»   » 'ಚಕ್ರವರ್ತಿ'ಯಿಂದ ನಾಯಕಿ ಅಂಜಲಿ ಕಿಕ್ ಔಟ್.! ಅಸಲಿ ಕಾರಣ ಬಹಿರಂಗ.!

'ಚಕ್ರವರ್ತಿ'ಯಿಂದ ನಾಯಕಿ ಅಂಜಲಿ ಕಿಕ್ ಔಟ್.! ಅಸಲಿ ಕಾರಣ ಬಹಿರಂಗ.!

Posted By:
Subscribe to Filmibeat Kannada

'ಜಗ್ಗು ದಾದಾ' ಸಿನಿಮಾ ನಂತರ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯಿಸುತ್ತಿರುವ ಸಿನಿಮಾ ಎಂಬ ಕಾರಣಕ್ಕೆ 'ಚಕ್ರವರ್ತಿ' ಟಾಕ್ ಆಫ್ ದಿ ಟೌನ್ ಆಗಿದೆ.

ಮೊನ್ನೆ ಸೋಮವಾರವಷ್ಟೇ 'ಚಕ್ರವರ್ತಿ' ಚಿತ್ರದ ಮುಹೂರ್ತ ಸಮಾರಂಭ 'ಸಾಂಸ್ಕೃತಿಕ ನಗರಿ' ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಅದ್ಧೂರಿಯಾಗಿ ನೆರವೇರಿದೆ. ಮುಹೂರ್ತ ಮುಗಿದ ನಂತರ 'ಮಂಜಿನ ನಗರಿ' ಮಡಿಕೇರಿಯಲ್ಲಿ 'ಚಕ್ರವರ್ತಿ' ಚಿತ್ರದ ಶೂಟಿಂಗ್ ಕೂಡ ಪ್ರಾರಂಭವಾಗಿದೆ. ಇದೆಲ್ಲವೂ ನಿಮಗೆ ಗೊತ್ತಿರುವ ವಿಚಾರವೇ.


ಆದ್ರೆ, ಶೂಟಿಂಗ್ ಶುರುವಾದ ಮೊದಲ ದಿನವೇ 'ಚಕ್ರವರ್ತಿ' ಚಿತ್ರತಂಡದಿಂದ ನಾಯಕಿ ಅಂಜಲಿ ರವರನ್ನ ಕೈಬಿಡಲಾಗಿದೆ ಎಂಬುದು ಸದ್ಯದ ಬಿಗ್ ಬ್ರೇಕಿಂಗ್ ನ್ಯೂಸ್.! [ದರ್ಶನ್ ಅವರ 'ಚಕ್ರವರ್ತಿ' ಚಿತ್ರದ ನಾಯಕಿ ಇವರೇ]


ಅಷ್ಟಕ್ಕೂ ಈ ದಿಢೀರ್ ಬೆಳವಣಿಗೆಗೆ ಕಾರಣ ಏನು ಎಂಬುದರ ಸಂಪೂರ್ಣ ವಿವರ ನಿಮ್ಮ ಮುಂದೆ ಇಡ್ತಿದ್ದೀವಿ. ಕೆಳಗಿರುವ ಸ್ಲೈಡ್ ಗಳಲ್ಲಿ ಓದಿರಿ....


'ಚಕ್ರವರ್ತಿ' ಚಿತ್ರದಿಂದ ನಾಯಕಿ ಅಂಜಲಿ ಔಟ್.!

ಕಾಲಿವುಡ್ ಹಾಗೂ ಟಾಲಿವುಡ್ ನ ಖ್ಯಾತ ನಟಿ ಅಂಜಲಿ 'ಚಕ್ರವರ್ತಿ' ಚಿತ್ರದ ಮೂಲಕ ಮೊಟ್ಟ ಮೊದಲ ಬಾರಿಗೆ ದರ್ಶನ್ ಜೊತೆ ಡ್ಯುಯೆಟ್ ಹಾಡಬೇಕಿತ್ತು. ಆದ್ರೆ, 'ಚಕ್ರವರ್ತಿ' ಚಿತ್ರದ ಶೂಟಿಂಗ್ ಪ್ರಾರಂಭವಾದ ಮೊದಲ ದಿನವೇ ಅಂಜಲಿಗೆ ಗೇಟ್ ಪಾಸ್ ಸಿಕ್ಕಿದೆ. ಮುಂದಿನ ಸ್ಲೈಡ್ ಕ್ಲಿಕ್ಕಿಸಿ...


ಕಾರಣ ಏನು?

ನಟಿ ಅಂಜಲಿ ವೃತ್ತಿಪರ ಇಲ್ಲ ಎಂಬ ಮಾತು 'ಚಕ್ರವರ್ತಿ' ಚಿತ್ರತಂಡದಿಂದ ಕೇಳಿ ಬಂದಿದೆ. ಮಾಡುವ ಕೆಲಸದಲ್ಲಿ ಶ್ರದ್ಧೆ ಇಲ್ಲ ಎಂಬ ಕಾರಣಕ್ಕೆ 'ಚಕ್ರವರ್ತಿ' ಚಿತ್ರದಿಂದ ಅಂಜಲಿ ರವರನ್ನ ಡ್ರಾಪ್ ಮಾಡಲಾಗಿದೆ. [ಫೋಟೋಶೂಟ್: 'ಚಕ್ರವರ್ತಿ' ದರ್ಶನ್ ಗೆ ಸರಿಸಾಟಿ ಯಾರೂ ಇಲ್ಲ ಬಿಡಿ.!]


ನಟಿ ಅಂಜಲಿ ಏನು ಮಾಡಿದರು.?

'ಚಕ್ರವರ್ತಿ' ಮೊದಲ ದಿನದ ಶೂಟಿಂಗ್ ಗೆ ನಟಿ ಅಂಜಲಿ ತಡವಾಗಿ ಬಂದಿದ್ದಾರೆ. ಅಂಜಲಿ Attitude 'ಚಕ್ರವರ್ತಿ' ಚಿತ್ರತಂಡಕ್ಕೆ ಕಿರಿಕಿರಿ ಆಗಿದೆ. ಅಂಜಲಿಗೆ ಟೈಮ್ ಸೆನ್ಸ್ ಇಲ್ಲ ಎಂಬ ಆರೋಪ 'ಚಕ್ರವರ್ತಿ' ಅಡ್ಡದಿಂದ ಬಹಿರಂಗವಾಗಿದೆ. [ಚಾಮುಂಡಿ ತಾಯಿ ಸನ್ನಿಧಿಯಲ್ಲಿ ಬಾಕ್ಸಾಫೀಸ್ 'ಚಕ್ರವರ್ತಿ'ಗೆ ಪೂಜೆ]


ಈಗಲೇ ಹೀಗೆ ಆದ್ರೆ ಮುಂದೆ ಹೇಗೆ?

ಅಂಜಲಿ ಕಡೆಯಿಂದ ಕಮ್ಯೂನಿಕೇಷನ್ ಕೂಡ ಸರಿಯಾಗಿಲ್ಲ. ಡೇಟ್ಸ್ ವಿಚಾರವಾಗಿ ಅಂಜಲಿ ರವರಿಂದ ಈಗಾಗಲೇ ಡಿಲೇ ಆಗಿದೆ. ಈಗಲೇ ಹೀಗೆ ಆದರೆ, ಇಡೀ ಸಿನಿಮಾ ಮುಗಿಸುವುದು ಕಷ್ಟ ಎಂಬ ಕಾರಣಕ್ಕೆ ಅಂಜಲಿರವರನ್ನ 'ಚಕ್ರವರ್ತಿ' ಚಿತ್ರದಿಂದ ಕೈಬಿಡಲಾಗಿದೆ.


ಹೊಸ ಹೀರೋಯಿನ್ ಯಾರು?

ಬೇರೆ ಹೀರೋಯಿನ್ ಹುಡುಕಾಟದಲ್ಲಿ ಸದ್ಯ 'ಚಕ್ರವರ್ತಿ' ಚಿತ್ರದ ನಿರ್ಮಾಪಕರು ಹಾಗೂ ನಿರ್ದೇಶಕರು ತೊಡಗಿದ್ದಾರೆ. ಕೆಲವರ ಜೊತೆ ಮಾತುಕತೆಗೂ ಮುಂದಾಗಿದ್ದಾರೆ.


ಖ್ಯಾತ ನಟಿ ಬರ್ತಾರಾ?

ಅಂಜಲಿ ಜಾಗಕ್ಕೆ ದಕ್ಷಿಣ ಭಾರತದ ಖ್ಯಾತ ನಟಿ ಬರ್ತಾರಾ ಎಂಬ ಪ್ರಶ್ನೆಗೆ 'ಚಕ್ರವರ್ತಿ' ಚಿತ್ರತಂಡದಿಂದ ಉತ್ತರ ಇಲ್ಲ. 'ಇನ್ನೂ ಮಾತುಕತೆ ನಡೆಯುತ್ತಿದೆ' ಎಂಬುದನ್ನಷ್ಟೇ ಹೇಳುತ್ತಾರೆ.


ಅಂಜಲಿ ವಿವಾದ ಇದೇ ಮೊದಲಲ್ಲ.!

ಟೈಮ್ ಸೆನ್ಸ್ ವಿಚಾರವಾಗಿ ನಟಿ ಅಂಜಲಿ ಸುದ್ದಿ ಮಾಡುತ್ತಿರುವುದು ಇದೇ ಮೊದಲಲ್ಲ. ಈಗಾಗಲೇ ಕಾಲಿವುಡ್ ಹಾಗೂ ಟಾಲಿವುಡ್ ನಲ್ಲಿ ಅಂಜಲಿ ವರ್ತನೆ ಬಗ್ಗೆ ಬೇಸರ ವ್ಯಕ್ತಪಡಿಸಿರುವ ನಿರ್ದೇಶಕರು-ನಿರ್ಮಾಪಕರೂ ಇದ್ದಾರೆ.


ಹಾಗಾದ್ರೆ, ಶೂಟಿಂಗ್.?

ಸದ್ಯಕ್ಕೆ 'ಚಕ್ರವರ್ತಿ' ಶೂಟಿಂಗ್ ಗೆ ಬ್ರೇಕ್ ನೀಡಲಾಗಿದೆ. ಹತ್ತು ದಿನಗಳ ಬಳಿಕ ಮೊದಲ ಶೆಡ್ಯೂಲ್ ಶುರುವಾಗಲಿದೆ. ಅಷ್ಟರೊಳಗೆ ಹೊಸ ನಾಯಕಿ ಸಿಕ್ಕರೆ, ನಾವು ನಿಮಗೆ ತಿಳಿಸುತ್ತೇವೆ.


'ಚಕ್ರವರ್ತಿ' ಚಿತ್ರದ ಬಗ್ಗೆ....

ಅಂದ್ಹಾಗೆ, 'ಚಕ್ರವರ್ತಿ' ಚಿತ್ರಕ್ಕೆ ದರ್ಶನ್ ರವರ ಆಪ್ತರಾದ ಅಣಜಿ ನಾಗರಾಜ್ ನಿರ್ಮಾಪಕರು. ಸಂಭಾಷಣೆಕಾರ ಚಿಂತನ್ ಚೊಚ್ಚಲ ಬಾರಿಗೆ ನಿರ್ದೇಶನ ಮಾಡುತ್ತಿರುವ ಚಿತ್ರ ಇದು.


English summary
Actress Anjali came very late to the sets of Kannada Movie 'Chakravarthi' on the very first day itself. This has annoyed the whole team. After much discussions, The team has decided to drop Anjali from the project. 'Chakravarthi' features Chellenging Star Darshan in the lead. The movie is directed by Chintan, produced by Anaji Nagaraj.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada