For Quick Alerts
  ALLOW NOTIFICATIONS  
  For Daily Alerts

  ಕೊರೊನಾ ಸಮಯದಲ್ಲಿ ಮಾದರಿ ಕೆಲಸಕ್ಕೆ ಕೈ ಹಾಕಿದ ಅಮೂಲ್ಯ ದಂಪತಿ

  |

  ಕೊರೊನಾ ಸಂಕಷ್ಟದ ಸಮಯದಲ್ಲಿ ನಟಿ ಅಮೂಲ್ಯ ಮತ್ತು ಪತಿ ಜಗದೀಶ್ ಅವರು ಸಮಾಜಕ್ಕೆ ಮಾದರಿಯಾಗುವಂತಹಾ ಕೆಲಸಕ್ಕೆ ಮಾಡುತ್ತಿದ್ದಾರೆ.

  ನಂದಿ ಬೆಟ್ಟದಲ್ಲಿ ಚಂದನ್ ಏನ್ ಮಾಡ್ತಿದ್ದಾರೆ ನೋಡಿ | Chandan Feeding Monkeys | Nandhi Hills

  ಕೊರೊನಾ ವೈರಸ್ ವಿರುದ್ಧ ನಡೆಯುತ್ತಿರುವ ಈ ಯುದ್ಧದಲ್ಲಿ ವೈದ್ಯರು, ಆರೋಗ್ಯ ಕಾರ್ಯಕರ್ತರು, ಪೊಲೀಸರು, ಸ್ವಚ್ಛತಾ ಕಾರ್ಮಿಕರು ಮುಂಚೂಣಿಯಲ್ಲಿದ್ದಾರೆ. ಇವರು ತಮ್ಮ ಜೀವದ ಹಂಗು ತೊರೆದು ಕೊರೊನಾ ವಿರುದ್ಧ ನಿಂತಿದ್ದಾರೆ. ಇಂಥಹರ ಜೀವದ ಬಗ್ಗೆ ಕಾಳಜಿ ಮಾಡುವುದು ಎಲ್ಲರ ಕರ್ತವ್ಯವಾಗಿದೆ.

  ಇದೇ ಆದರ್ಶವನ್ನಿಟ್ಟುಕೊಂಟು ನಟಿ ಅಮೂಲ್ಯ ಮತ್ತು ಜಗದೀಶ್ ಅವರು ಕೊರೊನಾ ವಿರುದ್ಧ ಹೋರಾಡುತ್ತಿರುವ ಈ ಯೋಧರ ಆರೋಗ್ಯದ ದೃಷ್ಟಿಯಿಂದ 10,000 ಮಾಸ್ಕ್ ವಿತರಿಸುವ ಕಾರ್ಯ ಮಾಡುತ್ತಿದ್ದಾರೆ.

  10,000 ಬಟ್ಟೆ ಮಾಸ್ಕ್‌ಗಳ ಉಚಿತ ವಿತರಣೆ

  10,000 ಬಟ್ಟೆ ಮಾಸ್ಕ್‌ಗಳ ಉಚಿತ ವಿತರಣೆ

  ಜಗದೀಶ್ ಅವರು ಈ ಕುರಿತು ವಿಡಿಯೋ ಹಂಚಿಕೊಂಡಿದ್ದು, 10,000 ಬಟ್ಟೆ ಮಾಸ್ಕ್‌ಗಳನ್ನು ಪೊಲೀಸರು, ವೈದ್ಯರು, ಆರೋಗ್ಯ ಕಾರ್ಯಕರ್ತರು, ಸ್ವಯಂಸೇವಕರುಗಳಿಗೆ ಉಚಿತವಾಗಿ ಹಂಚುತ್ತಿದ್ದೇವೆ, ಕೊರೊನಾ ವಿರುದ್ಧ ಹೋರಾಟದಲ್ಲಿ ಇದು ನಮ್ಮ ಸಣ್ಣ ಕಾಣಿಕೆ ಎಂದು ಹೇಳಿದ್ದಾರೆ.

  25 ಮಹಿಳೆಯರ ಸಹಾಯದಿಂದ ಮಾಸ್ಕ್ ತಯಾರಿ

  25 ಮಹಿಳೆಯರ ಸಹಾಯದಿಂದ ಮಾಸ್ಕ್ ತಯಾರಿ

  ಜಗದೀಶ್ ಮತ್ತು ಅಮೂಲ್ಯ ಹಾಗೂ ತಂಡದವರು ತಮ್ಮ ನಿವಾಸವಿರುವ ಏರಿಯಾದಲ್ಲಿ ಮನೆಯಲ್ಲಿಯೇ ಬಟ್ಟೆ ಹೊಲಿಯುವ ಮಹಿಳೆಯರನ್ನು ಗುರುತಿಸಿ ಅವರ ನೆರವಿನಿಂದ ಈ 10,000 ಬಟ್ಟೆ ಮಾಸ್ಕ್‌ಗಳನ್ನು ತಯಾರಿಸಿಕೊಂಡಿದೆ. 25 ಮಹಿಳೆಯರು ಮನೆಯಲ್ಲಿಯೇ ಈ ಮಾಸ್ಕ್‌ಗಳನ್ನು ಹೊಲಿದಿದ್ದಾರೆ.

  ಸಂಕಷ್ಟದಲ್ಲಿರುವ ಮಹಿಳೆಯರಿಗೆ ಉಪಯೋಗ

  ಸಂಕಷ್ಟದಲ್ಲಿರುವ ಮಹಿಳೆಯರಿಗೆ ಉಪಯೋಗ

  ಆ ಮಹಿಳೆಯರಿಗೆ ಹಣ ನೀಡಿ ಈ ಸಂಕಷ್ಟದ ಸಮಯದಲ್ಲಿ ಅವರ ಕುಟುಂಬ ನಿರ್ವಹಣೆಗೆ ಸಹಾಯ ಮಾಡಿದ್ದೇವೆ, ಜೊತೆಗೆ ಮಾಸ್ಕ್‌ಗಳನ್ನು ಉಚಿತವಾಗಿ ಹಂಚಿಕೆ ಮಾಡಿ ಕೊರೊನಾ ಯೋಧರ ಆರೋಗ್ಯ ಉಳಿಸುವಲ್ಲಿ ಸಣ್ಣ ಸೇವೆ ಮಾಡಿದ್ದೇವೆ ಎಂದು ಜಗದೀಶ್ ಹೇಳಿದ್ದಾರೆ.

  ಬೆಂಗಳೂರು ಪೊಲೀಸರಿಂದ ಮೆಚ್ಚುಗೆ

  ಬೆಂಗಳೂರು ಪೊಲೀಸರು ಸಹ ಜಗದೀಶ್ ಹಾಗೂ ತಂಡದ ಕಾರ್ಯವನ್ನು ಶ್ಲಾಘಿಸಿದ್ದು, ಅವರ ಚಿತ್ರಗಳನ್ನು ತಮ್ಮ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

  English summary
  Actress Amulya husband Jagadeesh distrubuted 10,000 masks for free to Police, doctors, health workers and others.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X