For Quick Alerts
  ALLOW NOTIFICATIONS  
  For Daily Alerts

  ಶಿವಮೊಗ್ಗದಲ್ಲಿ ಚೆಲುವಿನ ಚಿಲಿಪಿಲಿ ಅಮೂಲ್ಯ ಪ್ರಚಾರ

  By Rajendra
  |

  ಇತ್ತೀಚೆಗೆ ಗೋಲ್ಡನ್ ಸ್ಟಾರ್ ಗಣೇಶ್ ಜೊತೆಗಿನ 'ಶ್ರಾವಣಿ ಸುಬ್ರಹ್ಮಣ್ಯ' ಚಿತ್ರದ ಮೂಲಕ ಮತ್ತೆ ಫಾರ್ಮ್ ಗೆ ಮರಳಿದ ತಾರೆ ಅಮೂಲ್ಯ. ಇದೀಗ ಅವರು ಗಜಕೇಸರಿ ಚಿತ್ರದಲ್ಲಿ ಬಿಜಿಯಾಗಿದ್ದರು ಚುನಾವಣಾ ಪ್ರಚಾರಕ್ಕಾಗಿ ಶಿವಮೊಗ್ಗಕ್ಕೆ ಹೋಗುತ್ತಿದ್ದಾರೆ.

  ಮಂಗಳವಾರದಿಂದ (ಏ.9) ಅಮೂಲ್ಯ ಅವರು ಗೀತಾ ಶಿವರಾಜ್ ಕುಮಾರ್ ಪರ ಪ್ರಚಾರ ಮಾಡಲಿದ್ದಾರೆ. ನಾನು ಯಾವುದೇ ಪಕ್ಷದ ಪರ ಅಲ್ಲ ಎಂದಿರುವ ಅವರು ಶಿವಣ್ಣ ಹಾಗೂ ಗೀತಾ ಅವರ ಮೇಲಿನ ಅಭಿಮಾನದಿಂದ ಪ್ರಚಾರದಲ್ಲಿ ಭಾಗಿಯಾಗುತ್ತಿರುವುದಾಗಿ ತಿಳಿಸಿದ್ದಾರೆ.

  ಮಂಡ್ಯದಲ್ಲಿ ಪ್ರಚಾರಕ್ಕೆ ನಟಿ ರಮ್ಯಾ ಅವರು ಕರೆದರೂ ಹೋಗುತ್ತೀರಾ ಎಂದು ಕೇಳಿದರೆ, ಖಂಡಿತ ಹೋಗುತ್ತೇನೆ. ನಾನು ಯಾವತ್ತಿದ್ದರೂ ಕಲಾವಿದರ ಪರವೇ ಹೊರತು ಯಾವುದೇ ಪಕ್ಷ ಅಥವಾ ರಾಜಕೀಯದ ಪರ ಅಲ್ಲ ಎಂದಿದ್ದಾರೆ.

  ಮುಂದೆ ತಾವೂ ರಾಜಕೀಯಕ್ಕೆ ಬರುವ ಬಗ್ಗೆ ಪ್ಲಾನ್ ಏನಾದರೂ ಇದೆಯೇ ಎಂದರೆ, ಅಯ್ಯೋ ಆ ಬಗ್ಗೆ ಇನ್ನೂ ಯೋಚನೆ ಮಾಡಿಲ್ಲ ಎನ್ನುವ ಅವರು ಹೆಚ್ಚಿಗೆ ಕೇಳಿದರೆ ನನಗೆ ರಾಜಕೀಯದ ಬಗ್ಗೆ ಏನೇನೂ ಗೊತ್ತಿಲ್ಲ ಎನ್ನುತ್ತಾರೆ.

  ಒಟ್ಟಾರೆಯಾಗಿ ಗೀತಾ ಶಿವರಾಜ್ ಕುಮಾರ್ ಪರ ಉಪೇಂದ್ರ, ಸಂಜನಾ ಪ್ರಚಾರ ಮಾಡಿದ್ದಾರೆ. ಇದೀಗ ಅಮೂಲ್ಯ ಸಹ ಗೀತಾ ಶಿವರಾಜ್ ಕುಮಾರ್ ಪರ ಮತಯಾಚಿಸಲು ಹೊರಟಿದ್ದಾರೆ. ಏಪ್ರಿಲ್ 10 ಮತ್ತು 11ರಂದು ಚಿತ್ರನಟರಾದ ಜೈ ಜಗದೀಶ್, ಶ್ರೀಮುರಳಿ ಸಹ ಪ್ರಚಾರ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ ಎಂದು ಮಧು ಬಂಗಾರಪ್ಪ ಹೇಳಿದ್ದಾರೆ. (ಒನ್ ಇಂಡಿಯಾ ಕನ್ನಡ)

  English summary
  Kannada actress Amoolya will campaign for Geetha Shivrajkumar, who is contesting in Lok Sabha Elections 2014 from Shimoga constituency, which will be held on 9th April. Amoolya gets involved in road show on 9th April.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X