಾಡಿ ನಿಮ್ಮ ವಿರುದ್ಧ ಯುವತಿಗೆ ಅಶ್ಲೀಲವಾಗಿ ಸಂದೇಶ ಮಾಡಿದ ದೂರು ದಾಖಲಾಗಿದೆ ಎಂದು ಹೇಳಿಕೊಂಡಿದ್ದ.

    Actor Yuvaraj Arrested In Honey Trap Case By Hunsuru Police

    ಅಲ್ಲದೆ ಕೇಸು ಮುಚ್ಚಿಹಾಕಬೇಕೆಂದರೆ ಹಣ ನೀಡಬೇಕೆಂದು ಹೇಳಿ ಮೊದಲಿಗೆ ಐವತ್ತು ಸಾವಿರ ಪಡೆದುಕೊಂಡು ಬಳಿಕ ಮೂರು ಲಕ್ಷ ಹಣ ಪಡೆದುಕೊಂಡಿದ್ದಾನೆ. ಹೀಗೆ ಪದೇ ಪದೇ ಆತನಿಗೆ ಕರೆ ಮಾಡಿ ಸುಮಾರು ಹದಿನಾಲ್ಕು ಹಣ ಪೀಕಿಸಿಕೊಂಡಿದ್ದಾನೆ. ಕೊನೆಗೆ ಅನುಮಾನ ಬಂದು ಉದ್ಯಮಿ ಹಲಸೂರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ತನಿಖೆ ನಡೆಸಿದ ಪೊಲೀಸರು ಯುವರಾಜ್ ಅನ್ನು ಬಂಧಿಸಿದ್ದಾರೆ.

    ಹನಿಟ್ರ್ಯಾಪ್‌ ಮಾಡಲು ನಟಿಯರನ್ನು ಬಳಸಿಕೊಳ್ಳುವ ಜಾಲವೊಂದು ಎರಡು ವರ್ಷದ ಹಿಂದೆ ಪತ್ತೆಯಾಗಿತ್ತು. ನಟಿಯರನ್ನು ಬಳಸಿಕೊಂಡು ಹಲವು ರಾಜಕಾರಣಿಗಳನ್ನು ಹನಿಟ್ರ್ಯಾಪ್‌ಗೆ ಬೀಳಿಸಿದ್ದ ಜಾಲ ಅದಾಗಿತ್ತು. ಇದೀಗ ನಟ ತಾನೇ ಯುವತಿಯ ಹೆಸರು ಹೇಳಿಕೊಂಡು ಉದ್ಯಮಿಗೆ ವಂಚಿಸಿದ್ದಾನೆ.

    English summary
    New actor Yuvaraj arrested in Honey trap case by Hunsuru police. Yuvaraj extracted 14 lakh rs by a businessman.
    Saturday, August 13, 2022, 22:45
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X