»   » ಅಮೂಲ್ಯಗೆ ಉಡುಗೊರೆಯಾಗಿ ಬಂತು 'ರೈತ ಗಣೇಶ'

ಅಮೂಲ್ಯಗೆ ಉಡುಗೊರೆಯಾಗಿ ಬಂತು 'ರೈತ ಗಣೇಶ'

Posted By:
Subscribe to Filmibeat Kannada

ದೇಶದಾದ್ಯಂತ ಗೌರಿ-ಗಣೇಶ ಹಬ್ಬಕ್ಕೆ ಸಿದ್ದತೆ ನಡೆಯುತ್ತಿದ್ದು, ನಟಿ ಅಮೂಲ್ಯ ಅವರ ಮನೆಯಲ್ಲೂ ಹಬ್ಬದ ತಯಾರಿ ಜೋರಾಗಿದೆ. ಈ ಬಾರಿಯ ಗೌರಿ-ಗಣೇಶವನ್ನ ಅಮೂಲ್ಯ ಅವರು ತಮ್ಮ ಗಂಡನ ಮನೆಯಲ್ಲಿ ಆಚರಿಸುತ್ತಿದ್ದು, ಅದಕ್ಕಾಗಿ ತಯಾರಾಗುತ್ತಿದ್ದಾರೆ.

ವಿಶೇಷ ಅಂದ್ರೆ ಅಮೂಲ್ಯ ಹಾಗೂ ಜಗದೀಶ್ ಅವರಿಗೆ ಮಂಡ್ಯದ ರೈತರೊಬ್ಬರು 'ರೈತ ಗಣೇಶ'ನನ್ನ ಉಡುಗೊರೆಯಾಗಿ ನೀಡಿದ್ದಾರೆ. ಇದೇ ಗಣೇಶನನ್ನ ತಮ್ಮ ಮನೆಯಲ್ಲಿ ಅಮೂಲ್ಯ ಹಾಗೂ ಜಗದೀಶ್ ಅವರು ಕೂರಿಸಲಿದ್ದಾರೆ.

Actress Amulya received Raita Ganesh Gift

ಅಂದ್ಹಾಗೆ, ಈ ಗಣೇಶನನ್ನ ತಯಾರು ಮಾಡಿರುವುದು ಮಂಡ್ಯ ಮೂಲದ ಮಹೇಶ್. ದಿನನಿತ್ಯ ವ್ಯವಸಾಯ ಮಾಡುವ ಮಹೇಶ್, ಸಂಜೆ ವೇಳೆ ಈ ರೀತಿಯ ಗಣೇಶನ ಮೂರ್ತಿಯನ್ನ ತಯಾರಿಸುತ್ತಾರಂತೆ.

ಇನ್ನು ಎಲ್ಲ ಅಭಿಮಾನಿಗಳಿಗೂ ಅಮೂಲ್ಯ-ಜಗದೀಶ್ ಜೋಡಿ ಗೌರಿ-ಗಣೇಶ್ ಹಬ್ಬದ ಶುಭಾಶಯ ಕೋರಿದ್ದು, ಪರಿಸರ ಸ್ನೇಹಿ ಗಣೇಶನನ್ನ ಕೂರಿಸಿ ಎಂದು ವಿನಂತಿಸಿಕೊಂಡಿದ್ದಾರೆ.

Amulya Received Raitha Ganesh From Mandya Former | FIlmibeat Kannada
English summary
Actress Amulya received 'Raita Ganesh' Gift from Mandya Farmer Mahesh

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada