»   » 'ಅಮೂಲ್ಯ-ಜಗದೀಶ್' ಮದುವೆಗೆ ಯಾರೆಲ್ಲ ಕಲಾವಿದರು ಆಗಮಿಸಲಿದ್ದಾರೆ?

'ಅಮೂಲ್ಯ-ಜಗದೀಶ್' ಮದುವೆಗೆ ಯಾರೆಲ್ಲ ಕಲಾವಿದರು ಆಗಮಿಸಲಿದ್ದಾರೆ?

Posted By:
Subscribe to Filmibeat Kannada

ಅಮೂಲ್ಯ ಹಾಗೂ ಜಗದೀಶ್ ಅವರ ಮದುವೆಗೆ ಕೆಲವೇ ದಿನಗಳು ಬಾಕಿಯಿದ್ದು, ಈಗಾಗಲೇ ಎರಡು ಕುಟುಂಬಗಳು ಶಾಸ್ತ್ರ, ಸಂಪ್ರದಾಯಗಳಲ್ಲಿ ತೊಡಗಿಸಿಕೊಂಡಿದ್ದಾರೆ.

ಮತ್ತೊಂದೆಡೆ ನಟಿ ಅಮೂಲ್ಯ ತಮ್ಮ ಮದುವೆಯ ಆಮಂತ್ರಣ ಪತ್ರಿಕೆಯನ್ನ ಕೈಯಲ್ಲಿ ಹಿಡಿದು, ಚಲನಚಿತ್ರ ತಾರೆಯರನ್ನ, ರಾಜಕೀಯ ಗಣ್ಯರನ್ನ ತಮ್ಮ ಮದುವೆಗೆ ಆಹ್ವಾನಿಸುತ್ತಿದ್ದಾರೆ.[ಅಮೂಲ್ಯ ಮದುವೆಗೆ ಮುಂಚೆ ಶಿಲ್ಪಾ ಗಣೇಶ್ ಕೊಡ್ತಿರುವ ಗಿಫ್ಟ್!]

ಹಾಗಾದ್ರೆ, ಅಮೂಲ್ಯ ಅವರು ಯಾರೆಲ್ಲ ಕಲಾವಿದರಿಗೆ ತಮ್ಮ ಮದುವೆಯ ಮಮತೆಯ ಕರೆಯೋಲೆಯನ್ನ ನೀಡಿದ್ದಾರೆ. ಯಾರೆಲ್ಲ ಅಮೂಲ್ಯ ಮದುವೆಗೆ ಬರಲಿದ್ದಾರೆ ಎಂದು ಮುಂದೆ ಚಿತ್ರಗಳ ಸಮೇತ ನೋಡಿ......

ಶಿವಣ್ಣ ದಂಪತಿಗೆ ಆಹ್ವಾನ

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ದಂಪತಿಗೆ ಬೇಬಿ ಡಾಲ್ ಅಮೂಲ್ಯ ತಮ್ಮ ವಿವಾಹಕ್ಕೆ ಆಗಮಿಸುವಂತೆ ಪ್ರೀತಿಯ ಆಹ್ವಾನ ನೀಡಿದ್ದಾರೆ.[ಅಮೂಲ್ಯ-ಜಗದೀಶ್ ಮದುವೆ ದಿನಾಂಕ ಫಿಕ್ಸ್, ಮದುವೆ ಎಲ್ಲಿ?]

ಯಶ್ ದಂಪತಿಗೆ ಕರೆಯೋಲೆ

ತಮ್ಮ ಮದುವೆಗೆ ಬಂದು ಹಾರೈಸುವಂತೆ, ರಾಕಿಂಗ್ ಸ್ಟಾರ್ ಯಶ್ ಮತ್ತು ಸ್ಯಾಂಡಲ್ ವುಡ್ ಪ್ರಿನ್ಸಸ್ ರಾಧಿಕಾ ಪಂಡಿತ್ ದಂಪತಿಗೂ ಅಮೂಲ್ಯ ಆಹ್ವಾನಿಸಿದ್ದಾರೆ.[ಚಿತ್ರಗಳು: 'ಅಮೂಲ್ಯ-ಜಗದೀಶ್' ನಿಶ್ಚಿತಾರ್ಥದಲ್ಲಿ ತಾರೆಯರ ಸೆಲ್ಫಿ ಸಂಭ್ರಮ]

ಅಜಯ್ ರಾವ್ ದಂಪತಿ

ಕೃಷ್ಣ ಖ್ಯಾತಿಯ ನಟ ಅಜಯ್ ರಾವ್ ಅವರ ಮನೆಗೆ ಭೇಟಿ ನೀಡಿದ ಅಮೂಲ್ಯ, ತಮ್ಮ ಮದುವೆಗೆ ಬರುವಂತೆ ಆಮಂತ್ರಣ ನೀಡಿದ್ದಾರೆ.

ದಿನಕರ್ ತೂಗುದೀಪ ದಂಪತಿ

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಸಹೋದರ ದಿನಕರ್ ತೂಗುದೀಪ ದಂಪತಿಗೆ ಅಮೂಲ್ಯ ಮದುವೆಯ ಮಮತೆಯ ಕರೆಯೋಲೆ ನೀಡಿದ್ದಾರೆ.[ನಟಿ ಅಮೂಲ್ಯ-ಜಗದೀಶ್ ಜೋಡಿಯ ನಿಶ್ಚಿತಾರ್ಥ ಸಂಭ್ರಮ]

ಚಿತ್ರಕೃಪೆ: ತೂಗುದೀಪ ಗ್ರೂಪ್ಸ್

ಪ್ರೇಮ್ ದಂಪತಿ

ಲವ್ಲಿ ಸ್ಟಾರ್ ಪ್ರೇಮ್ ಮನೆಗೆ ಭೇಟಿ ನೀಡಿದ್ದ ಅಮೂಲ್ಯ, ತಮ್ಮ ಮದುವೆಗೆ ಬಂದು ಹಾರೈಸುವಂತೆ ಪ್ರೇಮ್ ದಂಪತಿಗೆ ಮದುವೆಯ ಆಮಂತ್ರಣ ನೀಡಿದ್ದಾರೆ.[ಮದುವೆಗೂ ಮುನ್ನ 'ಕೊನೆ' ಪಾರ್ಟಿ ಮಾಡಿ ಖುಷಿ ಪಟ್ಟ ಅಮೂಲ್ಯ.!]

ಗೋಲ್ಡನ್ ಸ್ಟಾರ್ ದಂಪತಿ

ಇನ್ನು ಗೋಲ್ಡನ್ ಸ್ಟಾರ್ ಗಣೇಶ್ ಮತ್ತು ಶಿಲ್ಪಾ ಗಣೇಶ್ ದಂಪತಿಗೆ ಮೆನೆಗೆ ಕುಟುಂಬ ಸಮೇತವಾಗಿ ಹೋಗಿದ್ದ ಅಮೂಲ್ಯ ಮದುವೆಗೆ ಸಾಕ್ಷಿಯಾಗಬೇಕೆಂದು ಆಮಂತ್ರಣ ನೀಡಿದ್ದಾರೆ.[ಗಣೇಶ್ ಹಾಗೂ ಶಿಲ್ಪಾ ಗಣೇಶ್ ಗೆ 'ಥ್ಯಾಂಕ್ಸ್' ಹೇಳಿದ ನಟಿ ಅಮೂಲ್ಯ]

ಶ್ರೀ ನಿರ್ಮಲಾನಂದನಾಥ ಸ್ವಾಮೀಜಿಗೆ ಆಮಂತ್ರಣ

ಗೋಲ್ಡನ್ ಜೋಡಿ ಅಮೂಲ್ಯ ಮತ್ತು ಜಗದೀಶ್ ರವರು ಆದಿಚುಂಚನಗಿರಿ ಮಠದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿಗಳಿಗೆ 'ಮದುವೆಯ ಆಹ್ವಾನ' ನೀಡಿದ್ದಾರೆ.[ಅಜಯ್ ರಾವ್ ಗೆ 'ಅಮೂಲ್ಯ-ಜಗದೀಶ್' ಮದುವೆ ಕರೆಯೋಲೆ]

ಸ್ಯಾಂಡಲ್ ವುಡ್ ತಾರೆಯರಿಗೆ ಆಹ್ವಾನ!

ಇವರಷ್ಟೇ ಅಲ್ಲದೇ ಇನ್ನು ಅನೇಕ ಕಲಾವಿದರಿಗೆ ಅಮೂಲ್ಯ ಮತ್ತು ಜಗದೀಶ್ ಜೋಡಿ ಆಮಂತ್ರಣ ಪತ್ರಿಕೆ ನೀಡಿದ್ದಾರೆ. ಚಿತ್ರರಂಗದ ಗಣ್ಯರು, ರಾಜಕೀಯ ಗಣ್ಯರು ಹಾಗೂ ಕುಟುಂಬಸ್ಥರು, ಸ್ನೇಹಿತರು ಈ ಮದುವೆಯಲ್ಲಿ ಭಾಗಿಯಾಗಲಿದ್ದಾರೆ.

ಮದುವೆ ಯಾವಾಗ ಮತ್ತು ಎಲ್ಲಿ?

ಅಮೂಲ್ಯ ಮತ್ತು ಜಗದೀಶ್ ರವರು ಮೇ ತಿಂಗಳ 12 ರಂದು ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ಆದಿಚುಂಚನಗಿರಿ ಕ್ಷೇತ್ರದ ಕಾಲಭೈರವೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಅಮೂಲ್ಯ ಮತ್ತು ಜಗದೀಶ್ ರವರ ವಿವಾಹ ನೆರವೇರಲಿದೆ. ಅಲ್ಲದೇ ಮದುವೆ ನಂತರ ಚಿತ್ರರಂಗದ ಗಣ್ಯರಿಗಾಗಿ ರಾಜರಾಜೇಶ್ವರಿ ನಗರದ ಕಲ್ಯಾಣ ಮಂಟಪವೊಂದರಲ್ಲಿ ಆರತಕ್ಷತೆ ಏರ್ಪಡಿಸಲಾಗಿದೆ.

English summary
Kannada Actress Amulya inviting to all Sandalwood Stars for his marriage with Jagadish. The wedding is scheduled on May 8th at Adichunchanagiri

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada