For Quick Alerts
  ALLOW NOTIFICATIONS  
  For Daily Alerts

  ಕೊನೆಗೂ 'ವಿಲನ್' ಅಡ್ಡಾದಲ್ಲಿ ಪ್ರತ್ಯಕ್ಷವಾದ ಆಮಿ ಜಾಕ್ಸನ್

  By Naveen
  |

  'ದಿ ವಿಲನ್' ಸಿನಿಮಾದಲ್ಲಿ ನಟಿ ಆಮಿ ಜಾಕ್ಸನ್ ಅಭಿನಯಿಸಲಿದ್ದಾರೆ ಎಂಬ ಸುದ್ದಿ ಜೋರಾಗಿತ್ತು. ಅದೇ ರೀತಿ ಈಗ ಆಮಿ ಜಾಕ್ಸನ್ 'ದಿ ವಿಲನ್' ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಸದ್ಯ, ವಿಲನ್ ಚಿತ್ರದ ಶೂಟಿಂಗ್ ಸೆಟ್ ಗೆ ಬಂದಿಳಿದಿರುವ ಆಮಿ ಜಾಕ್ಸನ್ ಫೋಟೋ ಈಗ ಹೊರ ಬಿದ್ದಿದೆ.

  ಈಗಾಗಲೇ ಸಾಕಷ್ಟು ವಿಷಯಗಳಿಗೆ ಸುದ್ದಿ ಮಾಡಿರುವ 'ದಿ ವಿಲನ್' ಸಿನಿಮಾ ಹೀರೋಯಿನ್ ವಿಚಾರಕ್ಕೆ ದೊಡ್ಡ ಮಟ್ಟದ ಸದ್ದು ಮಾಡಿತ್ತು. ಅಂತಿಮವಾಗಿ ಚಿತ್ರದಲ್ಲಿ ಆಮಿ ಜಾಕ್ಸನ್ ನಟಿಸುವ ಮೂಲಕ ಕನ್ನಡಕ್ಕೆ ಕಾಲಿಟ್ಟಿದ್ದಾರೆ. ಪ್ರೇಮ್ ನಿರ್ದೇಶನದಲ್ಲಿ ಆಮಿ ಜಾಕ್ಸನ್ ನಟಿಸುತ್ತಿದ್ದಾರೆ.

  ಇದೇ ಕಾರಣಕ್ಕೆ ನೋಡಿ ಕಿಚ್ಚ ಸುದೀಪ್ ಅಂದ್ರೆ ಪ್ರೇಮ್ ಗೆ ಬಲು'ಪ್ರಿಯ'.!

  ರಿಲೀಸ್ ಆಗಿರುವ ಮೇಕಿಂಗ್ ಫೋಟೋ ಮಾತ್ರವಲ್ಲದೆ ಆಮಿ ಜಾಕ್ಸನ್ ಚಿತ್ರದಲ್ಲಿ ಯಾರ ಜೋಡಿ ಎಂಬ ವಿಷಯ ಸಹ ಬಹಿರಂಗವಾಗಿದೆ. ಮುಂದೆ ಓದಿ..

  'ದಿ ವಿಲನ್' ಅಡ್ಡಾದಲ್ಲಿ ಆಮಿ ಜಾಕ್ಸನ್

  'ದಿ ವಿಲನ್' ಅಡ್ಡಾದಲ್ಲಿ ಆಮಿ ಜಾಕ್ಸನ್

  'ದಿ ವಿಲನ್' ತಂಡವನ್ನು ಈಗ ನಟಿ ಆಮಿ ಜಾಕ್ಸನ್ ಸೇರಿಕೊಂಡಿದ್ದಾರೆ. ಶೂಟಿಂಗ್ ನಲ್ಲಿ ಭಾಗಿಯಾಗಿರುವ ಅವರ ಮೇಕಿಂಗ್ ಫೋಟೋವೊಂದು ಈಗ ರಿವಿಲ್ ಆಗಿದೆ.

  ಕಿಚ್ಚನ ಜೋಡಿ

  ಕಿಚ್ಚನ ಜೋಡಿ

  ಶಿವಣ್ಣ ಮತ್ತು ಸುದೀಪ್ ಇಬ್ಬರ ಪೈಕಿ ಆಮಿ ಜಾಕ್ಸನ್ ಯಾರ ಜೋಡಿ ಎಂಬ ಕುತೂಹಲಕ್ಕೆ ಈಗ ಬ್ರೇಕ್ ಬಿದ್ದಿದೆ. ಚಿತ್ರದಲ್ಲಿ ಸುದೀಪ್ ಜೋಡಿಯಾಗಿ ಆಮಿ ಜಾಕ್ಸನ್ ಕಾಣಿಸಿಕೊಳ್ಳಲಿದ್ದಾರಂತೆ.

  ಕಿಚ್ಚ ಸುದೀಪ್-ಪ್ರೇಮ್ ಸೆಲ್ಫಿ ಹಿಂದೆ ಇರೋ ವಿಷ್ಯನೇ ಬೇರೆ .!

  ಬ್ಯಾಂಕಾಕ್ ನಲ್ಲಿ ಶೂಟಿಂಗ್

  ಬ್ಯಾಂಕಾಕ್ ನಲ್ಲಿ ಶೂಟಿಂಗ್

  ಕಳೆದ ವಾರದಿಂದ ಬ್ಯಾಂಕಾಕ್ ನಲ್ಲಿ ಬೀಡು ಬಿಟ್ಟಿರುವ ನಿರ್ದೇಶನ ಪ್ರೇಮ್ ಮತ್ತು ನಟ ಸುದೀಪ್ ಭರ್ಜರಿಯಾಗಿ ಶೂಟಿಂಗ್ ಮಾಡುತ್ತಿದ್ದಾರೆ. ಸದ್ಯಕ್ಕೆ ಆಮಿ ಜಾಕ್ಸನ್ ಮತ್ತು ಸುದೀಪ್ ಅವರ ಭಾಗದ ಚಿತ್ರೀಕರಣಗಳು ಅಲ್ಲಿ ನಡೆಯುತ್ತಿದೆ.

  ಮೋಜು - ಮಸ್ತಿ

  ಮೋಜು - ಮಸ್ತಿ

  ಶೂಟಿಂಗ್ ಬಿಡುವಿನ ವೇಳೆ ಬ್ಯಾಂಕಾಕ್ ನಲ್ಲಿ ಮೋಜು ಮಸ್ತಿ ಮಾಡಿದ ಪ್ರೇಮ್ ಮತ್ತು ಸುದೀಪ್ ತಮ್ಮ ಸಂತೋಷದ ಕ್ಷಣಗಳನ್ನು ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದರು.

  ಸುದೀಪ್ 'ವಿಲನ್' ಹೇರ್ ಸ್ಟೈಲ್ ಕಾಪಿ ಮಾಡಿದ್ರಾ ಬಾಲಿವುಡ್ ನಟ?

  ಸುದೀಪ್ ಜೊತೆ ತಿಲಕ್

  ಸುದೀಪ್ ಜೊತೆ ತಿಲಕ್

  ಬ್ಯಾಂಕಾಕ್ ನಲ್ಲಿರುವ ಸುದೀಪ್ ಅವರನ್ನು ನಟ ತಿಲಕ್ ಮತ್ತು ಸುದೀಪ್ ಆಪ್ತರು ಭೇಟಿ ಮಾಡಿ ಸೆಲ್ಫಿ ಕ್ಲಿಕ್ಕಿಸಿ ಖುಷಿ ಪಟ್ಟಿದ್ದಾರೆ.

  ಶಿವಣ್ಣ ಸಹ ಭಾಗಿಯಾಗುತ್ತಾರೆ

  ಶಿವಣ್ಣ ಸಹ ಭಾಗಿಯಾಗುತ್ತಾರೆ

  'ಲೀಡರ್' ಸಿನಿಮಾದ ಶೂಟಿಂಗ್ ನಲ್ಲಿ ಬ್ಯುಸಿ ಇದ್ದ ಶಿವಣ್ಣ 'ದಿ ವಿಲನ್' ಚಿತ್ರದ ಚಿತ್ರೀಕರಣಕ್ಕಾಗಿ ಸದ್ಯದಲ್ಲೇ ಬ್ಯಾಂಕಾಕ್ ಗೆ ಹಾರಲಿದ್ದಾರೆ.

  English summary
  Actress Amy Jackson joined 'The Villain' team. Amy had liked the script and making her Sandalwood debut with Prem’s directorial.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X