»   » ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ ನಟಿ ಅಮಲಾ ಪೌಲ್ ದಂಪತಿ

ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ ನಟಿ ಅಮಲಾ ಪೌಲ್ ದಂಪತಿ

Posted By:
Subscribe to Filmibeat Kannada

ಖ್ಯಾತ ನಟಿ ಅಮಲಾ ಪೌಲ್ ಮತ್ತು ನಿರ್ದೇಶಕ ಎ.ಎಲ್.ವಿಜಯ್ ಅವರು ತಮ್ಮಿಬ್ಬರ ದಾಂಪತ್ಯಕ್ಕೆ ಫುಲ್ ಸ್ಟಾಪ್ ಇಡಲು ನಿರ್ಧರಿಸಿದ್ದಾರೆ. ಇವರಿಬ್ಬರು ಪರಸ್ಪರ ಒಪ್ಪಿಗೆಯ ಮೇರೆಗೆ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಲಿದ್ದಾರೆ ಎಂದು ಈ ಮೊದಲೇ ಕೆಲವು ಮಾಧ್ಯಮಗಳು ವರದಿ ಮಾಡಿದ್ದವು.

ಅದರಂತೆ ಇದೀಗ ನಟಿ ಅಮಲಾ ಪೌಲ್ ಮತ್ತು ನಿರ್ದೇಶಕ ಎ.ಎಲ್ ವಿಜಯ್ ಅವರು ಪರಸ್ಪರ ಒಪ್ಪಿಗೆಯ ಮೇರೆಗೆ ವಿಚ್ಛೇದನಕ್ಕೆ ನಿನ್ನೆ (ಆಗಸ್ಟ್ 6) ಅರ್ಜಿ ಸಲ್ಲಿಸಿದ್ದಾರೆ. ಅಂತೂ-ಇಂತೂ 2 ವರ್ಷಗಳ ವೈವಾಹಿಕ ಜೀವನಕ್ಕೆ ಅಂತ್ಯ ಹಾಡಲು ಅಮಲಾ ಪೌಲ್ ದಂಪತಿ ನಿರ್ಧರಿಸಿದ್ದಾರೆ.[ನಟಿ ಅಮಲಾ ಪೌಲ್ ಸಂಸಾರದಲ್ಲಿ ಬಿರುಗಾಳಿ..! ಕಾರಣ ಯಾರು.?]

ಮಲಯಾಳಂ, ತಮಿಳು-ತೆಲುಗಿನಲ್ಲಿ ಖ್ಯಾತಿ ಗಳಿಸಿ ಇದೀಗ ಕನ್ನಡ ಚಿತ್ರರಂಗಕ್ಕೂ ಕಾಲಿಟ್ಟಿರುವ ನಟಿ ಅಮಲಾ ಪೌಲ್ ಅವರ ದಾಂಪತ್ಯದಲ್ಲಿ ಬಿರುಕು ಮೂಡಿದೆ ಅಂತ ಈ ಮೊದಲು ಭಾರಿ ಗುಲ್ಲೆದ್ದಿತ್ತು.[ನಟಿ ಅಮಲಾ ಪೌಲ್ - ವಿಜಯ್ ಗಲಾಟೆ ಸಂಸಾರದ ಗುಟ್ಟು ರಟ್ಟು.!]

ಇದಕ್ಕೆ ಅಮಲಾ ಪೌಲ್ ಪತಿ ವಿಜಯ್ ಅವರು ಕೂಡ ಸ್ಪಷ್ಟನೆ ನೀಡಿದ್ದರು. ಇದೀಗ ಇಬ್ಬರು ಒಪ್ಪಿಗೆಯ ಮೇರೆಗೆ ಡೈವೋರ್ಸ್ ಗೆ ಅರ್ಜಿ ಹಾಕಿರುವುದರಿಂದ ಎಲ್ಲವೂ ಸ್ಪಷ್ಟವಾಗಿದೆ. ಹೆಚ್ಚಿನ ಮಾಹಿತಿಗಾಗಿ ಮುಂದೆ ಓದಿ.....

ಚೆನ್ನೈ ಕೋರ್ಟ್ ನಲ್ಲಿ ಅರ್ಜಿ

ಇಬ್ಬರೂ ಪರಸ್ಪರ ಒಪ್ಪಿಗೆಯ ಮೇರೆಗೆ ಚೆನ್ನೈನ ಕೌಟುಂಬಿಕ ನ್ಯಾಯಾಲಯದಲ್ಲಿ ಆಗಸ್ಟ್ 6, ಶನಿವಾರದಂದು ಅರ್ಜಿ ಸಲ್ಲಿಸಿದ್ದಾರೆ. ಹಿಂದು ವಿವಾಹ ಕಾಯ್ದೆ ಸೆಕ್ಷೆನ್ 13(b) ಅಡಿ ವಿಚ್ಛೇದನ ನೀಡುವಂತೆ ಮನವಿ ಮಾಡಿದ್ದಾರೆ. ಅರ್ಜಿ ಸಲ್ಲಿಕೆ ಸಂದರ್ಭದಲ್ಲಿ ಇಬ್ಬರೂ ಹಾಜರಿದ್ದರು. ಸುಮಾರು 15 ನಿಮಿಷಗಳ ಕಾಲ ಕೋರ್ಟ್ ನಲ್ಲಿದ್ದ ದಂಪತಿಗಳಿಬ್ಬರು ತುಂಬಾ ಕೂಲ್ ಆಗಿ ಕಂಡುಬಂದರು.[ನಟಿ ಅಮಲಾ ಪೌಲ್ ಗೆ ವಿಚ್ಛೇದನ: ಪತಿ ವಿಜಯ್ ಬಾಯ್ಬಿಟ್ಟ ಸತ್ಯ ಏನು.?]

6 ತಿಂಗಳ ಕಾಲಾವಕಾಶ

ಚೆನ್ನೈನ ಕೌಟುಂಬಿಕ ನ್ಯಾಯಾಲಯದ ನ್ಯಾಯಾಧೀಶರಾದ ಮರಿಯಾ ಕ್ಲೇಟ್ ಅವರ ಎದುರು ಹಾಜರಾಗಿ ಹಿಂದೂ ವಿವಾಹ ಕಾಯ್ದೆಯಂತೆ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದು, ಮರಿಯಾ ಅವರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸ್ಟಾರ್ ದಂಪತಿಗಳಿಬ್ಬರು ಕಾನೂನಾತ್ಮಕವಾಗಿ ಬೇರೆಯಾಗಲು, ನಿನ್ನೆಯಿಂದ (ಆಗಸ್ಟ್ 6) ಆರು ತಿಂಗಳ ಕಾಲಾವಕಾಶ ನೀಡಿದ್ದಾರೆ.

ಆಸ್ತಿ-ಅಂತಸ್ತಿಗೆ ಬೇಡಿಕೆ ಇಲ್ಲ

ಬೇರೆ-ಬೇರೆಯಾದ ಮೇಲೆ ಜೀವನೋಪಾಯ ಅಥವಾ ಇತರೇ ಆಸ್ತಿ-ಅಂತಸ್ತಿಗೆ ಎರಡೂ ಕಡೆಯಿಂದ ಬೇಡಿಕೆ ಇಲ್ಲ, ಎಂದು ದಂಪತಿಗಳಿಬ್ಬರು ಸ್ಪಷ್ಟಪಡಿಸಿದ್ದಾರೆ.

ಜೂನ್, 2014ರಲ್ಲಿ ದಾಂಪತ್ಯಕ್ಕೆ ಕಾಲಿಟ್ಟಿದ್ದ ನಟಿ

ಜೂನ್ 12, 2014ರಲ್ಲಿ ನಿರ್ದೇಶಕ ಎ.ಎಲ್ ವಿಜಯ್ ಅವರನ್ನು ಪ್ರೀತಿಸಿ ಅಮಲಾ ಪೌಲ್ ಮದುವೆ ಆಗಿದ್ದರು. ಆದರೆ ಇಬ್ಬರ ಮಧ್ಯೆ ಮನಸ್ತಾಪ ಬಂದ ಕಾರಣ ಮಾರ್ಚ್ 2, 2015ರಿಂದ, ನಾನೊಂದು ತೀರ, ನೀನೊಂದು ತೀರ ಅಂತ ಇಬ್ಬರು ಬೇರೆ-ಬೇರೆಯಾಗಿ ವಾಸ್ತವ್ಯ ಹೂಡಿದ್ದರು.

ದಾಂಪತ್ಯದಲ್ಲಿ ನಂಬಿಕೆ ಮುಖ್ಯ

'ಅಮಲಾ ಪೌಲ್ ಮದುವೆ ನಂತರ ಕೂಡ ನಟಿಸೋ ಬಗ್ಗೆ ನಮ್ಮ ಕುಟುಂಬಕ್ಕೆ ಏನೂ ಅಭ್ಯಂತರವಿರಲಿಲ್ಲ. ಆದರೆ ದಾಂಪತ್ಯ ಜೀವನದಲ್ಲಿ ಸತ್ಯ ಮತ್ತು ನಂಬಿಕೆ ಅನ್ನೋದು ಮುಖ್ಯ' ಎಂದು ಅಮಲಾ ಪೌಲ್ ಪತಿ ವಿಜಯ್ ಅವರು ತಮ್ಮಿಬ್ಬರ ದಾಂಪತ್ಯದ ವಿರಸದ ಬಗ್ಗೆ ಈ ಮೊದಲು ಒಗಟಾಗಿ ಉತ್ತರ ನೀಡಿದ್ದರು. ಒಟ್ನಲ್ಲಿ ನಿಜವಾದ ಕಾರಣ ಏನೂ ಅನ್ನೋದು ಅವರಿಬ್ಬರಿಗೆ ಗೊತ್ತು.

English summary
Actress Amala Paul and her film director-husband A.Vijay on Saturday (August 6th) approached a family court here seeking divorce by mutual consent. They appeared before principal family court judge Maria Clete and filed a petition for divorce by mutual consent under Section 13(b) of the Hindu Marriage Act.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada