»   » ಚಿತ್ರಗಳು: 'ಅಮೂಲ್ಯ-ಜಗದೀಶ್' ನಿಶ್ಚಿತಾರ್ಥದಲ್ಲಿ ತಾರೆಯರ ಸೆಲ್ಫಿ ಸಂಭ್ರಮ

ಚಿತ್ರಗಳು: 'ಅಮೂಲ್ಯ-ಜಗದೀಶ್' ನಿಶ್ಚಿತಾರ್ಥದಲ್ಲಿ ತಾರೆಯರ ಸೆಲ್ಫಿ ಸಂಭ್ರಮ

Posted By:
Subscribe to Filmibeat Kannada

ಸ್ಯಾಂಡಲ್ ವುಡ್ ನ ಮುದ್ದು ಮುಖದ ಚೆಲುವೆ ಅಮೂಲ್ಯ ಮತ್ತು ಜಗದೀಶ್ ಅವರು ಎಂಗೇಜ್ ಮೆಂಟ್ ಸೋಮವಾರ ಸಂಪ್ರದಾಯವಾಗಿ ನೆರೆವೇರಿದೆ. ನವ ವಧು-ವರರಿಗೆ ರಾಜಕೀಯ ಗಣ್ಯರು, ಚಿತ್ರತಾರೆಯರು ಸೇರಿದಂತೆ ಹಲವು ಅಭಿಮಾನಿಗಳು ಅರಸಿ, ಆರ್ಶೀವಾದಿಸಿದ್ದಾರೆ.

ಅಮೂಲ್ಯ-ಜಗದೀಶ್ ಅವರ ಎಂಗೇಜ್ ಮೆಂಟ್ ಕಾರ್ಯಕ್ರಮದಲ್ಲಿ ಕನ್ನಡದ ಹಲವು ನಟ-ನಟಿಯರು ಭಾಗವಹಿಸಿದ್ದು, ನವಜೋಡಿಯ ಜೊತೆ ಸೆಲ್ಫಿ ತೆಗೆದುಕೊಂಡು ಸಂಭ್ರಮಿಸಿದರು.

ಹಾಗಾದ್ರೆ, ಅಮೂಲ್ಯ-ಜಗದೀಶ್ ಅವರ ಎಂಗೇಜ್ ಮೆಂಟ್ ಕಾರ್ಯಕ್ರಮ ಹೇಗಿತ್ತು? ಯಾವೆಲ್ಲ ಸೆಲೆಬ್ರಿಟಿಗಳು ಭಾಗವಹಿಸಿದ್ದರು ಎಂದು ಫೋಟೋ ಸಮೇತ ನೋಡಿ....

ಅಮ್ಮು-ಜಗ್ಗಿ ಎಂಗೇಜ್ ಮೆಂಟ್!

ಸೋಮವಾರ (ಮಾರ್ಚ್ 6) ಸಂಜೆ 6.30 ರ ಶುಭ ಘಳಿಗೆಯಲ್ಲಿ ನಟಿ ಅಮೂಲ್ಯ ಮತ್ತು ಜಗದೀಶ್, ಪರಸ್ಪರ ವಜ್ರದ ಉಂಗುರ ಬದಲಾಯಿಸಿಕೊಳ್ಳುವುದರ ಮೂಲಕ ಎಂಗೇಜ್ ಆದರು. ಇವರಿಬ್ಬರ ಈ ಸಂಭ್ರಮಕ್ಕೆ ಸ್ಯಾಂಡಲ್ ವುಡ್ ನ ಹಲವು ತಾರೆಯರು ಸಾಕ್ಷಿಯಾದರು.

ನವಜೋಡಿಯ ಜೊತೆ ಗಣೇಶ್ ದಂಪತಿ

ಅಮೂಲ್ಯ ಹಾಗೂ ಜಗದೀಶ್ ಅವರ ಮದುವೆಗೆ ಕಾರಣವಾದ ಗೋಲ್ಡನ್ ಸ್ಟಾರ್ ಗಣೇಶ್ ಮತ್ತು ಶಿಲ್ಪಾ ಗಣೇಶ್ ಅವರು, ನವ ಜೋಡಿಯ ಜೊತೆ ಸೆಲ್ಫಿಗೆ ಫೋಸ್ ಕೊಟ್ಟು ಸಂಭ್ರಮಿಸಿದರು.

ಅಮೂಲ್ಯ ಜೊತೆ ಕಾರುಣ್ಯ ಸೆಲ್ಪಿ

ವಜ್ರಕಾಯ ಖ್ಯಾತಿಯ ನಟಿ ಕಾರುಣ್ಯ ರಾಮ್, ಅಮೂಲ್ಯ ಹಾಗೂ ಜಗದೀಶ್ ಅವರ ಎಂಗೇಜ್ ಮೆಂಟ್ ನಲ್ಲಿ ಭಾಗಿಯಾಗಿದ್ದು, ವಧು-ವರರಿಗೆ ಶುಭ ಕೋರಿದರು.

ನಭಾ ನಟೇಶ್

ಕನ್ನಡ ಮತ್ತೊರ್ವ ಯುವ ನಟಿ ನಭಾ ನಟೇಶ್, ಅಮೂಲ್ಯ-ಜಗದೀಶ್ ನಿಶ್ಚಿತಾರ್ಥ ಸಂಭ್ರಮದಲ್ಲಿ ಪಾಲ್ಗೊಂಡಿದ್ದರು.

ಒಳ್ಳೆ ಹುಡುಗ ಪ್ರಥಮ್

'ಬಿಗ್ ಬಾಸ್' ವಿನ್ನರ್ ಪ್ರಥಮ್ ಕೂಡ ಅಮೂಲ್ಯ ಮತ್ತು ಜಗದೀಶ್ ಅವರ ನಿಶ್ಚಿತಾರ್ಥ ಕಾರ್ಯಕ್ರದಮಲ್ಲಿ ಕಾಣಿಸಿಕೊಂಡರು. ಅಷ್ಟೇ ಅಲ್ಲದೇ, ಅಮೂಲ್ಯ ಜೋಡಿಯ ಜೊತೆ ಸೆಲ್ಫಿ ಕ್ಲಿಕ್ ಮಾಡಿ ಖುಷಿ ಪಟ್ಟರು.

ದರ್ಶನ್ ಪತ್ನಿ ವಿಜಯಲಕ್ಷ್ಮಿ

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಪತ್ನಿ ವಿಜಯಲಕ್ಷ್ಮಿ ಅವರು ಕೂಡ ಅಮೂಲ್ಯ-ಜಗದೀಶ್ ನಿಶ್ಚಿತಾರ್ಥದಲ್ಲಿ ಭಾಗವಹಿಸಿ, ನೂತನ ಜೋಡಿಗೆ ಶುಭ ಹಾರೈಸಿದರು.

ಪ್ರಿಯಾಂಕಾ ಉಪೇಂದ್ರ

ಅಮೂಲ್ಯ ಅವರ ನಿಶ್ಚಿತಾರ್ಥಕ್ಕೆ ರಿಯಲ್ ಸ್ಟಾರ್ ಉಪೇಂದ್ರ ಅವರ ಪತ್ನಿ ಹಾಗೂ ನಟಿ ಪ್ರಿಯಾಂಕಾ ಉಪೇಂದ್ರ ಅವರು ಆಗಮಿಸಿದ್ದರು.

ನಟಿ ಮಾಳವಿಕಾ ಭಾಗಿ

ನಟಿ ಮಾಳವಿಕಾ ಅವಿನಾಶ್ ಅಮೂಲ್ಯ-ಜಗದೀಶ್ ಅವರ ನಿಶ್ಚಿತಾರ್ಥಕ್ಕೆ ಸಾಕ್ಷಿಯಾಗಿದ್ದರು.

ರಚಿತಾ ರಾಮ್

'ಅಮ್ಮು-ಜಗ್ಗಿ' ಎಂಗೇಜ್ ಮೆಂಟ್ ಫಂಕ್ಷನ್ ನಲ್ಲಿ ಬುಲ್ ಬುಲ್ ನಟಿ ರಚಿತಾ ರಾಮ್ ಕೂಡ ಪಾಲ್ಗೊಂಡಿದ್ದರು.

English summary
Kannada Actress Amulya has tied knot with Jagdeesh on March 6th in Sri sai palace Bengaluru. Check out the Engagement Photo Album here.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada