»   » ಐಸ್ ಕ್ರೀಂ ತಿನ್ನುತ್ತಿದ್ದ ಟಪೋರಿ ಅಮೂಲ್ಯ 'ಪ್ರೇತಾತ್ಮ'ವಾದಾಗ

ಐಸ್ ಕ್ರೀಂ ತಿನ್ನುತ್ತಿದ್ದ ಟಪೋರಿ ಅಮೂಲ್ಯ 'ಪ್ರೇತಾತ್ಮ'ವಾದಾಗ

Posted By:
Subscribe to Filmibeat Kannada

ಗೋಲ್ಡನ್ ಕ್ವೀನ್ ಅಮೂಲ್ಯ ಅವರು ಇಲ್ಲಿಯವರೆಗೆ ಮಾಡಿರುವ ಎಲ್ಲಾ ಸಿನಿಮಾಗಳಲ್ಲಿ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಮೊದ-ಮೊದಲು ಮುದ್ದಾಗಿ ಪುಟ್ಟ ಹುಡುಗಿಯಂತೆ ತೆರೆ ಮೇಲೆ ನಟಿಸುತ್ತಿದ್ದ ಅಮೂಲ್ಯ ಅವರು ನಂತರದ ಸಿನಿಮಾಗಳಲ್ಲಿ ಗ್ಲಾಮರ್ ಬೊಂಬೆಯಾಗಿ, ಟಪೋರಿ, ಬಜಾರಿ ಪಾತ್ರಗಳಲ್ಲಿ ಮಿಂಚಲಾರಂಭಿಸಿದರು.

ಇತ್ತೀಚೆಗೆ ಬಂದ 'ಮದುವೆಯ ಮಮತೆಯ ಕರೆಯೋಲೆ', 'ರಾಮ್ ಲೀಲಾ', 'ಮಳೆ', 'ಕೃಷ್ಣ ರುಕ್ಕು' ಮುಂತಾದ ಸಿನಿಮಾಗಳಲ್ಲಿ ಮಾರ್ಡನ್ ಮಂಜುಳಾ ಥರ ಕಾಣಿಸಿಕೊಂಡು, ತಮ್ಮ ಅಭಿಮಾನಿಗಳನ್ನು ರಂಜಿಸಿದರು.


ಇದೀಗ ಮತ್ತೆ 'ಮಾಸ್ತಿ ಗುಡಿ' ಚಿತ್ರದಲ್ಲಿ ವಿಭಿನ್ನ ಪಾತ್ರದಲ್ಲಿ ಮಿಂಚುವ ಮೂಲಕ, ಗೋಲ್ಡನ್ ಕ್ವೀನ್ ಅಮೂಲ್ಯ ಅವರು ತಮ್ಮ ಅಭಿಮಾನಿಗಳನ್ನು ರಂಜಿಸಲು ತಯಾರಾಗಿದ್ದಾರೆ.


ನಾಗಶೇಖರ್ ಅವರು ನಿರ್ದೇಶನ ಮಾಡುತ್ತಿರುವ ವಿಭಿನ್ನ ಕಥಾಹಂದರ ಹೊಂದಿರುವ 'ಮಾಸ್ತಿ ಗುಡಿ' ಚಿತ್ರದಲ್ಲಿ ನಟ ದುನಿಯಾ ವಿಜಯ್, ನಟಿ ಕೃತಿ ಖರಬಂದ, ನಟ ಅನಿಲ್, ನಟ ದೇವರಾಜ್, ಅರವಿಂದ್, ಸುಹಾಸಿನಿ ಮುಂತಾದವರು ಪ್ರಮುಖ ಪಾತ್ರ ವಹಿಸಿದ್ದಾರೆ.


ಅಮೂಲ್ಯ ಅವರ ವಿಭಿನ್ನ ಗೆಟಪ್, ಹಾಗೂ 'ಮಾಸ್ತಿ ಗುಡಿ' ಚಿತ್ರದಲ್ಲಿ ಅವರ ಪಾತ್ರದ ಬಗ್ಗೆ ಸಣ್ಣ ಝಲಕ್, ನೋಡಿ ಕೆಳಗಿರುವ ಸ್ಲೈಡ್ಸ್ ಗಳಲ್ಲಿ....


ರೆಟ್ರೋ ಲುಕ್ ನಲ್ಲಿ ಅಮೂಲ್ಯ

ಇತ್ತೀಚೆಗೆ ಹೆಚ್ಚಿನ ಸಿನಿಮಾಗಳಲ್ಲಿ ರೆಟ್ರೋ ಲುಕ್ ಟ್ರೆಂಡ್ ಆಗಿದೆ. ಆದ್ದರಿಂದ ನಿರ್ದೇಶಕ ನಾಗಶೇಖರ್ ಅವರು ಕೂಡ 'ಮಾಸ್ತಿ ಗುಡಿ' ಚಿತ್ರದಲ್ಲಿ, ನಟಿ ಅಮೂಲ್ಯ ಅವರಿಗೆ ಎಂಬತ್ತರ ದಶಕದ ಹುಡುಗಿಯ ಲುಕ್ ಕೊಟ್ಟು ಭಾರಿ ಕುತೂಹಲ ಮೂಡಿಸಿದ್ದಾರೆ.


ಲಂಗ-ದಾವಣಿಯಲ್ಲಿ ಅಮ್ಮು

ಅಭಿಮಾನಿಗಳ ಮೆಚ್ಚಿನ ಬೇಬಿ ಡಾಲ್ ಅಮೂಲ್ಯ ಅವರು ಈ ಚಿತ್ರದಲ್ಲಿ ಪಕ್ಕಾ ಹಳ್ಳಿ ಹುಡುಗಿಯಾಗಿ, ಲಂಗ-ದಾವಣಿ ಧರಿಸಿ ಮಿಂಚಿದ್ದಾರೆ. ಇದಕ್ಕೆ ಅಮೂಲ್ಯ ಅವರು ಕೂಡ ಸಾಕಷ್ಟು ತಯಾರಿ ನಡೆಸಿದ್ದಾರಂತೆ.


ದೆವ್ವವಾಗುವ ಅಮೂಲ್ಯ

ಈ ಚಿತ್ರದಲ್ಲಿ ಅಮೂಲ್ಯ ಅವರು ದೆವ್ವವಾಗಿ ಕಾಡಲಿದ್ದಾರೆ. ಇಷ್ಟು ದಿನ ಅಮೂಲ್ ಬೇಬಿ ತರ ಐಸ್ ಕ್ರೀಂ, ಚಾಕ್ಲೇಟ್ ತಿನ್ನುತ್ತಿದ್ದ ಬೇಬಿ ಡಾಲ್ ಅಮೂಲ್ಯ ಅವರು, 'ಮಾಸ್ತಿ ಗುಡಿ' ಚಿತ್ರದಲ್ಲಿ ಭಯಂಕರ ದೆವ್ವವಾಗಿ ಕಾಣಿಸಿಕೊಳ್ಳಲಿದ್ದಾರೆ.


ಕೃತಿ ಖರಬಂದಗೆ ಪ್ರೇತದ ಕಾಟ

ನಟಿ ಕೃತಿ ಅವರಿಗೆ ಬಾಲಿವುಡ್ ನ 'ರಾಜ್ ರಿಬೂಟ್' ಚಿತ್ರದಲ್ಲಿ ದೆವ್ವದ ಕಾಟ ಕಾಣಿಸಿಕೊಂಡ ಬೆನ್ನಲ್ಲೆ, ಇದೀಗ 'ಮಾಸ್ತಿ ಗುಡಿ' ಚಿತ್ರದಲ್ಲೂ ಪ್ರೇತ ಬೆನ್ನತ್ತಲಿದೆ. ಈ ಚಿತ್ರದಲ್ಲಿ ಕೃತಿ ಖರಬಂದ ಅವರನ್ನು ಕಾಡಲಿರುವುದು ಮುದ್ದು ಹುಡುಗಿ ಅಮೂಲ್ಯ. ಅಮೂಲ್ಯ ಅವರ ಆತ್ಮ ಕೃತಿ ಖರಬಂದ ಅವರ ದೇಹವನ್ನು ಸೇರಿಕೊಳ್ಳಲಿದೆಯಂತೆ. ಆದ್ದರಿಂದ ಕೃತಿ ಅವರು ತಮ್ಮ ಪಾತ್ರವನ್ನು ನಿರ್ವಹಿಸಲು ಸಜ್ಜಾಗಿದ್ದಾರೆ.


ಸಂಪೂರ್ಣ ಬದಲಾದ ಅಮೂಲ್ಯ

ಈ ಚಿತ್ರಕ್ಕಾಗಿ ಅಮೂಲ್ಯ ಅವರು ಸಂಪೂರ್ಣ ಬದಲಾಗಿದ್ದಾರೆ. ಇವರ ಪಾತ್ರ ಇಡೀ ಚಿತ್ರಕ್ಕೆ ಟ್ವಿಸ್ಟ್ ಕೊಡಲಿದೆ, ಜೊತೆಗೆ ವಿಚಿತ್ರ ಸನ್ನಿವೇಶವೊಂದು ಇವರ ಪಾತ್ರದಿಂದ ಎದುರಾಗಲಿದೆಯಂತೆ.


ಲೆನ್ಸ್ ಹಾಕಿದ ಅಮೂಲ್ಯ

ಇನ್ನು ಅಮೂಲ್ಯ ಅವರು ಮೊಟ್ಟ ಮೊದಲ ಬಾರಿಗೆ ವಿಶೇಷವಾಗಿ ಈ ಚಿತ್ರಕ್ಕೆ ಅಂತ ಬೆಕ್ಕಿನ ಕಣ್ಣನ್ನು ಹೋಲುವ ಲೆನ್ಸ್ ಹಾಕಿದ್ದಾರೆ. ಇದು ಅವರಿಗೆ ಇನ್ನೂ ವಿಶೇಷ ಲುಕ್ ಕೊಟ್ಟಿದೆ.


ವಿಶೇಷ ಹಾಡಿನ ಶೂಟಿಂಗ್ ಮುಗಿದಿದೆ

ಬಹುತೇಕ 'ಮಾಸ್ತಿ ಗುಡಿ' ಚಿತ್ರದ ಶೂಟಿಂಗ್ ಕೊನೆಯ ಹಂತಕ್ಕೆ ತಲುಪಿದ್ದು, ದುನಿಯಾ ವಿಜಯ್ ಮತ್ತು ಅಮೂಲ್ಯ ಅವರ ರೋಮ್ಯಾಂಟಿಕ್ ಹಾಡನ್ನು ಕೂಡ ಈಗಾಗಲೇ ಶೂಟ್ ಮಾಡಿ ಮುಗಿಸಿದ್ದಾರೆ. ಈ ಹಾಡಿನಲ್ಲಿ ಅಮೂಲ್ಯ ಕಂಪ್ಲೀಟ್ ರೆಟ್ರೋ ಲುಕ್ ನಲ್ಲಿ ಮಿಂಚಿದ್ದಾರೆ. ಕಂಠೀರವ ಸ್ಟುಡಿಯೋದಲ್ಲಿ ಈ ಹಾಡಿಗೆ ವಿಶೇಷ ಸೆಟ್ ಹಾಕಲಾಗಿತ್ತು. ರೋಮ್ಯಾಂಟಿಕ್ ಜೊತೆಗೆ ಈ ಹಾಡು ಆತ್ಮಗಳ ಸಾಂಗತ್ಯವನ್ನು ಕೂಡ ಹೇಳುತ್ತಾ ಹೋಗಿದೆ. ಒಟ್ನಲ್ಲಿ ಸಖತ್ ಥ್ರಿಲ್ಲಿಂಗ್ ಆಗುವ ಹಾಡು ಇದಾಗಿದೆ.


ಹಾರರ್ ಚಿತ್ರವಲ್ಲ

ಪ್ರೇತದ ವಿಚಾರಕ್ಕೆ ಬಂದಾಗ ಇದು ಹಾರರ್ ಸಿನಿಮಾ ಅಂತ ಅಂದುಕೊಳ್ಳಬೇಡಿ. ನಿಜ ಕಥೆಯಾಧರಿತ 'ಮಾಸ್ತಿ ಗುಡಿ' ಹಾರರ್ ಜೊತೆಗೆ ಪಕ್ಕಾ ಕಮರ್ಷಿಯಲ್ ಸಿನಿಮಾ ಅನ್ನೋದು ನಿರ್ದೇಶಕ ನಾಗಶೇಖರ್ ಅವರ ಅಭಿಪ್ರಾಯ.


English summary
Kannada Actor Duniya Vijay, Actress Amulya and Actress Kriti Kharbanda-starrer Kannada Movie 'Maasti Gudi' is on the last duration of its shoot. Actress Amulya’s look in the film is something inspired by the 80s. Amulya will be sporting a grey eye lens for the first time.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada