For Quick Alerts
  ALLOW NOTIFICATIONS  
  For Daily Alerts

  'ಹೆಬ್ಬುಲಿ' ನಟಿ ಅಮಲಾ ಪೌಲ್ 2ನೇ ಸಲವೂ ಲವ್ ಮ್ಯಾರೇಜ್.!

  By Bharath Kumar
  |

  ದಕ್ಷಿಣ ಭಾರತದ ಸಹಜ ಸುಂದರಿ ಅಮಲಾ ಪೌಲ್. ತಮಿಳು, ತೆಲುಗಿನ ಸ್ಟಾರ್ ನಟರ ಜೊತೆಗೆ ಸ್ಕ್ರೀನ್ ಶೇರ್ ಮಾಡಿದ್ದ ಅಮಲಾ ಕಿಚ್ಚ ಸುದೀಪ್ ಅಭಿನಯದ 'ಹೆಬ್ಬುಲಿ' ಚಿತ್ರದೊಂದಿಗೆ ಚಂದನವನಕ್ಕೆ ಹೆಜ್ಜೆ ಇಟ್ಟರು. ಈ ಮೂಲಕ ಸೌತ್ ಸಿನಿಲೋಕದ ಸಕ್ಸಸ್ ಪುಲ್ ನಾಯಕಿ ಎನಿಸಿಕೊಂಡಿದ್ದಾರೆ. ಈ ನಟಿ ಈಗ ತಮ್ಮ ಸಿನಿಮಾ ವಿಚಾರಕ್ಕಿಂತ, ಎರಡನೇ ಮದುವೆ ವಿಚಾರದಲ್ಲಿ ಸಿಕ್ಕಾಪಟ್ಟೆ ಸುದ್ದಿಯಾಗ್ತಿದ್ದಾರೆ.

  'ಹೆಬ್ಬುಲಿ' ನಟಿ ಅಮಲಾ ಪೌಲ್-ವಿಜಯ್ ವೈವಾಹಿಕ ಬದುಕು ಅಂತ್ಯ

  ಅಂದ್ಹಾಗೆ, ಅಮಲಾ ಪೌಲ್ ತಮಿಳಿನ ನಿರ್ಮಾಪಕ ಎ.ಎಲ್ ವಿಜಯ್ ಅವರೊಂದಿಗೆ ಸಪ್ತಪದಿ ತುಳಿದಿದ್ದರು. ಆದ್ರೆ, ಕೆಲವೇ ವರ್ಷಗಳಲ್ಲಿ ಇಬ್ಬರ ದಾಂಪತ್ಯ ಜೀವನ ಮುರಿದು ಬಿತ್ತು. ಪರಸ್ಪರ ವಿಚ್ಛೇದನ ಪಡೆದು ಬೇರೆಯಾದರು. ಹೀಗಾಗಿ, ಅಮಲಾ ಪೌಲ್ ಎರಡನೇ ಮದುವೆ ಆಗ್ತಾರೆ? ಎಂಬುದು ಎಲ್ಲೆಡೆ ಚರ್ಚೆ ಆಗುತ್ತಿತ್ತು. ಇದಕ್ಕೆಲ್ಲ ಸ್ವತಃ ಅಮಲಾ ಪೌಲ್ ಉತ್ತರ ಕೊಟ್ಟಿದ್ದಾರೆ.

  ಹಾಗಾದ್ರೆ, ಅಮಲಾ ಪೌಲ್ ಎರಡನೇ ಮದುವೆ ಆಗ್ತಾರ? ಯಾರು ಆ ಹುಡುಗ ಎಂದು ಮುಂದೆ ಓದಿ......

  ಎರಡನೇ ಮದುವೆಗೆ ಅಮಲಾ ಗ್ರೀನ್ ಸಿಗ್ನಲ್!

  ಎರಡನೇ ಮದುವೆಗೆ ಅಮಲಾ ಗ್ರೀನ್ ಸಿಗ್ನಲ್!

  ನಿರ್ಮಾಪಕ ವಿಜಯ್ ಅವರೊಂದಿಗೆ ದಾಂಪತ್ಯ ಜೀವನ ಮುರಿದು ಬಿದ್ದ ನಂತರ ಅಮಲಾ ಪೌಲ್ ಎರಡನೇ ಮದುವೆಗೆ ಸಿದ್ದವಾಗಿದ್ದಾರೆ ಎನ್ನಲಾಗುತ್ತಿತ್ತು. ಆದ್ರೀಗ, ಈ ಸುದ್ದಿಯನ್ನ ಸ್ವತಃ ಅಮಲಾ ಪೌಲ್ ಒಪ್ಪಿಕೊಂಡಿದ್ದಾರೆ.

  ನಟಿ ಅಮಲಾ ಪೌಲ್ ಸಂಸಾರದಲ್ಲಿ ಬಿರುಗಾಳಿ..! ಕಾರಣ ಯಾರು.?

  ಆದಷ್ಟೂ ಬೇಗ ಮತ್ತೆ ಮದುವೆ

  ಆದಷ್ಟೂ ಬೇಗ ಮತ್ತೆ ಮದುವೆ

  ಖಾಸಗಿ ಮ್ಯಾಗಜಿನ್ ನ (Magazine) ಸಂದರ್ಶನದಲ್ಲಿ ಮಾತನಾಡಿದ ಅಮಲಾ ಪೌಲ್, ''ನಾನೇನು ಸನ್ಯಾಸಿನಿಯಲ್ಲ. ಸನ್ಯಾಸಿನಿ ಆಗಿದ್ದರೆ, ಸಿನಿಮಾದಲ್ಲಿರುತ್ತಿರಲಿಲ್ಲ. ಹಿಮಾಲಯಕ್ಕೆ ಹೋಗುತ್ತಿದ್ದೆ. ನಾನು ಮತ್ತೆ ಮದುವೆಯಾಗುತ್ತೇನೆ'' ಎಂದು ಹೇಳುವುದರ ಮೂಲಕ ಗಾಸಿಪ್ ಗಳಿಗೆ ತೆರೆ ಎಳೆದಿದ್ದಾರೆ.

  ಅಮಲಾ ಪೌಲ್ ವಿಚ್ಛೇದನ: ಆಕೆಯ ತಾಯಿಯೇ ಮೇನ್ ವಿಲನ್?

  ಲವ್ ಮ್ಯಾರೇಜ್ ಅಂತೆ

  ಲವ್ ಮ್ಯಾರೇಜ್ ಅಂತೆ

  ಇನ್ನು ಮರು ವಿವಾಹದ ಬಗ್ಗೆ ಮಾತನಾಡುವಾಗ, ನಾನು ಲವ್ ಮ್ಯಾರೇಜ್ ಆಗ್ತಿನಿ. ಆದಷ್ಟೂ ಬೇಗ ಮದುವೆ ಆಗ್ತಿನಿ. ಯಾರು ಹುಡುಗ ಎಂದು ಸದ್ಯದಲ್ಲೇ ಹೇಳ್ತಿನಿ'' ಎಂದು ಕುತೂಹಲ ಹುಟ್ಟುಹಾಕಿದ್ದಾರೆ.

  ನಟಿ ಅಮಲಾ ಪೌಲ್ ಗೆ ವಿಚ್ಛೇದನ: ಪತಿ ವಿಜಯ್ ಬಾಯ್ಬಿಟ್ಟ ಸತ್ಯ ಏನು.?

  ಯಾರು ಆ ಹುಡುಗ?

  ಯಾರು ಆ ಹುಡುಗ?

  ಅಮಲಾ ಪೌಲ್ ಹೇಳಿರುವಾಗೆ, ಎರಡನೇ ಮದುವೆಯೂ ಲವ್ ಮ್ಯಾರೇಜ್ ಅಂತೆ. ಆದ್ರೆ, ಹುಡುಗ ಯಾರು ಎಂದು ಹೇಳಿಲ್ಲ. ಈ ಮಧ್ಯೆ ಅಮಲಾ ಪೌಲ್ ಗೆ ನಟನೊಬ್ಬನ ಜೊತೆ ಅಫೇರ್ ಇದೆ ಎಂಬ ಸುದ್ದಿಗಳು ತಮಿಳು ಚಿತ್ರರಂಗದಲ್ಲಿ ಕೇಳಿಬಂದಿತ್ತು.

  ತಮಿಳಿನಲ್ಲಿ ಅಮಲಾ ಪೌಲ್ ಬ್ಯಾನ್ ಹಿಂದೆ 'ಸೂಪರ್ ಸ್ಟಾರ್' ಕೈವಾಡ?

  2014ರಲ್ಲಿ ಮದುವೆ, 2016 ರಲ್ಲಿ ವಿಚ್ಛೇದನ

  2014ರಲ್ಲಿ ಮದುವೆ, 2016 ರಲ್ಲಿ ವಿಚ್ಛೇದನ

  2014 ರಲ್ಲಿ ನಿರ್ದೇಶಕ ವಿಜಯ್ ಅವರನ್ನು ಪ್ರೀತಿಸಿ ಅಮಲಾ ಪೌಲ್ ಮದುವೆಯಾಗಿದ್ದರು. ಅವರ ದಾಂಪತ್ಯದಲ್ಲಿ ಬಿರುಕು ಮೂಡಿ 2016 ರಲ್ಲಿ ವಿಚ್ಛೇದನ ಪಡೆದು ಬೇರೆಯಾಗಿದರು.

  ಬ್ಯುಸಿ ಹೀರೋಯಿನ್!

  ಬ್ಯುಸಿ ಹೀರೋಯಿನ್!

  ಅಮಲಾ ಪೌಲ್ ಸದ್ಯ ದಕ್ಷಿಣ ಭಾರತದ ಯಶಸ್ಸಿನ ನಟಿ. ಸಾಲು ಸಾಲು ಚಿತ್ರಗಳಲ್ಲಿ ನಾಯಕಿ ಆಗಿ ಅಭಿನಯಿಸುತ್ತಿದ್ದಾರೆ. ಧನುಶ್ ಮತ್ತು ಅಮಲಾ ಪೌಲ್ ಅಭಿನಯದ 'ವಿಐಪಿ-2' ಚಿತ್ರ ಬಿಡುಗಡೆಗೆ ಸಿದ್ದವಾಗಿದೆ. 'ಬಾಸ್ಕರ್ ಒರು ರಾಸ್ಕುಲ್', 'ತಿರುಟ್ಟು ಪಾಯಲೇ-2', 'ಕ್ವೀನ್' ರೀಮೇಕ್, 'ಮಿನ್ ಮಿಣಿ', ಸೇರಿದಂತೆ ಹಲವು ಪ್ರಾಜೆಕ್ಟ್ ಗಳಲ್ಲಿ ಅಮಲಾ ಪೌಲ್ ನಟಿಸುತ್ತಿದ್ದಾರೆ.

  'ಹೆಬ್ಬುಲಿ' ಸಿನಿಮಾ ಆದ್ಮೇಲೆ 'ಅಮಲಾ ಪೌಲ್' ಯಾರ ಕೈಗೂ ಸಿಗ್ತಿಲ್ಲವಂತೆ

  English summary
  South beauty Amala Paul talks In a Recent Interview Given to a Popular Tamil Magazine, Amala Paul reportedly Stated that she is ready for a Remarriage.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X