For Quick Alerts
  ALLOW NOTIFICATIONS  
  For Daily Alerts

  ದಿಗಂತ್-ಐಂದ್ರಿತಾ ಬಗ್ಗೆ ಕಾಡ್ಗಿಚ್ಚಿನಂತೆ ಹಬ್ಬಿದ ಸುದ್ದಿ ನಿಜವೋ? ಸುಳ್ಳೋ?

  By Harshitha
  |

  ಗಾಂಧಿನಗರದ ಗಲ್ಲಿಗಲ್ಲಿಗಳಲ್ಲೂ ನಿನ್ನೆ ಸಂಜೆಯಿಂದ ಒಂದೇ ಸುದ್ದಿ. ರಾಕಿಂಗ್ ಸ್ಟಾರ್ ಯಶ್ ಮತ್ತು ರಾಧಿಕಾ ಪಂಡಿತ್ ನಿಶ್ಚಿತಾರ್ಥ ಫಿಕ್ಸ್ ಆಗಿದೆ ಅಂತ.

  ಎಲ್ಲಾ ಸುದ್ದಿ ವಾಹಿನಿಗಳಲ್ಲೂ ಯಶ್-ರಾಧಿಕಾ ಪಂಡಿತ್ ಎಂಗೇಜ್ ಮೆಂಟ್ ಸುದ್ದಿ 'ಬ್ರೇಕಿಂಗ್ ನ್ಯೂಸ್' ಆಗಿ, ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಲೈವ್ ಮಾಡೋಕೆ ಶುರು ಹಚ್ಕೊಂಡಾಗಲೇ, ಮತ್ತೊಂದು ಸುದ್ದಿ ಕಾಡ್ಗಿಚ್ಚಿನಂತೆ ಹಬ್ಬಿತು. ಅದು ದೂದ್ ಪೇಡ ದಿಗಂತ್ ಮತ್ತು ನಟಿ ಐಂದ್ರಿತಾ ರೇ ಕುರಿತು.! [ನಟ ಯಶ್ - ರಾಧಿಕಾ ಪಂಡಿತ್ ಲವ್ ಸಕ್ಸಸ್: ನಿಶ್ಚಿತಾರ್ಥ ಫಿಕ್ಸ್.!]

  ಇಬ್ಬರೂ ಗಾಂಧಿನಗರದಲ್ಲಿ ಇತ್ತೀಚೆಗೆ ಕಾಣಿಸಿಕೊಂಡಿದ್ದೇ ಕಡಿಮೆ. ಹೀಗಿರುವಾಗಲೇ ಇಬ್ಬರದ್ದು ಅದೆಂಥಾ ಸುದ್ದಿ ಅಂತ ನೀವು ಯೋಚಿಸ್ತಿದ್ರೆ, ಕೆಳಗಿರುವ ಸ್ಲೈಡ್ ಗಳನ್ನು ಕ್ಲಿಕ್ಕಿಸಿ.....

  ಇದು ಅದೇ ತರಹದ ಸುದ್ದಿ

  ಇದು ಅದೇ ತರಹದ ಸುದ್ದಿ

  ಯಶ್ ಹಾಗೂ ರಾಧಿಕಾ ಪಂಡಿತ್ ಎಂಗೇಜ್ ಆಗ್ತಿದ್ದಾರೆ ಅಂದ ಕೂಡಲೇ ದಿಗಂತ್ ಹಾಗೂ ಐಂದ್ರಿತಾ ರೇ ನಿಶ್ಚಿತಾರ್ಥ ಕೂಡ ವರಮಹಾಲಕ್ಷ್ಮಿ ಹಬ್ಬದಂದೇ ನಡೆಯಲಿದೆ ಎಂಬ ಸುದ್ದಿ ಬ್ರೇಕ್ ಆಯ್ತು. [ಐಂದ್ರಿತಾ ರೇ ಜೊತೆ ದಿಗಂತ್ ಎಂಗೇಜ್ ಮೆಂಟ್?]

  ದಿಗಂತ್-ಐಂದ್ರಿತಾ ರೇ ನಿಶ್ಚಿತಾರ್ಥ.?

  ದಿಗಂತ್-ಐಂದ್ರಿತಾ ರೇ ನಿಶ್ಚಿತಾರ್ಥ.?

  ವರಮಹಾಲಕ್ಷ್ಮಿ ಹಬ್ಬದ ಶುಭ ಸಂದರ್ಭದಲ್ಲಿ (ಆಗಸ್ಟ್ 12) ಸ್ಯಾಂಡಲ್ ವುಡ್ ನ ಎರಡು ತಾರಾ ಜೋಡಿಗಳ ಎಂಗೇಜ್ ಮೆಂಟ್ ನಡೆಯುವುದು ಸಿಹಿ ಸುದ್ದಿನೇ. ಆದ್ರೆ, ಇದು ನಿಜವೇ.? [ದಿಗಂತ್-ಐಂದ್ರಿತಾ ಮದುವೆ ಯಾವಾಗ ಗೊತ್ತೇ?]

  ಐಂದ್ರಿತಾ ರೇ ಹೇಳಿದ್ದೇನು.?

  ಐಂದ್ರಿತಾ ರೇ ಹೇಳಿದ್ದೇನು.?

  ''ನಾನು ಮತ್ತು ದಿಗಂತ್ ನಿಶ್ಚಿತಾರ್ಥ ಮಾಡಿಕೊಳ್ಳುತ್ತಿದ್ದೇವೆ ಎಂಬ ಸುದ್ದಿ ಶುದ್ಧ ಸುಳ್ಳು'' ಅಂತ ತಮ್ಮ ಟ್ವಿಟ್ಟರ್ ಅಕೌಂಟ್ ಮೂಲಕ ಐಂದ್ರಿತಾ ರೇ ಸ್ಪಷ್ಟ ಪಡಿಸಿದ್ದಾರೆ. [ದೂದ್ಪೇಡ ಅನಾರ್ಕಲಿ ಲವ್ ಸ್ಟೋರಿ ಇನ್ನೂ ಚಾಲ್ತಿಯಲ್ಲಿದೆ!]

  ನಿಶ್ಚಿತಾರ್ಥ ಮಾಡಿಕೊಳ್ಳುವ ಹಾಗಿದ್ರೆ...

  ನಿಶ್ಚಿತಾರ್ಥ ಮಾಡಿಕೊಳ್ಳುವ ಹಾಗಿದ್ರೆ...

  ''ನಾನು ನಿಶ್ಚಿತಾರ್ಥ ಮಾಡಿಕೊಳ್ಳುವ ಹಾಗಿದ್ರೆ, ಖುಷಿಯಿಂದ ಅನೌನ್ಸ್ ಮಾಡುತ್ತೇನೆ. ನನ್ನ ಮನಸ್ಸಿಗೆ ಅನಿಸಿದ್ದನ್ನ ನಾನು ಸದಾ ನೇರವಾಗಿ ಹೇಳಿದ್ದೇನೆ'' ಅಂತಲೂ ಐಂದ್ರಿತಾ ಟ್ವೀಟ್ ಮಾಡಿದ್ದಾರೆ.

  ಸುದ್ದಿ ವಾಹಿನಿಗಳ ಮೇಲೆ ಐಂದ್ರಿತಾ ಗರಂ

  ಸುದ್ದಿ ವಾಹಿನಿಗಳ ಮೇಲೆ ಐಂದ್ರಿತಾ ಗರಂ

  ''ಕಳೆದ ಬಾರಿ ಆ ವಾಹಿನಿ ಸುಳ್ಳು ಸುದ್ದಿ ಮಾಡಿದಾಗ, ನನ್ನ ಟ್ವೀಟ್ ರಿಮೂವ್ ಮಾಡುವಂತೆ ಕೋರಿದ್ದರು. ಈಗ ಮತ್ತೆ ಅದೇ ಕೆಲಸ ಮಾಡಿದ್ದಾರೆ'' ಅಂತ ಸುದ್ದಿ ವಾಹಿನಿಯೊಂದರ ವಿರುದ್ಧ ಐಂದ್ರಿತಾ ರೇ ಗರಂ ಆಗಿ ಟ್ವೀಟ್ ಮಾಡಿದ್ದಾರೆ.

  ಇದು ಮೊದಲೇನಲ್ಲ.!

  ಇದು ಮೊದಲೇನಲ್ಲ.!

  ದಿಗಂತ್ ಹಾಗೂ ಐಂದ್ರಿತಾ ರೇ ನಡುವೆ 'ಸಂಥಿಂಗ್ ಸಂಥಿಂಗ್' ಇದೆ, ಸದ್ಯದಲ್ಲೇ ನಿಶ್ಚಿತಾರ್ಥ ಮಾಡಿಕೊಳ್ಳುತ್ತಾರೆ ಎಂಬ ಸುದ್ದಿ ಅನೇಕ ದಿನಗಳಿಂದ ಹರಿದಾಡುತ್ತಲೇ ಇತ್ತು. ನಿನ್ನೆ ಮತ್ತೆ ಮರುಕಳಿಸಿದೆ ಅಷ್ಟೆ.

  English summary
  Kannada Actress Aindrita Ray has taken her twitter account to clarify on the rumours surrounding her engagement with Kannada Actor Diganth.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X